ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗಣೇಶನ ಹಬ್ಬದಲ್ಲಿ ಕನ್ನಡಿಗನಿಗೆ ಅವಮಾನವಾದಾಗ...

By Prasad
|
Google Oneindia Kannada News

Recommended Video

Bengaluru Ganesh utsav: harassment on kanndaiga | Oneindia Kannada

ಬೆಂಗಳೂರು, ಆಗಸ್ಟ್ 31 : ಎಲ್ಲಿದ್ದೀರಿ ಯಶ್, ಜಗ್ಗೇಶ್, ಸಾರಾ ಗೋವಿಂದು, ಟಿಎ ನಾರಾಯಣ ಗೌಡ, ವಾಟಾಳ್ ನಾಗರಾಜ್, ಅಗ್ನಿ ಶ್ರೀಧರ್, ಪುನೀತ್ ರಾಜ್ ಕುಮಾರ್, ಸುದೀಪ್, ದರ್ಶನ್, ಮುಖ್ಯಮಂತ್ರಿ ಚಂದ್ರು, ಚಂಪಾ... ಎಲ್ಲಿದ್ದೀರಿ ಕನ್ನಡ ಹೋರಾಟಗಾರರೆ ಎಲ್ಲಿದ್ದೀರಿ?

ಹಿಂದಿ ಹೇರಿಕೆ ಹೀಗೇ ಮುಂದುವರಿದರೆ, ಕನ್ನಡಿಗರ ಮುಂದಿನ ದಾರಿ?ಹಿಂದಿ ಹೇರಿಕೆ ಹೀಗೇ ಮುಂದುವರಿದರೆ, ಕನ್ನಡಿಗರ ಮುಂದಿನ ದಾರಿ?

ಹೀಗೆಂದು ಕನ್ನಡವನ್ನು ಹೃದಯದಲ್ಲಿ ತುಂಬಿಕೊಂಡಿರುವ, ಕನ್ನಡಕ್ಕೆ ಧಕ್ಕೆಯಾದಾಗ ಮಿಡಿಯುವ, ಕನ್ನಡಿಗರಿಗೆ ಅವಮಾನವಾದರೆ ಕುದಿಯುವ, ಅವಶ್ಯಕತೆ ಬಿದ್ದರೆ ಎಲ್ಲವನ್ನೂ ಬಿಟ್ಟು ಸಿಡಿದೇಳುವ ಕನ್ನಡಿಗರು ಕೇಳುತ್ತಿದ್ದಾರೆ. ಎಲ್ಲಿದ್ದೀರಿ ಸ್ವಾಮೀ ಎಚ್ಚರಗೊಳ್ಳಿ.

Who has to protest when a Kannadiga is insulted

ಗಣೇಶನ ಹಬ್ಬ ಕರ್ನಾಟಕ್ಕೇ ದೊಡ್ಡ ಹಬ್ಬ. ಪ್ರತಿವರ್ಷ ಬೆಂಗಳೂರನಲ್ಲಿ ನಡೆಯುವ ಬೆಂಗಳೂರು ಗಣೇಶ ಉತ್ಸವಕ್ಕೆ ದೇಶದ ನಾನಾ ಕಡೆಗಳಿಂದ ನಾನಾ ಕಲಾವಿದರನ್ನು ಕರೆಯಿಸುತ್ತಾರೆ. ಅಲ್ಲಿಯೂ ಅಲ್ಪಸ್ವಲ್ಪ ಕನ್ನಡವಿರುತ್ತದೆನ್ನಿ. ಆದರೆ, ಕನ್ನಡ ಹಾಡು ಹಾಡಬೇಕು ಎಂಬುದು ಕನ್ನಡಿಗರ ಮೂಲಭೂತ ಹಕ್ಕು ಅಲ್ಲವೆ?

ಆದರೆ, ಬೆಂಗಳೂರು ಗಣೇಶ ಉತ್ಸವದಲ್ಲಿ ಆಗಿದ್ದೇನು? 'ಕನಿಷ್ಠ ಕಡೆಯ ಹಾಡನ್ನಾದರೂ ಕನ್ನಡ ಹಾಡು ಹಾಡಬೇಕು' ಎಂದು ಕನ್ನಡಿಗರೇ ಆದ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ವಿನಯ್ ಚ. ಶರ್ಮಾ ಎಂಬುವವರು ಕೋರಿದಾಗ, ಆಯೋಜಕರು ಅವರನ್ನು ಕಾರ್ಯಕ್ರಮದಲ್ಲಿ ಕೆಟ್ಟದಾಗಿ ನಡೆಸಿಕೊಂಡಿದ್ದಲ್ಲದೆ ಹೊರಗೆ ಕಳಿಸಿದ್ದಾರೆ.

ಜಪಾನಿ ಭಾಷೆ ಕಲಿಯಲು ಎಸ್‌ಐಎಫ್‌ನಿಂದ ಇನ್ನು 9 ಡೆಸ್ಕ್ ಆರಂಭಜಪಾನಿ ಭಾಷೆ ಕಲಿಯಲು ಎಸ್‌ಐಎಫ್‌ನಿಂದ ಇನ್ನು 9 ಡೆಸ್ಕ್ ಆರಂಭ

ಇದೇನು ಕಾವೇರಿಗಾಗಿ ತಮಿಳುನಾಡಿನ ವಿರುದ್ಧದ ಹೋರಾಟವಾ ಅಥವಾ ಗೋಕಾಕ್ ಚಳವಳಿ ಮಾದರಿಯ ಹೋರಾಟವಾ, ಕನ್ನಡಿಗರೆಲ್ಲ ಬೀದಿಗಿಳಿದು ಧಿಕ್ಕಾರ ಕೂಗಲು ಅಥವಾ ಕನ್ನಡ ಚಿತ್ರರಂಗವೆಲ್ಲ ಒಕ್ಕೊರಲಿನಿಂದ ಪ್ರತಿಭಟನೆ ನಡೆಸಲು?

ಅದು ಬಸವನಗುಡಿಯಂಥ ಅಪ್ಪಟ ಕನ್ನಡ ಪ್ರದೇಶದಲ್ಲಿ, ಹೆಚ್ಚಾಗಿ ಕನ್ನಡಿಗರೇ ಇರುವಂಥ ಬಡಾವಣೆಯಲ್ಲಿ, ಕನ್ನಡಿಗರೂ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸುವಂಥ ಕಾರ್ಯಕ್ರಮದಲ್ಲಿ ಕನ್ನಡಿಗನೊಬ್ಬನಿಗೆ ಅವಮಾನವಾಗಿರುವುದು ನಮ್ಮ ಕನ್ನಡಪರ ಹೋರಾಟಗಾರರಿಗೆ ದೊಡ್ಡ ವಿಷಯವಲ್ಲವೇ ಅಲ್ಲ ಬಿಡಿ.

ಇಂಥ ಹೋರಾಟಕ್ಕೆಲ್ಲ ಸಾಮಾಜಿಕ ತಾಣಗಳ ಮೂಲಕ ದನಿಯೆತ್ತುವವರು ಮತ್ತೊಮ್ಮೆ ಅರುಣ್ ಜಾವಗಲ್, ವಸಂತ್ ಶೆಟ್ಟಿ, ಜಯಂತ್ ಸಿದ್ಮಲ್ಲಪ್ಪ, ಗಣೇಶ್ ಚೇತನ್ ಮುಂತಾದವರೆ.

ಇಷ್ಟೆಲ್ಲ ಕನ್ನಡದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ, ಅಲ್ಲಿ ದೂರದ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು 'ಜೈ ಮಹಾರಾಷ್ಟ್ರ' ಎಂದು ಬೊಬ್ಬೆ ಹೊಡೆದಿದ್ದು ಕನ್ನಡಿಗರಿಗೆ ಮರ್ಮಾಘಾತ ನೀಡಿದ್ದಾರೆ.

ಇಂಥವರ ವಿರುದ್ಧ ಪ್ರತಿಕ್ರಿಯೆ ನೀಡಿದರೆ ಅವರು ಮತ್ತಷ್ಟು ಕೆರಳಿ, ಕನ್ನಡ ವಿರೋಧಿ ಚಟುವಟಿಕೆಗಳಲ್ಲಿಯೇ ತೊಡಗುತ್ತಾರೆ ಎಂದು ಹಲವಾರು ಕನ್ನಡಪರ ಹೋರಾಟಗಾರರು ತಣ್ಣಗೆ ಕುಳಿತಿದ್ದಾರೆ. ವಿಧಾನಸಭೆ ಚುನಾವಣೆ ಇನ್ನೂ ಹೇಗಿದ್ದರೂ ದೂರವಿದೆಯಲ್ಲ.

English summary
Who has to protest when a Kannadiga is insulted? Film stars or Kannada activists or general public? A Kannada has been ill treated when he asked the playback singer Rajesh Krishnan to sing a Kannada song? Is it crime? Where are Yash, Jaggesh etc?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X