ಬೆಂಗಳೂರಲ್ಲಿ ಎಲ್‌ಇಡಿ ಬಲ್ಬ್ ಎಲ್ಲೆಲ್ಲಿ ಸಿಗುತ್ತೆ?

Posted By:
Subscribe to Oneindia Kannada

ಬೆಂಗಳೂರು, ಜನವರಿ 28 : ಕರ್ನಾಟಕ ಸರ್ಕಾರದ ಇಂಧನ ಇಲಾಖೆ ವಿದ್ಯುತ್ ಉಳಿತಾಯಕ್ಕಾಗಿ ಗೃಹ ಬಳಕೆ ಗ್ರಾಹಕರಿಗೆ ಎಲ್‌ಇಡಿ ಬಲ್ಬ್ ವಿತರಣೆ ಮಾಡುವ ಹೊಸ ಬೆಳಕು ಯೋಜನೆಯನ್ನು ಜಾರಿಗೆ ತಂದಿದೆ. ಒಂದು ತಿಂಗಳಿನಲ್ಲಿ 8 ಲಕ್ಷ ಎಲ್‌ಇಡಿ ಬಲ್ಬ್ ಗಳನ್ನು ವಿತರಣೆ ಮಾಡಲಾಗಿದೆ.

ಇಂಧನ ಇಲಾಖೆಯು ಕೇಂದ್ರ ಇಂಧನ ಮಂತ್ರಾಲಯದ ಸ್ವಾಮ್ಯ ಸಂಸ್ಥೆಯಾದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್‌ಎಲ್) ಸಹಯೋಗದಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯಡಿ ಅಗ್ಗದ ದರದಲ್ಲಿ ಎಲ್‌ಇಡಿ ಬಲ್ಬ್ ಗಳನ್ನು ವಿತರಿಸಲಾಗುತ್ತಿದೆ.[ಮೈಸೂರಿನಲ್ಲಿ 'ಹೊಸ ಬೆಳಕು' ಯೋಜನೆಗೆ ಚಾಲನೆ]

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯ (ಬೆಸ್ಕಾಂ) ಎಲ್ಲಾ ಕಾರ್ಯ ಮತ್ತು ಪಾಲನಾ ಉಪವಿಭಾಗ ಕಚೇರಿಗಳಲ್ಲಿ ಬಲ್ಬ್ ದೊರೆಯಲಿದೆ. ಕೆಲವು ಬೆಂಗಳೂರು ಒನ್ ಕೇಂದ್ರಗಳಲ್ಲಿಯೂ ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗುತ್ತಿದೆ. [ಎಲ್ ಇಡಿ, ಸಿಎಫ್ಎಲ್, ಸಾಮಾನ್ಯ ಬಲ್ಬ್ ನಡುವಿನ ವ್ಯತ್ಯಾಸ]

ಜನರು ಇತ್ತೀಚಿನ ವಿದ್ಯುತ್ ಬಿಲ್‍ನೊಂದಿಗೆ ಗುರುತಿನ ಚೀಟಿ ತೋರಿಸಿ ಎಲ್‌ಇಡಿ ಬಲ್ಬ್ ಗಳನ್ನು ಪಡೆಯಬಹುದಾಗಿದೆ. ಬೆಂಗಳೂರು ನಗರದಲ್ಲಿ ಎಲ್‌ಇಡಿ ಬಲ್ಬ್ ಸಿಗುವ ಸ್ಥಳಗಳ ಮಾಹಿತಿಯನ್ನು www.delp.in ವೆಬ್‌ಸೈಟ್‌ನಲ್ಲಿಯೂ ಪ್ರಕಟಿಸಲಾಗಿದೆ.

ಹೊಸ ಬೆಳಕು ಯೋಜನೆಯಡಿ ಎಲ್‌ಇಡಿ ಬಲ್ಬ್

ಹೊಸ ಬೆಳಕು ಯೋಜನೆಯಡಿ ಎಲ್‌ಇಡಿ ಬಲ್ಬ್

ಕರ್ನಾಟಕ ಸರ್ಕಾರದ ಇಂಧನ ಇಲಾಖೆಯು ಕೇಂದ್ರ ಇಂಧನ ಮಂತ್ರಾಲಯದ ಸ್ವಾಮ್ಯ ಸಂಸ್ಥೆಯಾದ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್' (ಇಇಎಸ್‌ಎಲ್) ಸಹಯೋಗದಲ್ಲಿ ಹೊಸಬೆಳಕು ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯಡಿ ಅಗ್ಗದ ದರದಲ್ಲಿ ಗೃಹ ಬಳಕೆದಾರರಿಗೆ ಎಲ್‌ಇಡಿ ಬಲ್ಬ್ ಗಳನ್ನು ವಿತರಣೆ ಮಾಡಲಾಗುತ್ತಿದೆ.

ಎಲ್‌ಇಡಿ ಬಲ್ಬ್ ದರಗಳ ಮಾಹಿತಿ

ಎಲ್‌ಇಡಿ ಬಲ್ಬ್ ದರಗಳ ಮಾಹಿತಿ

ಗೃಹಬಳಕೆದಾರರಿಗೆ ಎಲ್‌ಇಡಿ ಬಲ್ಬ್ ವಿತರಣೆ ಮಾಡಲಾಗುತ್ತಿದೆ. 9 ವ್ಯಾಟ್ ಎಲ್‌ಇಡಿ ಬಲ್ಬ್ ದರ ಪ್ರಸ್ತುತ 100 ರೂ. (ಮಾರುಕಟ್ಟೆ ದರ ಅಂದಾಜು 350 ರೂ.). 9 ವ್ಯಾಟ್‌ ಬಲ್ಬ್ ನಿಂದ ಬರುವ ಬೆಳಕು 60 ವ್ಯಾಟ್‌ನಷ್ಟು ಸಾಂಪ್ರದಾಯಕ ಬುರುಡೆ ಬಲ್ಬ್ ಮತ್ತು 14 ವ್ಯಾಟ್‌ನ ಸಿಎಫ್ಎಲ್ ಬಲ್ಬ್ ಗಳಿಗೆ ಸಮನಾಗಿರುತ್ತದೆ. ಈ ಬಲ್ಬ್ ಗಳು ಮೂರು ಮರ್ಷಗಳ ಗ್ಯಾರಂಟಿಯನ್ನು ಹೊಂದಿವೆ.

ಬದಲಾವಣೆ ಮಾಡಿಕೊಡುತ್ತಾರೆ

ಬದಲಾವಣೆ ಮಾಡಿಕೊಡುತ್ತಾರೆ

ಈ ಹೊಸಬೆಳಕು ಯೋಜನೆ ರಾಜ್ಯದಲ್ಲಿ ಸಂಪೂರ್ಣವಾಗಿ ಅನುಷ್ಠಾನಗೊಂಡರೆ ವಾರ್ಷಿಕ 1,287 ಮೆಗಾ ಯೂನಿಟ್ ವಿದ್ಯುತ್ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಇಇಎಸ್‌ಎಲ್ ವಿತರಣೆ ಮಾಡುವ ಬಲ್ಬ್ ಮೂರು ವರ್ಷಗಳ ಅವಧಿಯಲ್ಲಿ ಯಾವುದೇ ರೀತಿಯ ತಾಂತ್ರಿಕ ಕಾರಣಗಳಿಂದ ಹಾಳಾದಲ್ಲಿ ಉಚಿತವಾಗಿ ಬದಲಾವಣೆ ಮಾಡಿಕೊಡುತ್ತಾರೆ.

8 ಲಕ್ಷ ಎಲ್‌ಇಡಿ ಬಲ್ಬ್ ವಿತರಣೆ

8 ಲಕ್ಷ ಎಲ್‌ಇಡಿ ಬಲ್ಬ್ ವಿತರಣೆ

ಡಿಸೆಂಬರ್ 11ರಂದು ಕರ್ನಾಟಕ ಸರ್ಕಾರ ಮೈಸೂರಿನಲ್ಲಿ ಹೊಸಬೆಳಕು ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆ ಜಾರಿಯಾದ ಒಂದು ತಿಂಗಳಲ್ಲಿ 8 ಲಕ್ಷ ಎಲ್‌ಇಡಿ ಬಲ್ಬ್ ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಜನವರು ಯೋಜನೆಗೆ ಪ್ರೋತ್ಸಾಹ ನೀಡುತ್ತಿದ್ದು, ಮನೆಗಳಲ್ಲಿ ಎಲ್‌ಇಡಿ ಬಲ್ಬ್ ಅಳವಡಿಸಿಕೊಳ್ಳುವ ಮೂಲಕ ಇಂಧನ ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಬೆಂಗಳೂರು ಒನ್‌ನಲ್ಲಿ ಲಭ್ಯ

ಬೆಂಗಳೂರು ಒನ್‌ನಲ್ಲಿ ಲಭ್ಯ

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯ (ಬೆಸ್ಕಾಂ)ವ್ಯಾಪ್ತಿಯಲ್ಲಿಯೂ ಈ ಯೋಜನೆಯ ಲಾಭ ಪಡೆಯಲು ಗ್ರಾಹಕರು ಇತ್ತೀಚಿನ ವಿದ್ಯುತ್ ಬಿಲ್‍ನೊಂದಿಗೆ ಗುರುತಿನ ಚೀಟಿ ತೋರಿಸಿ ಎಲ್‌ಇಡಿ ಬಲ್ಬ್ ಗಳನ್ನು ಪಡೆಯಬಹುದಾಗಿದೆ. ಹಲವಾರು ಬೆಂಗಳೂರು ಒನ್ ಕೇಂದ್ರದಲ್ಲಿ ಬಲ್ಬ್ ಸಿಗುತ್ತಿದೆ. ಬೆಂಗಳೂರು ನಗರದಲ್ಲಿ ಎಲ್‌ಇಡಿ ಬಲ್ಬ್ ಸಿಗುವ ಸ್ಥಳಗಳ ಮಾಹಿತಿಯನ್ನು www.delp.in ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government launched the Energy Department’s Hosa Belaku scheme, that aims to promote the use of Light-Emitting Diode (LED) bulbs among the public. Under the scheme department has proposed to provide 6 core nine-watt LED bulbs to households. Where do we get led bulbs in Bengaluru.
Please Wait while comments are loading...