ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಯರ್ ಚುನಾವಣೆಗೆ ಗೈರಾಗಿದ್ದೇಕೆ, ರೋಷನ್ ಬೇಗ್ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಅಕ್ಟೋಬರ್ 03 : 'ನಾನು ಪಕ್ಷದ ಶಿಸ್ತಿನ ಸಿಪಾಯಿ. ಮೆಕ್ಕಾ, ಮದೀನಾಕ್ಕೆ ದೇವರ ದರ್ಶನಕ್ಕೆ ಹೋಗಿದ್ದೆ. ಆದ್ದರಿಂದ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಗೈರು ಹಾಜರಾಗಬೇಕಾಯಿತು' ಎಂದು ರೋಷನ್ ಬೇಗ್ ಹೇಳಿದರು.

ಶಿವಾಜಿನಗರ ಶಾಸಕ, ಮಾಜಿ ಸಚಿವ ರೋಷನ್ ಬೇಗ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಗೈರು ಹಾಜರಾಗಿದ್ದರು. ಆದ್ದರಿಂದ, ಕೆಪಿಸಿಸಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

ಚುನಾವಣೆಗೆ ಗೈರಾದವರಿಗೆ ಕಾಂಗ್ರೆಸ್‌ ನೋಟಿಸ್, ಕಣ್ಣೀರಿಟ್ಟ ಕಾರ್ಪೊರೇಟರ್ಚುನಾವಣೆಗೆ ಗೈರಾದವರಿಗೆ ಕಾಂಗ್ರೆಸ್‌ ನೋಟಿಸ್, ಕಣ್ಣೀರಿಟ್ಟ ಕಾರ್ಪೊರೇಟರ್

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ರೋಷನ್ ಬೇಗ್ ಅವರು, 'ಮೇಯರ್ ಚುನಾವಣೆಗೆ ಗೈರು ಹಾಜರಾಗಿದ್ದಕ್ಕೆ ಪಕ್ಷ ನೋಟಿಸ್ ನೋಡಿದೆ. ನೋಟಿಸ್‌ಗೆ ಉತ್ತರ ನೀಡುತ್ತೇನೆ. ಮೇಯರ್ ಚುನಾವಣೆಗೆ ಬರಬೇಕು ಎಂದು ಪ್ರಯತ್ನ ಪಟ್ಟೆ ಆದರೆ, ಸಾಧ್ಯವಾಗಿಲಿಲ್ಲ' ಎಂದರು.

ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಸಂಕ್ಷಿಪ್ತ ವ್ಯಕ್ತಿ ಚಿತ್ರಣಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆ ಸಂಕ್ಷಿಪ್ತ ವ್ಯಕ್ತಿ ಚಿತ್ರಣ

ಜಯನಗರ ವಾರ್ಡ್‌ ಕಾರ್ಪೊರೇಟರ್ ಗಂಗಾಂಬಿಕೆ ಅವರು ಬೆಂಗಳೂರಿನ 52ನೇ ಮೇಯರ್, ರಮೀಳಾ ಅವರು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಇಬ್ಬರು ಕಾಂಗ್ರೆಸ್ ಕಾರ್ಪೊರೇಟರ್‌ ಮತ್ತು ಶಾಸಕ ರೋಷನ್ ಬೇಗ್ ಗೈರು ಹಾಜರಾಗಿದ್ದರು.....

ಬಿಬಿಎಂಪಿ ಮೇಯರ್ ಚುನಾವಣೆ, ಬಿಜೆಪಿಗೆ ಹಿನ್ನಡೆ ಆಗಿದ್ದೇಕೆ?ಬಿಬಿಎಂಪಿ ಮೇಯರ್ ಚುನಾವಣೆ, ಬಿಜೆಪಿಗೆ ಹಿನ್ನಡೆ ಆಗಿದ್ದೇಕೆ?

ಮೇಯರ್ ಚುನಾವಣೆಗೆ ಗೈರಾದವರು

ಮೇಯರ್ ಚುನಾವಣೆಗೆ ಗೈರಾದವರು

ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಎಲ್ಲರೂ ಹಾಜರಾಗಬೇಕು ಎಂದು ಕಾಂಗ್ರೆಸ್ ವಿಪ್ ಜಾರಿಗೊಳಿಸಿತ್ತು. ಆದರೆ, ಶಿವಾಜಿನಗರ ಶಾಸಕ ರೋಷನ್ ಬೇಗ್, ಎಚ್‌ಎಂಟಿ ವಾರ್ಡ್ ಕಾರ್ಪೊರೇಟರ್ ಆಶಾ ಸುರೇಶ್, ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ ಕಾರ್ಪೊರೇಟರ್ ಲಲಿತಾ ತಿಮ್ಮನಂಜಯ್ಯ ಅವರು ಮೇಯರ್ ಆಯ್ಕೆಗೆ ಸೆ.28ರಂದು ನಡೆದ ಚುನಾವಣೆಗೆ ಗೈರು ಹಾಜರಾಗಿದ್ದರು.

ಪಕ್ಷ ನೋಟಿಸ್ ನೀಡಿದೆ

ಪಕ್ಷ ನೋಟಿಸ್ ನೀಡಿದೆ

'ಬಿಬಿಎಂಪಿ ಮೇಯರ್ ಚುನಾವಣೆಗೆ ಗೈರು ಹಾಜರಾಗಿದ್ದೆ ಆದ್ದರಿಂದ, ಪಕ್ಷ ನೋಟಿಸ್ ನೋಡಿದೆ. ನೋಟಿಸ್‌ಗೆ ಉತ್ತರ ನೀಡುವೆ. ಮೆಕ್ಕಾ, ಮದೀನಾಕ್ಕೆ ದೇವರ ದರ್ಶನಕ್ಕೆ ಹೋಗಿದ್ದೆ. ಆದ್ದರಿಂದ, ಚುನಾವಣೆಗೆ ಬರಲಾಗಲಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ' ಎಂದು ರೋಷನ್ ಬೇಗ್ ಹೇಳಿದರು.

ಕೆಪಿಸಿಸಿಯಿಂದ ನೋಟಿಸ್

ಕೆಪಿಸಿಸಿಯಿಂದ ನೋಟಿಸ್

ವಿಪ್ ನೀಡಿದರೂ ಮೇಯರ್ ಆಯ್ಕೆಯ ಚುನಾವಣೆಗೆ ಗೈರಾಗಿದ್ದಕ್ಕೆ ಕೆಪಿಸಿಸಿ ಮೂವರಿಗೆ ನೋಟಿಸ್ ನೀಡಿತ್ತು. ಒಂದು ವಾರದೊಳಗೆ ನೋಟಿಸ್‌ಗೆ ಉತ್ತರ ನೀಡಬೇಕು ಎಂದು ಸೂಚನೆ ನೀಡಿತ್ತು. ಆಶಾ ಸುರೇಶ್ ಮತ್ತು ಲಲಿತಾ ತಿಮ್ಮನಂಜಯ್ಯ ಅವರು ನೋಟಿಸ್‌ಗೆ ಶೀಘ್ರದಲ್ಲಿಯೇ ಉತ್ತರ ನೀಡಲಿದ್ದಾರೆ.

ಆಶಾ ಸುರೇಶ್ ಕಣ್ಣೀರು

ಆಶಾ ಸುರೇಶ್ ಕಣ್ಣೀರು

ಎಚ್‌ಎಂಟಿ ವಾರ್ಡ್ ಕಾರ್ಪೊರೇಟರ್ ಆಶಾ ಸುರೇಶ್ ಅವರು ಮಗಳ ಹೆರಿಗೆ ಇದ್ದ ಕಾರಣ ಚುನಾವಣೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ ಎಂದು ಹೇಳಿದ್ದರು. ಆದರೂ ಸಹ ಕೆಪಿಸಿಸಿಯು ಅವರಿಗೂ ನೋಟಿಸ್ ಜಾರಿ ಮಾಡಿದೆ.

English summary
Shivajinagar MLA and former minister Roshan Baig said that he was in Mecca tour so absent for Bruhat Bengaluru Mahanagara Palike (BBMP) mayor and deputy mayor election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X