ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೂ.21ರಂದೇ ವಿಶ್ವ ಯೋಗ ದಿನಾಚರಣೆ ಏಕೆ?

By Mahesh
|
Google Oneindia Kannada News

ಬೆಂಗಳೂರು, ಜೂ.20: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಯೋಗದ ಮಹತ್ವದ ಬಗ್ಗೆ ಸಾರಿದ್ದಲ್ಲದೆ, ವಿಶ್ವ ಯೋಗ ದಿನಾಚರಣೆಯ ವಿಷಯ ಮಂಡಿಸಿದ್ದು, ನಂತರ ವಿಶ್ವಸಂಸ್ಥೆ ಇದಕ್ಕೆ ಒಪ್ಪಿದ್ದು ಎಲ್ಲರಿಗೂ ತಿಳಿದಿದೆ.ಜೂ.21ರಂದೇ ವಿಶ್ವ ಯೋಗ ದಿನಾಚರಣೆ ಏಕೆ? ಇಲ್ಲಿದೆ ಉತ್ತರ.

ಕ್ರಿ.ಪೂ 3ನೇ ಶತಮಾನದಲ್ಲಿದ್ದ ಪತಂಜಲಿ ಋಷಿಯ ಚಿಂತನೆಯ ಫಲವಾದ ಯೋಗ ಬರೀ ಶಾಸ್ತ್ರವಾಗದೆ, ಆಚರಣೆ, ಅಭ್ಯಾಸವಾಗಿ ಇಲ್ಲಿ ತನಕ ಬೆಳೆದು ಬಂದಿದೆ. ಪ್ರತಿ ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ ಉನ್ನತಿಗೆ ಯೋಗ ಸಹಕಾರಿಯಾಗಿದೆ. [ವಿಶ್ವ ಯೋಗ ದಿನಾಚರಣೆ ಅಂತಿಮ ತಾಲೀಮು]

ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಇದು ಭಾರತದ ಕೊಡುಗೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. [ಯೋಗ ಪ್ರದರ್ಶನ ಕಲೆಯಲ್ಲ,ಜೀವನ ದರ್ಶಕ: ಅನುಷ್ಕಾ ಶೆಟ್ಟಿ ]

Yoga Day

ಇದೇ ದಿನ ಆಯ್ಕೆ ಏಕೆ?: ಮುಂಗಾರು ಆಗಮನವಾಗಿ ಆಷಾಢದ ಗಾಳಿ ಮೈಮನ ಜಡಗಟ್ಟಿ ಹೆಚ್ಚಿನ ಚಟುವಟಿಕೆಗಳಿಂದ ಕೂಡಿದ ಕಾಲವಾಗಿದೆ (ಜೂನ್ ತಿಂಗಳು). ಸೂರ್ಯನ ಪ್ರಖರತೆ ಒಂದೊಂದು ಕಾಲಕ್ಕೆ ಒಂದೊಂದು ಪ್ರದೇಶಕ್ಕೆ ಒಂದೊಂದು ರೀತಿಯಾಗಿರುತ್ತದೆ. ಅದರೆ, ಈ ಕಾಲದಲ್ಲಿ ಅನೇಕ ರಾಷ್ಟ್ರಗಳಲ್ಲಿ ಜಡತ್ವ ಕಳೆದು ಹೊಸ ಹುರುಪು ತುಂಬುವ ಕಾಲ, ಜೂ.21 ದೀರ್ಘಕಾಲ ಹಗಲು ಹೊಂದಿರುವ ದಿನ.

ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹೀಗೆ ಪಡೆದ ಯೋಗಶಕ್ತಿಯನ್ನು ಭಾರತದ ಋಷಿಗಳು ವಿಶ್ವದೆಲ್ಲೆಡೆ ಹರಡಿದರು.

ಯೋಗಾಭ್ಯಾಸ, ವಿಶ್ವಕ್ಕೆ ಭಾರತ ನೀಡಿದ ಅದ್ಭುತ ಕಾಣಿಕೆ. ಈಗ ವಿಶ್ವಯೋಗ ದಿನಾಚರಣೆ ಇಡೀ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ. ಹೀಗಾಗಿ, ಇದೇ ದಿನ ಸೂಕ್ತ ಎಂದು ಪ್ರಧಾನಿ ಮೋದಿ ಅವರು ಆಯ್ಕೆ ಮಾಡಿಕೊಂಡಿದ್ದಾರೆ.[ಸೂರ್ಯ ನಮಸ್ಕಾರ ಮಾಡುವಾಗ ಈ ಅಂಶ ಗಮನದಲ್ಲಿರಲಿ]

ಬಾಬಾ ರಾಮದೇವ್, ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ಭರತ್ ಠಾಕೂರ್, ಬೆಂಗಳೂರಿನ ಎಚ್ ನಾಗೇಂದ್ರ ಸೇರಿದಂತೆ ಹಲವಾರು ಪರಿಣತರ ಸಲಹೆ ಸೂಚನೆ ಸರ್ಕಾರಕ್ಕೆ ಸಿಕ್ಕಿದೆ ಹಾಗೂ ಯೋಗ ದಿನಾಚರಣೆ ಆಯೋಜನೆಯಲ್ಲೂ ಮಹತ್ವದ ಪಾತ್ರ ವಹಿಸಿದೆ.

English summary
The United Nations has adopted June 21 as World Yoga Day on Thursday night after Prime Minister Narendra Modi had urged the world community to celebrate Indian yoga at the international level in his speech at the United Nations General Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X