ವಿಧಾನ ಸಭಾಧ್ಯಕ್ಷರ ಕೊಠಡಿ ಪರಿವರ್ತನೆ ಆಗುತ್ತಿರುವುದೇಕೆ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: ವಿಧಾನ ಸೌಧದದಲ್ಲಿರುವ ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರ ಕೊಠಡಿ ಸ್ಥಳಾಂತರಿಸಿ ಹೊಸ ಕೊಠಡಿ ನಿರ್ಮಾಣಕ್ಕೆ ಅಂದಾಜು ರು 75 ಲಕ್ಷದ ನೀಲಿ ನಕ್ಷೆ ತಯಾರಾಗಿದೆ.

ಅಷ್ಟಕ್ಕೂ ಕೊಠಡಿಯನ್ನು ಏಕೆ ಬದಲಿಸಬೇಕು ಎಂಬ ಪ್ರಶ್ನೆಗೆ ಕಾರಣ ಪ್ರಸ್ತುತ ವಿಧಾನ ಸೌಧದಲ್ಲಿರುವ ಮೊದಲ ಮಹಡಿಯ 119ನೇ ಸಂಖ್ಯೆಯ ಕೊಠಡಿಯನ್ನು ಸಭಾಧ್ಯಕ್ಷರು ಬಳಸುತ್ತಿದ್ದಾರೆ. ಆ ಕೊಠಡಿ ಚಿಕ್ಕದಾಗಿದೆ, ವಿವಿಧ ಇಲಾಖೆಗಳ ಅದಿಕಾರಿಗಳು ಮತ್ತು ಜನರ ಸಂಪರ್ಕಕ್ಕೆ ಕೊಠಡಿ ಸಾಕಾಗುತ್ತಿಲ್ಲ. ಹೀಗಾಗಿ ಮಹಡಿಯ 125 ಮತ್ತು 125 ಎ ಸಂಖ್ಯೆಯ ಕೊಠಡಿಗಳನ್ನು ಜೋಡಿಸಿ ಹೊಸದಾಗಿ ವಿನ್ಯಾಸಗೊಳಿಸಲು ನಿರ್ಧರಿಸಲಾಗಿದೆ.

koliwad

ಇದು ಸಭಾಧ್ಯಕ್ಷರ ಸೂಚನೆಯೇ ಆಗಿದ್ದು, ಎರಡೂ ಕೊಠಡಿಗಳುನ್ನು ಸೇರಿಸಿ ಅಧುನಿಕ ಸೌಲಭ್ಯಗಳಿಂದ ನವೀಕರಿಸಲು ನಕ್ಷೆಯನ್ನು ಸಿದ್ಧ ಪಡಿಸಲಾಗಿದೆ. ಕಾಮಗಾರಿ ತುರ್ತಾಗಿ ಆಗುವಂತೆ ಸೂಚಿಸಿರುವ ಅಧ್ಯಕ್ಷರು ಆಢಳಿತಾತ್ಮಕ ಅನುಮೋದನೆಗೆ, ಅನುದಾನ ಬಿಡುಗಡೆಗೆ ಲೋಕೋಪಯೋಗಿ ಇಲಾಖೆ ಮೂಲಕ ವಿಧಾನ ಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸೆ. 21ರಂದು ನಡೆದ ವಿಧಾನ ಸಭೆ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ವಾಸ್ತುಶಿಲ್ಪಿಗಳ ಸಭೆಯಲ್ಲಿ ಹೊಸ ಕೊಠಡಿ ಹೇಗಿರಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು.

ಆದರೆ ವೆಚ್ಚ ವೆಷ್ಟಾಗುತ್ತದೆ ಎಂಬುದರ ಬಗ್ಗೆ ಚರ್ಚೆ ನಡೆದಿರಲಿಲ್ಲ ಆದರೆ ಈಗ ಅದರ ವೆಚ್ಚವನ್ನು ಬರೋಬ್ಬರಿ ರು 75 ಲಕ್ಷ ಎಂದು ಅಂದಾಜಿಸಲಾಗಿದೆ. ಕಾಮಗಾರಿ ಮುಗಿಯುವ ಹೊತ್ತಿಗೆ ಎಷ್ಟಾಗುತ್ತದೋ ಗೊತ್ತಿಲ್ಲ.

ಈ ಹಿಂದೆ, ಸಭಾಪತಿ ಕೂಡಾ ಕೋಟ್ಯಂತರ ಹಣ ಖರ್ಚು ಮಾಡಿ ಕೊಠಡಿ ನವೀಕರಿಸಿದ್ದರು. ಈಗ ಸಭಾಧ್ಯಕ್ಷರು ತಾವಿರುವ ಕೊಠಡಿಯನ್ನೇ ಬದಲಿಸಿ ಬೇರೆ ಕೊಠಡಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೋಳಿವಾಡ ಅವರು ಈಗ ಇರುವ ಕೊಠಡಿ ತುಂಬಾ ಚಿಕ್ಕದಿದೆ. ಅದರಲ್ಲಿ ವಿಶೇಷ ಏನೂ ಇಲ್ಲ.ನನ್ನ ಕೊಠಡಿಗೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಬರುತ್ತಿರುತ್ತಾರೆ. ಬೇರೆಬೇರೆ ಸಭೆಗಳು ನಡೆಯುತ್ತಿರುತ್ತವೆ. ಸದ್ಯ ಬಳಸುತ್ತಿರುವ ಕೊಠಡಿ ಸಾರ್ವಜನಿಕ ಕೊಠಡಿಯಂತಿದೆ ಹೀಗಾಗಿ ಬದಲಿಸಲು ಆದೇಶಿಸಲಾಗಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Legislative Speaker room renovation in upcoming day. because that room is very small and do not arrange big meetings
Please Wait while comments are loading...