• search

ಮಾಜಿಪ್ರಧಾನಿ ಅನಿತಾಕುಮಾರಸ್ವಾಮಿಗೆ ಸ್ವಾಗತ ಕೋರಿದ ಫ್ಲೆಕ್ಸ್ ನೋಡಿದ್ರಾ?

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಅನಿತಾ ಕುಮಾರಸ್ವಾಮಿಗೆ ಸ್ವಾಗತ ಕೋರುವ ಫ್ಲೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

    ಬೆಂಗಳೂರು, ಜೂನ್ 25: ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪಿ.ವಿ.ಎಸ್.ಪ್ರಸಾದ್ ಅವರು ಸ್ವಾಗತ ಕೋರಿ ಮಾಡಿಸಿದ್ದಾರೆ ಎನ್ನಲಾದ ಫ್ಲೆಕ್ಸ್ ವೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವಿಪರೀತ ವೈರಲ್ ಆಗಿದೆ. ಇದರ ಸಾಚಾತನದ ಬಗ್ಗೆ ಖಚಿತವಾಗಿ ಗೊತ್ತಿಲ್ಲವಾದರೂ ಒಂದು ವೇಳೆ ಇದೇ ರೀತಿಯ ಫ್ಲೆಕ್ಸ್ ಮಾಡಿಸಿದ್ದರೆ ಮಾತ್ರ ಬಲು ತಮಾಷೆ.

    ಪ್ರಸಾದ್ ವೀರಪ್ಪ ಏಜೆನ್ಸಿ ಉದ್ಘಾಟನೆ ಜೂನ್ ಇಪ್ಪತ್ನಾಲ್ಕರ, ಭಾನುವಾರದಂದು ಇದೆ ಎಂಬ ಫ್ಲೆಕ್ಸ್ ನಲ್ಲಿ, ಉದ್ಘಾಟನಾ ಸಮಾರಂಭಕ್ಕೆ ಆಗಮಿಸುತ್ತಿರುವ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀಮತಿ ಅನಿತಾಕುಮಾರಸ್ವಾಮಿರವರಿಗೆ ಹೃತ್ಪೂರ್ವಕ ಸ್ವಾಗತ ಎಂದು ಹಾಕಲಾಗಿದೆ. ಒಂದು ಬದಿಗೆ ಅನಿತಾ ಕುಮಾರಸ್ವಾಮಿ ಅವರು ಭಾವಚಿತ್ರವನ್ನು ಹಾಕಲಾಗಿದ್ದು, ಮಾಜಿ ಎಂಎಲ್ ಎ ಎಂಬುದು ಸ್ಪಷ್ಟವಾಗಿದೆ.

    ಸೌಮ್ಯಾ ರೆಡ್ಡಿ ಅವರ ಫ್ಲೆಕ್ಸ್ ತೆರವು ಅಭಿಯಾನದ ರಿಯಾಲಿಟಿ ಚೆಕ್‌ ಮಾಡಿದಾಗ ಕಂಡದ್ದು ಇದು

    ಅದೇ ಫ್ಲೆಕ್ಸ್ ನಲ್ಲಿ ಪ್ರಸಾದ್ ಪಿ.ವಿ.ಎಸ್., ಬಿ.ಇ. ಸಿವಿಲ್, ಪ್ರಧಾನ ಕಾರ್ಯದರ್ಶಿ ಜೆಡಿ (ಎಸ್), ಬೆಂಗಳೂರು ಎಂದು ಮತ್ತೊಬ್ಬರ ಭಾವಚಿತ್ರವೂ ಇದೆ. ಅನಿತಾಕುಮಾರಸ್ವಾಮಿ ಅವರು ಮಾಜಿ ಎಂಎಲ್ ಎ ಎಂಬುದು ಹಾಕಲಾಗಿದ್ದರೂ ಮತ್ತೊಂದು ಕಡೆ ಮಾಜಿ ಪ್ರಧಾನಮಂತ್ರಿ ಎಂದು ಹಾಕಿರುವುದು ಟ್ರಾಲ್ ಮಾಡುವವರ ಪಾಲಿಗೆ ಭರ್ತಿ ಮನರಂಜನೆ ನೀಡುತ್ತಿದೆ.

    Why AnithaKumaraswamy flex viral on social media?

    ಎಚ್.ಡಿ.ದೇವೇಗೌಡರು ಮಾಜಿ ಪ್ರಧಾನಮಂತ್ರಿಗಳೇನೋ ಹೌದು, ಆದರೆ ಅವರ ಸೊಸೆ- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಂಡತಿ ಅನಿತಾ ಅವರು ಯಾವಾಗ ಮಾಜಿ ಪ್ರಧಾನಿಯಾದರು? ಅಥವಾ ಈ ರೀತಿ ಫ್ಲೆಕ್ಸ್ ಹರಿಬಿಟ್ಟಿರುವುದು ಕಿಡಿಗೇಡಿಗಳ ಕೆಲಸವೇ ಎಂಬುದು ಸದ್ಯಕ್ಕೆ ಸುಳಿದಾಡುತ್ತಿರುವ ಪ್ರಶ್ನೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Flex which was stating that former PM AnithaKumaraswamy went viral on social media. There is no authenticity about flex, but content like that. Here is the news about interesting flex viral on social media.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more