ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ನಿಲ್ಲಲಿ

By Prasad
|
Google Oneindia Kannada News

ಬೆಂಗಳೂರು, ಜುಲೈ 22 : ಹಿಂದಿ ಹೇರಿಕೆಯ ವಿರುದ್ಧ ಕನ್ನಡಿಗರು ಎತ್ತುತ್ತಿರುವ ಕೂಗು ಸಂಬಂಧಪಟ್ಟ ಅಧಿಕಾರಿಗಳ, ಮಂತ್ರಿಗಳ ಒಂದು ಕಿವಿಯಿಂದ ಹಾದು ಮತ್ತೊಂದು ಕಿವಿಯಿಂದ ಹೊರಹೋಗುತ್ತಿದೆ. ಗಂಟಲು ಕಿತ್ತುಹೋಗುವಂತೆ ಎಷ್ಟೇ ಕಿರುಚಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಬೆಂಗಳೂರಿನಲ್ಲಿ ಕನ್ನಡ ಎಂಥ ಪರಿಸ್ಥಿತಿ ಎದುರಿಸುತ್ತಿದೆ ಎಂಬುದಕ್ಕೆ ಇದು ಒಂದು ನಿದರ್ಶನ ಅಷ್ಟೆ.

ನಮ್ಮ ಬೆಂಗಳೂರಿಗರು ಹಿಂದಿ ಬೇಡ ಎಂದು ಎಂದೂ ಹೇಳಿಲ್ಲ. ಆದರೆ ಅನಗತ್ಯ ಹೇರಿಕೆ ಏಕೆ ಎಂಬುದು ಕನ್ನಡಿಗರ ಪ್ರಶ್ನೆ. ಅದರಲ್ಲೂ, ದಿನನಿತ್ಯ ಓಡಾಡುವ ನಮ್ಮ ಮೆಟ್ರೋದಲ್ಲಿಯೇ ಕನ್ನಡ ಬಳಕೆ ಇಲ್ಲದಿದ್ದರೆ ಸಾಮಾನ್ಯ ಜನರು, ಇಂಗ್ಲಿಷ್ ಮತ್ತು ಹಿಂದಿ ಓದಲು ಬಾರದಿರುವವರು ಏನು ಮಾಡಬೇಕು?

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಅನಗತ್ಯ ಹಿಂದಿ ಹೇರಿಕೆ ನಿಲ್ಲಲಿ ಎಂಬ ಆನ್ ಲೈನ್ ಅರ್ಜಿಯನ್ನು ಚೇಂಜ್.ಆರ್ಗ್ ನಲ್ಲಿ ಬನವಾಸಿ ಬಳಗ ಸಲ್ಲಿಸಿದೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಪತ್ರ ಬರೆಯಲಾಗಿದೆ. ಕೆಲ ದಿನಗಳ ಹಿಂದೆ, ನಮ್ಮ ಮೆಟ್ರೋದಲ್ಲಿ ಕನ್ನಡ ನಾಮಫಲಕಗಳು ಕಾಣದಿದ್ದರೆ ನನಗೆ ತಿಳಿಸಿ, ನಾನು ನೋಡಿಕೊಳ್ಳುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಗರ್ಜಿಸಿದ್ದರು. [ಹಿಂದಿ ಹೇರಿಕೆ ಕಂಡರೆ ಪ್ರತಾಪ್ ಗೆ ತಿಳಿಸಿ]

Why Hindi is forced in Namma Metro in Bengaluru?

ನಮ್ಮ ಶಾಸಕರು, ಸಂಸದರು ಈ ಪ್ರಶ್ನೆಯನ್ನು ವಿಧಾನಸಭೆಯಲ್ಲಿ, ಸಂಸತ್ತಿನಲ್ಲಿ ಎತ್ತಬೇಕಾಗಿರುವುದು ನಿಜವಾದರೂ, ಕನ್ನಡಿಗರಾದ ನಾವು ಸುಮ್ಮನಿದ್ದರೆ ಹೇಗೆ? ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಅಭಿಮತ ಪಡೆಯಲೆಂದು ಸಲ್ಲಿಸಲಾಗಿರುವ ಅರ್ಜಿಯನ್ನು ಕೆಳಗಡೆ ಓದಿರಿ. 'ಹೌದು, ಹಿಂದಿ ಹೇರಿಕೆ ಸಲ್ಲ' ಎಂದು ನಿಮಗೆ ಅನ್ನಿಸಿದರೆ ಅರ್ಜಿಗೆ ನೀವೂ ಸಹಿ ಹಾಕಿರಿ.

ಮಾನ್ಯರೇ,

ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲಿ ಮತ್ತು ನಿಲ್ದಾಣಗಳಲ್ಲಿ ಅನಗತ್ಯವಾಗಿ ಹಿಂದೀ ಭಾಷೆಯ ಬಳಕೆ ಮಾಡಲಾಗುತ್ತಿದೆ.

- ಈ ಭಾಷಾ ನೀತಿಯನ್ನು ಕರ್ನಾಟಕ ಸರ್ಕಾರದ ಸೂಚನೆಯ ಮೇರೆಗೆ ಮಾಡಲಾಗಿಲ್ಲ.
- ಮೆಟ್ರೋ ಆಡಳಿತ ಮಂಡಳಿಯೇ ಏಕಪಕ್ಷೀಯವಾಗಿ ಮೆಟ್ರೋನಲ್ಲಿ ಹಿಂದೀ ಬಳಕೆಯ ನಿರ್ಧಾರ ಕೈಗೊಂಡಿದೆ ಎಂದು ಮೆಟ್ರೋ ಆಡಳಿತ ಮಂಡಳಿಯವರು ಮಾಹಿತಿ ಹಕ್ಕಿನ ಅರ್ಜಿಯೊಂದಕ್ಕೆ ಉತ್ತರವಾಗಿ ತಿಳಿಸಿದ್ದಾರೆ. (ಮಾಹಿತಿ ಹಕ್ಕಿನ ಪತ್ರದ ಪ್ರತಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.)

ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಮೆಟ್ರೋ, ಕರ್ನಾಟಕ ಸರ್ಕಾರದ ನೀತಿಗಳಿಗೆ ಅನುಗುಣವಾಗಿ ನಡೆಯಬೇಕಿದ್ದು ಸರ್ಕಾರದ ಇತರ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ / ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತಿತರ ಸರ್ಕಾರೀ ಸ್ವಾಮ್ಯದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಭಾಷಾ ನೀತಿಯನ್ನೇ ನಮ್ಮ ಮೆಟ್ರೋನಲ್ಲೂ ಬಳಸಬೇಕು. ಈ ಕುರಿತು ನಮ್ಮ ಮೆಟ್ರೋ ಆಡಳಿತ ವರ್ಗಕ್ಕೆ ಸೂಕ್ತ ಆದೇಶ ನೀಡಬೇಕೆಂದು ಕೋರುತ್ತೇವೆ.

- ಆನಂದ್
- ವಲ್ಲೀಶ್ ಕುಮಾರ್
ಬನವಾಸಿ ಬಳಗ

English summary
Why Hindi is forced in Namma Metro in Bengaluru? An online petition has been filed by Banavasi Balaga, a Kannada organization fighting for Kannada, and letter sent to Chief Minister Siddaramaiah too. Sign the petition if you feel Kannada is being neglected in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X