ರೈಲ್ವೆ ಟಿಕೆಟ್ ಕಾಯ್ದಿರಿಸಲು ಕನ್ನಡದಲ್ಲಿ ಅರ್ಜಿ ಏಕಿಲ್ಲ?

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 19: ಎಲ್ಲ ರಾಜ್ಯಗಳ ಮೇಲೆ ಕೇಂದ್ರದಿಂದ ಹಿಂದಿ ಹೇರುವ ಪ್ರಯತ್ನ ನಡೆಯುತ್ತಿದೆ ಎಂಬುದು ಎಲ್ಲೆಡೆ ಕೇಳಿಬರುತ್ತಿರುವ ಆಕ್ಷೇಪ. ರಾಷ್ಟ್ರಪತಿ ಭವನದಲ್ಲಿ ಇನ್ನು ಮುಂದೆ ಹಿಂದಿಯಲ್ಲಷ್ಟೇ ಭಾಷಣ ಎಂಬ ಸುದ್ದಿ ನೀವು ಓದಿರ್ತೀರಿ. ಈ ಎಲ್ಲದರ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯ ಟಿಕೆಟ್ ಕಾಯ್ದಿರಿಸುವ ಅರ್ಜಿ ಕನ್ನಡದಲ್ಲೇ ಇರಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಟಿಕೆಟ್ ಕಾಯ್ದಿರಿಸುವ ಅರ್ಜಿಯಲ್ಲಿ ಕನ್ನಡಿಗರೊಬ್ಬರು ತಮ್ಮ ಮನದಾಳದ ಮಾತನ್ನು ಬರೆದಿದ್ದು, ಅದೀಗ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ. "ರೈಲ್ವೆ ಟಿಕೆಟ್ ನಲ್ಲಿ ಕನ್ನಡವಿಲ್ಲ. ಕನ್ನಡಿಗರಿಗೆ ಕನ್ನಡವಿಲ್ಲದ ಟಿಕೆಟ್ ಕೊಟ್ಟರೆ ಏನು ಗೊತ್ತಾಗುತ್ತೆ. ಯಾವ ಊರಿಂದ ಯಾವ ಊರಿಗೆ ಟಿಕೆಟ್ ತೆಗೆಯಲಾಗಿದೆಯೆಂದು ಹೇಗೆ ಗೊತ್ತಾಗುತ್ತದೆ.[ಕನ್ನಡ ಕಲಿಯಲೇಬೇಕ್ : ಶ್ರೀವತ್ಸ ಕೃಷ್ಣಗೆ ಸಿದ್ದು ಟಾಂಗ್]

Why there is no Kannada in Railway ticket application

"ಇಂಗ್ಲಿಷ್ ಮತ್ತು ಹಿಂದಿಯನ್ನು ನಾವೇಕೆ ಕಲಿಯಬೇಕು. ನಿಮ್ಮ ಹಿಂದಿ ಧೋರಣೆಗೆ ನನ್ನ ಧಿಕ್ಕಾರ. ಆದಷ್ಟು ಬೇಗ ಕನ್ನಡವನ್ನು ಟಿಕೆಟ್ ನಲ್ಲಿ ಬಲಸಬೇಕಾಗಿ ವಿನಂತಿ" ಎಂದು ಬರೆಯಲಾಗಿದೆ. ರಾಜಶೇಖರ್ ಎಂಬುವವರು ಇದನ್ನು ಟ್ವೀಟ್ ಮಾಡಿದ್ದಾರೆ. ಹೌದಲ್ವ? ಕರ್ನಾಟಕದಲ್ಲಿ, ಕನ್ನಡಿಗರಿಗೆ ಕನ್ನಡದಲ್ಲಿ ಟಿಕೆಟ್ ಕಾಯ್ದಿರಿಸಲು ಅವಕಾಶ ಇಲ್ಲದಿದ್ದರೆ ಹೇಗೆ? ಈ ಬಗ್ಗೆ ದೂರು ಕೂಡ ನೀಡಲಾಗಿದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Why there is no Kannada in Railway ticket application?- Campaign started in twitter for not using Kannada in railway ticket reservation application.
Please Wait while comments are loading...