ಕನಿಷ್ಠ ಕೂಲಿ ನೀಡದ ಮಾಲೀಕರಿಗೆ ಒದಗಿ ಬಂತು ಸಂಕಷ್ಟ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 10: ಕನಿಷ್ಠ ಕೂಲಿಯನ್ನೂ ನೀಡದೆ ನೌಕರರನ್ನು ಸತಾಯಿಸುವ ಮಾಲೀಕರಿಗೆ ರು. 10ಸಾವಿರ ದಂಡ ಹಾಗೂ ಆರು ತಿಂಗಳ ಜೈಲು ಸಜೆಯನ್ನು ವಿಧಿಸುವ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು.

ಕನಿಷ್ಠ ಮಜೂರಿಗಳ ತಿದ್ದುಪಡಿ ವಿದೇಯಕ-2017 ಅನ್ನು ಕಲಾಪ ಆರಂಭದಲ್ಲಿಯೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಡಿಸಿದರು. ಮೂಲ ಕಾಯ್ದೆಯನ್ನು 1948ರಲ್ಲಿ ಸೆಕ್ಷನ್ 20, 22,22ಎಗೆ ತಿದ್ದುಪಡಿ ಮಾಡಲಾಯಿತು. ಮೂಲ ವಿದೇಯಕದಲ್ಲಿ ಯಾವುದೇ ವ್ಯಕ್ತಿ ಕನಿಷ್ಠ ಕೂಲಿ ಕೊಡದೆ ಸತಾಯಿಸಿದರೆ ಅಥವಾ ಕಿರುಕುಳ ನೀಡಿದರೆ ಅಂತಹ ವ್ಯಕ್ತಿಯ ವಿರುದ್ಧ ಕಾರ್ಮಿಕ ಇಲಾಖೆ ಆಯುಕ್ತರು ಕೇಂದ್ರ ಸರಕಾರದ ಅದಿಕಾರಿ ಅಥವಾ ಸಿವಿಲ್ ನ್ಯಾಯಾಧೀಶರಿಗೆ ದೂರು ನೀಡಬಹುದು ಎಂದು ವಿವರಿಸಲಾಗಿದೆ.[ರಾಮನಗರದಲ್ಲಿ ಜೀತ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕಿತು]

Which owner Without giving the minimum wage: 10 thousand fine and 6 month jail

ಈ ಮೂಲ ಕಾಯ್ದೆಯಲ್ಲಿ ದಂಡದ ಪ್ರಮಾಣವನ್ನು 500ರೂ. ಮತ್ತು 6 ತಿಂಗಳ ಜೈಲು ಶಿಕ್ಷೆಯನ್ನು ನಿಗದಿ ಮಾಡಲಾಗಿತ್ತು. ಅದಕ್ಕೆ ತಿದ್ದುಪಡಿ ತಂದು ದಂಡದ ಪ್ರಮಾಣವನ್ನು 5ರಿಂದ 10ಸಾವಿರ ರೂ.ವರೆಗೂ ಹೆಚ್ಚಿಸಲಾಗಿದೆ. ಜೊತೆಗೆ ಪರಿಣಾಮಕಾರಿ ಆಚರಣೆಗೆ ಒತ್ತು ನೀಡಬೇಕೆಂದು ಲಾಡ್ ಮನವಿ ಮಾಡಿದರು.

ಭಾರತ ಜಾಗತಿಕವಾಗಿ ಬೆಳೆದರೂ ದೇಶದಲ್ಲಿ ಕಾರ್ಮಿಕರನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುವ ಮಾಲೀಕರ ವಿರುದ್ಧ ಕ್ರಮಜರುಗಿಸಲು ಮತ್ತು ಕಾರ್ಮಿಕರು ತಮ್ಮ ಹಕ್ಕು ಚಲಾಯಿಸಲು ಉತ್ತಮ ಮಾರ್ಗ ಎಂದು ನಾಗರಿಕರು ಯೋಚಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Which owner without giving minimum wage Against 10 thousand fine and 6 month jail amendment bill presented by Labour Minister Santosh Lad in Assembly.
Please Wait while comments are loading...