ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊರ ವರ್ತುಲ ರಸ್ತೆ ವೈಟ್ ಟಾಪಿಂಗ್ ಕಾಮಗಾರಿ: ಟ್ರಾಫಿಕ್ ಜಾಮ್ ಭೀತಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 21: ಇದೀಗ ಬೆಂಗಳೂರಿನಾದ್ಯಂತ ವೈಟ್‌ಟಾಪಿಂಗ್‌ ಕಾಮಗಾರಿ ಪೂರೈಸಿರುವ ಬಿಬಿಎಂಪಿ ನಗರದ ಹೊರ ವರ್ತುಲ ರಸ್ತೆಗಳಿಗೂ ವೈಟ್‌ಟಾಪಿಂಗ್‌ ಮಾಡಲು ಹೊರಟಿದೆ.

ಚುನಾವಣೆ ಮುಗಿದರೂ ಆರಂಭವಾಗದೆ ಅರ್ಧಕ್ಕೆ ನಿಂತ ವೈಟ್‌ ಟಾಪಿಂಗ್ ಕಾಮಗಾರಿಚುನಾವಣೆ ಮುಗಿದರೂ ಆರಂಭವಾಗದೆ ಅರ್ಧಕ್ಕೆ ನಿಂತ ವೈಟ್‌ ಟಾಪಿಂಗ್ ಕಾಮಗಾರಿ

ಹೆಬ್ಬಾಳ ಮೇಲ್ಸೇತುವೆ ಜಂಕ್ಷನ್‌ನಿಂದ ಹೆಣ್ಣೂರು ರಸ್ತೆಯವರೆಗೆ ಎಡಬದಿಯ ಒಂದು ಮಾರ್ಗದಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ಈ ಎಡ ಬದಿಯ ರಸ್ತೆಯಲ್ಲಿನ ನ.11ರವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಹೆಬ್ಬಾಳ ಮೇಲ್ಸೇತುವೆಯಿಂದ ಹೆಣ್ಣೂರು ರಸ್ತೆಯ ಜಂಕ್ಷನ್‌ ಕಡೆಗೆ ತೆರಳುವ ವಾಹನ ಸವಾರರು ಸರ್ವೀಸ್‌ ರಸ್ತೆಯಲ್ಲಿ ಸಂಚರಿಸಲು ಸೂಚಿಸಲಾಗಿದೆ.

ವೈಟ್‌ ಟಾಪಿಂಗ್‌ ಮತ್ತೆ ಶುರು: ಬಿಬಿಎಂಪಿ-ಪೊಲೀಸರ ನಡುವೆ ಸಹಮತವೈಟ್‌ ಟಾಪಿಂಗ್‌ ಮತ್ತೆ ಶುರು: ಬಿಬಿಎಂಪಿ-ಪೊಲೀಸರ ನಡುವೆ ಸಹಮತ

ಹಾಗೆಯೇ, ಸುಮನಹಳ್ಳಿ ಮೇಲ್ಸೇತುವೆ ಜಂಕ್ಷನ್‌ನಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗೆ ಎಡ ಬದಿಯ ರಸ್ತೆಗೆ ವೈಟ್‌ಟಾಪಿಂಗ್‌ ಮಾಡಲಾಗುತ್ತಿದ್ದು, ಆ.27ರಿಂದ ಸೆಪ್ಟೆಂಬರ್‌ 26ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸುಮನಹಳ್ಳಿ ಕಡೆಯಿಂದ ನಾಯಂಹಳ್ಳಿ ಕಡೆ ಸಂಚರಿಸುವವರು ಸರ್ವೀಸ್‌ ರಸ್ತೆಯಲ್ಲಿ ತೆರಳಲು ಅನುವು ಮಾಡಿಕೊಡಲಾಗಿದೆ.

White topping in ORR may causes traffic jam

ನಗರದ ಹೊರ ವರ್ತುಲ ಸೇರಿ 29ರಸ್ತೆಗಳನ್ನು ಪಾಲಿಕೆ ವೈಟ್‌ ಟಾಪಿಂಗ್‌ನಡಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅದರಂತೆ 972.69 ಕೋಟಿ ರೂ. ವೆಚ್ಚದಲ್ಲಿ 93.47ಕಿ.ಮೀ ರಸ್ತೆ ಅಭಿವೃದ್ಧಿ ಯೋಜನೆಯ ಉದ್ದೇಶವಾಗಿದೆ. ಅದರಂತೆ ಮೊದಲ ಹಂತದಲ್ಲಿ 281 ಕೋಟಿ ರೂ. ವೆಚ್ಚದಲ್ಲಿ ಐದು ಮಾರ್ಗಗಳ 39.80 ಕಿ.ಮೀ ವೈಟ್‌ಟಾಪಿಂಗ್‌ ಮಾಡಲಾಗುತ್ತದೆ. ಈವರೆಗೆ 9.5ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ.

English summary
BBMP will taking work for white topping in Outer Ring Road from August 27. Following this, traffic jam may occur in Hebbal, Sumanahalli and other flyovers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X