ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧಕ್ಕೆ ಸಿದ್ದರಾಮಯ್ಯ ಹಠಾತ್ ಭೇಟಿಯ ರಾಜರಹಸ್ಯವೇನು?

|
Google Oneindia Kannada News

Recommended Video

ಸಿದ್ದರಾಮಯ್ಯ ಇಷ್ಟು ಹಠಾತ್ತಾಗಿ ವಿಧಾನಸೌಧಕ್ಕೆ ಭೇಟಿ ಕೊಟ್ಟಿದ್ಯಾಕೆ? | Oneindia Kannada

ಬೆಂಗಳೂರು, ಸೆಪ್ಟೆಂಬರ್ 18: ಪವರ್ ಕಾರಿಡಾರ್ ನಿಂದ ಕಳೆದ 90 ದಿನಗಳ ಕಾಲ ದೂರವಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹಠಾತ್ ವಿಧಾನಸೌಧಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು.

ಕಾಂಗ್ರೆಸ್ ನಲ್ಲಿ ಬಂಡಾಯದ ಕೆಂಡ ಇನ್ನೂ ಉರಿಯುತ್ತಲೇ ಇದೆ ಕಾಂಗ್ರೆಸ್ ನಲ್ಲಿ ಬಂಡಾಯದ ಕೆಂಡ ಇನ್ನೂ ಉರಿಯುತ್ತಲೇ ಇದೆ

ಅಷ್ಟೇ ಅಲ್ಲ ಪತನದ ಭೀತಿಯಲ್ಲಿರುವ ಮೈತ್ರಿ ಸರ್ಕಾರದ ಶಾಸಕರಲ್ಲಿ ಸಿದ್ದರಾಮಯ್ಯ ಪ್ರವೇಶದಿಂದ ವಿದ್ಯುತ್ ಸಂಚಲನ ಉಂಟಾಗಿದ್ದು ಸರ್ಕಾರದ ಆತ್ಮವಿಶ್ವಾಸಕ್ಕೆ ಹೊಸ ಭರವಸೆ ತುಂಬಿದ್ದಾರೆ ಎಂದು ಶಾಸಕರು ಫುಲ್ ಖುಷಿಯಲ್ಲಿದ್ದಾರೆ, ಅದರಲ್ಲೂ ಕಾಂಗ್ರೆಸ್ ನಿಷ್ಠ ಶಾಸಕರಂತೂ 90 ದಿನಗಳ ಕಾಲ ಅನುಭವಿಸುತ್ತಿದ್ದ ನಾಯಕರಿಲ್ಲದ ಕೊರಗನ್ನು ನೀಗಿಸಿಕೊಂಡ ಸಂಭ್ರಮದಲ್ಲಿದ್ದಾರೆ.

ಸಂಧಾನಕ್ಕೆ ತೆರಳಿದ್ದ ಎಚ್ ಡಿಕೆಗೆ ಜಾರಕಿಹೊಳಿ ಸಹೋದರರ 5 ಷರತ್ತುಗಳು ಸಂಧಾನಕ್ಕೆ ತೆರಳಿದ್ದ ಎಚ್ ಡಿಕೆಗೆ ಜಾರಕಿಹೊಳಿ ಸಹೋದರರ 5 ಷರತ್ತುಗಳು

ಅಷ್ಟಕ್ಕೂ ಸಿದ್ದರಾಮಯ್ಯ ವಿಧಾನಸೌಧ ಭೇಟಿ ಏಕೆ ಎಂಬುದು ಕಾಂಗ್ರೆಸ್ ಶಾಸಕರಿಗೂ ತಿಳಿದಿಲ್ಲ, ಆದರೆ ಸಿದ್ದರಾಮಯ್ಯ ಆಪ್ತ ಮೂಲಗಳ ಪ್ರಕಾರ, ಕೇವಲ ಪ್ರತಿಪಕ್ಷ ಬಿಜೆಪಿ ಎದುರೇಟು ಕೊಡದೆ ಸಮ್ಮಿಶ್ರ ಸರ್ಕಾರದ ಒಳಗರುವ ತಮ್ಮ ರಾಜಕೀಯ ವಿರೋಧಿಗಳಿಗೆ ಸಿದ್ದರಾಮಯ್ಯ ಕಾಲ ಇನ್ನೂ ಮುಗಿದಿಲ್ಲ ಎನ್ನುವುದನ್ನು ತೋರಿಸಿಕೊಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಜಾರಕಿಹೊಳಿ ಬ್ರದರ್ಸ್ ಅಂದರ್ ಬಾಹರ್ ಗೇಮ್ ಅಸಲಿಯತ್ತೇನು? ಜಾರಕಿಹೊಳಿ ಬ್ರದರ್ಸ್ ಅಂದರ್ ಬಾಹರ್ ಗೇಮ್ ಅಸಲಿಯತ್ತೇನು?

Why Siddaramaiah visited Vidhan Soudha surprisingly?

ಹದಿಮೂರು ದಿನಗಳ ಯುರೋಪ್ ಪ್ರವಾಸದಿಂದ ಸಿದ್ದರಾಮಯ್ಯ ವಾಪಸ್ ಆಗುತ್ತಿದ್ದಂತೆ ಇಡೀ ಕಾಂಗ್ರೆಸ್ ಶಾಸಕರು ಜಗಳ ಬಗೆಹರಿಸುವಂತೆ ಸಿದ್ದರಾಮಯ್ಯ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಅಷ್ಟೇ ಆಗಿದ್ದರೆ ಸಿದ್ದರಾಮಯ್ಯ ಶಕ್ತಿ ಸಾಬೀತಾಗುತ್ತಿರಲಿಲ್ಲ, ಬದಲಾಗಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೋಮವಾರ ಕಲಬುರಗಿಯಲ್ಲಿ ಸಿದ್ದರಾಮಯ್ಯನವರಿಂದಲೇ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದು ಹೇಳಿರುವುದು ಜೆಡಿಎಸ್ ಕೂಡ ಸಿದ್ದರಾಮಯ್ಯ ಅವರಿಗೆ ಶರಣಾಗಿದೆ ಎಂದೇ ಹೇಳಲಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಮಂಗಳವಾರ ವಿಧಾನಸೌಧಕ್ಕೆ ಬಂದು ಶಾಸಕಾಂಗ ಪಕ್ಷದ ನಾಯಕರ ಕೊಠಡಿಯಲ್ಲಿ ಗಂಟೆಗಳ ಕಾಲ ಕುಳಿತು ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸರ್ಕಾರದ ಒಳಗೂ, ಸರ್ಕಾರದ ಹೊರಗೂ ಇರುವ ವಿರೋಧಿಗಳಿಗೆ ನಾನು ಇಂದೂ ಅಖಾಡದಲ್ಲಿದ್ದೇನೆ ಎಂದು ಸಾರಿದ್ದಾರೆ.

ಶಾಸಕಾಂಗ ಪಕ್ಷದ ನಾಯಕರ ಕೊಠಡಿಗೆ ಸಿದ್ದರಾಮಯ್ಯ ಭೇಟಿ ನೀಡದೆ ಎರಡು ತಿಂಗಳು ಕಳೆದಿತ್ತು. ಅಧಿವೇಶನ ಸಂದರ್ಭದಲ್ಲಿ ಜುಲೈ 5 ರಂದು ನಡೆದ ಶಾಕಾಂಗ ಪಕ್ಷದ ಸಭೆಯ ದಿನದಂದು ಆ ಕೊಠಡಿಯಲ್ಲಿ ಕುಳಿತಿದ್ದು ಬಿಟ್ಟರೆ ಮತ್ತೆಂದೂ ಆ ಕೊಠಡಿಯ ಕಡೆ ತಿರುಗಿ ನೋಡಿರಲಿಲ್ಲ.

ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಉಂಟಾದಾಗ ನೇರವಾಗಿ ಪತ್ರ ಬರೆದಿದ್ದ ಸಿದ್ದರಾಮಯ್ಯ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಮಾಧ್ಯಮದವರಿಗೆ ಹೇಳಿರಲಿಲ್ಲ.

ಆದರೆ ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಬ್ರದರ್ಸ್ ಮತ್ತು ಇತರೆ ಶಾಸಕರು ಕಂಟಕ ಪ್ರಾಯರಾಗಿದ್ದಾರೆ ಎಂದು ತಿಳಿದು ಅದನ್ನು ಸಮಾಧಾನ ಮಾಡಿದ್ದಲ್ಲದೆ ಇಡೀ ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮ ಸ್ವಭಾವ ಏನೆಂಬುದನ್ನು ವಿಧಾನಸೌಧಕ್ಕೆ ಭೇಟಿ ನೀಡುವ ಜತೆಗೆ ಮುಂದಿನ ದಿನಗಳಲ್ಲಿ ತಮ್ಮ ಅಗತ್ಯತೆ ಎಷ್ಟಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಸಿದ್ದರಾಮಯ್ಯ ಮಂಗಳವಾರ ವಿಧಾನಸೌಧಕ್ಕೆ ಭೇಟಿ ನೀಡಿರುವುದು ಕೇವಲ ಕಾಕತಾಳೀಯ ಅಥವಾ ಅಕಸ್ಮಾತ್ ಘಟನೆಯಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.

ದೆಹಲಿಗೆ ತೆರಳಿ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಗೊಂದಲ ಬಗೆಹರಿಸಿಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಲು ತೆರಳುವ ಕೆಲವೇ ಗಂಟೆಗಳಿಗೆ ಮುಂಚೆ ವಿಧಾನಸೌಧಕ್ಕೆ ತೆರಳಿ ಶಾಸಕರಿಗೆ ರವಾನಿಸಿರುವುದು ಯಾವ ಸಂದೇಶ ಎಂದು ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ಅವರ ಮೂಲಕವೇ ಉತ್ತರ ದೊರಕಲಿದೆ.

English summary
After almost three months of distance from the power corridor, former chief minister Siddaramaiah has visited Vidhan Soudha on Tuesday. Sources said that visit has sent message to his political rivals that still he is in the power fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X