ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿತನದ ಮೊದಲ ಪ್ರಕರಣ ದಾಖಲಿಸಿದ್ದ ಕರ್ನಾಟಕದ ನ್ಯಾ. ಪುಟ್ಟಸ್ವಾಮಿ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 24: ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರಿಂ ಕೋರ್ಟ್ ನ ಸಂವಿಧಾನಿಕ ಪೀಠ ಇಂದು ಮಹತ್ವದ ತೀರ್ಪು ನೀಡಿದೆ.

ಏನಿದು ಖಾಸಗಿತನದ ಹಕ್ಕು?: ತಿಳಿಯಬೇಕಾದ 6 ಸಂಗತಿಏನಿದು ಖಾಸಗಿತನದ ಹಕ್ಕು?: ತಿಳಿಯಬೇಕಾದ 6 ಸಂಗತಿ

ಹಾಗೆ ನೋಡಿದರೆ ಖಾಸಗಿತನವನ್ನು ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಮೊದಲ ಅರ್ಜಿ ಸಲ್ಲಿಸಿದವರು ಕರ್ನಾಟಕ ನ್ಯಾಯಮೂರ್ತಿ ಕೆ.ಎಸ್ ಪುಟ್ಟಸ್ವಾಮಿ. ಇವತ್ತು ಅವರ ವಾದವನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದ್ದರಿಂದ ಪುಟ್ಟಸ್ವಾಮಿ ಖುಷಿಯಾಗಿದ್ದಾರೆ.

Who is Justice K S Puttaswamy, first petitioner in the privacy case

1970ರ ದಶಕದಲ್ಲಿ ನ್ಯಾ. ಪುಟ್ಟಸ್ವಾಮಿ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಯಾಗಿದ್ದರು. 1926, ಫೆಬ್ರವರಿ 8ರಂದು ಹುಟ್ಟಿದ ಪುಟ್ಟಸ್ವಾಮಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪೂರೈಸಿದ್ದರು. ನಂತರ ಬೆಂಗಳೂರು ಲಾ ಕಾಲೇಜಿನಲ್ಲಿ ತಮ್ಮ ವಕೀಲಿ ವಿದ್ಯಾಭ್ಯಾಸ ಮುಗಿಸಿದ್ದರು.

ಜನವರಿ 7, 1952ರಲ್ಲಿ ನ್ಯಾ. ಪುಟ್ಟಸ್ವಾಮಿ ವಕೀಲರಾಗಿ ನೋಂದಣಿ ಮಾಡಿಕೊಂಡು ಅಭ್ಯಾಸ ಆರಂಭಿಸಿದ್ದರು. ನಂತರ ಅ಻ವರು ಸರಕಾರದ ಹೆಚ್ಚುವರಿ ವಕೀಲರಾಗಿ ನೇಮಕವಾದರು.

'ಖಾಸಗಿತನ ಮೂಲಭೂತ ಹಕ್ಕು' ಸಾಂವಿಧಾನಿಕ ಪೀಠದಿಂದ ಮಹತ್ವದ ತೀರ್ಪು'ಖಾಸಗಿತನ ಮೂಲಭೂತ ಹಕ್ಕು' ಸಾಂವಿಧಾನಿಕ ಪೀಠದಿಂದ ಮಹತ್ವದ ತೀರ್ಪು

ನವೆಂಬರ್ 28, 1977ರಲ್ಲಿ ಅವರನ್ನು ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಯಿತು. ಮುಂದೆ ಅವರು ಸೆಪ್ಟೆಂಬರ್ 1, 1986ರಲ್ಲಿ ಕೇಂದ್ರ ಆಡಳಿತ ನ್ಯಾಯಮಂಡಳಿಯ ಮೊದಲ ಉಪ ಅಧ್ಯಕ್ಷರಾಗಿ ನೇಮಕವಾದರು.

ಸದ್ಯ ಬೆಂಗಳೂರಿನಲ್ಲಿ ವಿಲ್ಸನ್ ಗಾರ್ಡನ್ ನಲ್ಲಿ ತಮ್ಮ ನಿವೃತ್ತಿಯ ಜೀವನವನ್ನು ಕಳೆಯುತ್ತಿದ್ದಾರೆ.

English summary
Justice K S Puttaswamy filed the first petition in the Supreme Court seeking to declare Right to Privacy as a fundamental right. Today he is a relieved man with the Supreme Court upholding his contention and declaring privacy as a fundamental right.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X