ಉಪಚುನಾವಣೆಗೆ ಜೆಡಿ ಎಸ್ ಅಭ್ಯರ್ಥಿ ಯಾರು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 14: ಕುತೂಹಲ ಕೆರಳಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಗೆ ಅಭ್ಯರ್ಥಿ ಯಾರು ಎಂಬುದು ಇಂದು ನಿರ್ಧಾರವಾಗಲಿದೆ ಎಂದು ಜೆಡಿಎಸ್ ಮುಖಂಡ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಇಬ್ಬರೂ ಪರಸ್ಪರ ಕೆಸರೆರಚಾಟದಲ್ಲಿ ಬಿಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ನಾವು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವ ಅಗತ್ಯವಿದೆ. ಇಂದು ಶಾಸಕರೊಂದಿಗೆ ಚಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.[ನಂಜನಗೂಡು: ನಾಮಪತ್ರ ಸಲ್ಲಿಕೆಗೆ ಮಾರ್ಚ್ 21 ಕಡೆಯ ದಿನಾಂಕ]

Who is the JDS candidate for by election?

ಬಿಜೆಪಿ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವನ್ನೇ ಕರ್ನಾಟಕದಲ್ಲೂ ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಏಕೆಂದರೆ ಪ್ರಧಾನಿ ಮೋದಿಯವರು ಕಳೆದು ಮೂರು ವರ್ಷಗಳಿಂದ ಕರ್ನಾಟಕಕ್ಕೆ ಏನನ್ನೂ ಕೊಟ್ಟಿಲ್ಲ ಅನ್ನೋದು ಇಲ್ಲಿನ ಜನರಿಗೆ ಗೊತ್ತು. ಇಲ್ಲಿನ ಜನರ ಬಳಿ ಮತ ಕೇಳುವುದಕ್ಕೆ ಬಿಜೆಪಿಗೆ ಯಾವ ಮಾನದಂಡವೂ ಇಲ್ಲ ಎಂದಿದ್ದಾರೆ.[ಬ್ರೇಕಿಂಗ್ ನ್ಯೂಸ್: ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆ ದಿನಾಂಕ ನಿಗದಿ]

ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಫಲಿತಾಂಶ ಏಪ್ರಿಲ್ 13 ರಂದು ಹೊರಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We will finalise the candidate for Nanjagud and Gundlupet by election today, JDS Leader, former Karnataka CM H D Kumaraswamy said in bangaluru today.
Please Wait while comments are loading...