ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ನಾನು ಮುಖ್ಯಮಂತ್ರಿಯಾಗಿದ್ದಾಗ ಲೂಟಿ ಮಾಡುತ್ತಿದ್ದವರ ಕೈಕಟ್ಟಿ ಹಾಕಿದ್ದೆ'

|
Google Oneindia Kannada News

ಬೆಂಗಳೂರು, ಜನವರಿ 20 : ನಾನು ಮುಖ್ಯಮಂತ್ರಿಯಾಗಿದ್ದಾರೆ ಬೆಂಗಳೂರನ್ನು ಲೂಟಿ ಮಾಡುತ್ತಿದ್ದವರ ಕೈಗಳನ್ನು ಕಟ್ಟಿಹಾಕಿದ್ದೆ. ಈಗ ಮತ್ತದೇ ಪರಿಪಾಠ ಪ್ರಾರಂಭವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದ ಬಳಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಒಂದೂವರೆ ವರ್ಷ ಮುಖ್ಯಮಂತ್ರಿಯಾಗಿದ್ದೆ. ಸಂದರ್ಭದಲ್ಲಿ ಬೆಂಗಳೂರನ್ನು ಲೂಟಿ ಮಾಡುತ್ತಿದವರ ಕೈ ಕಟ್ಟಿಹಾಕಿದ್ದೆ ಎಂದರು.

ಸಿದ್ದರಾಮಯ್ಯ ಬಗ್ಗೆ ಎಚ್ಡಿಕೆ ಹೇಳಿದ 'ಆಲಿಬಾಬ ಔರ್ ಚಾಲೀಸ್ ಕಳ್ಳರ' ಕಥೆಸಿದ್ದರಾಮಯ್ಯ ಬಗ್ಗೆ ಎಚ್ಡಿಕೆ ಹೇಳಿದ 'ಆಲಿಬಾಬ ಔರ್ ಚಾಲೀಸ್ ಕಳ್ಳರ' ಕಥೆ

ಬೆಂಗಳೂರು ಅಭಿವೃದ್ಧಿಗೆ ಯಾರು ಮುಹೂರ್ತಹಾಕಿದ್ದು ಎಂಬುದು ಜನರಿಗೆ ತಿಳಿದಿದೆ. ಈಗಿನವರು ನಾವು ಎಲ್ಲವನ್ನೂ ಮಾಡಿದ್ದೇವೆ ಎಂದು ಹೇಳುತ್ತಾರೆ ಆದರೆ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರಿವುದೇ ದೊಡ್ಡ ಸಾಧನೆ ಎಂದರು.

when i was chief minister there were no looters in state

ಈ ರಾಜ್ಯದಲ್ಲಿ ಎಲ್ಲಿದೆ ಕಾನೂನು? ಹಾಡಹಗಲೇ ಕೊಲೆ, ದರೋಡೆ ಹಾಗೂ ಸುಲಿಗೆಗಳು ನಡೆಯುತ್ತಿವೆ. ಅಧಿಕಾರಿಗಳು ಕೆಂಪಯ್ಯನ ಉಪಟಳದಿಂದ ಕೈಚೆಲ್ಲಿ ಕುಳಿತಿದ್ದಾರೆ. ರಾಜ್ಯದಲ್ಲಿ ಜನರು, ಅಧಿಕಾರಿಗಳು ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ಸರ್ಕಾರವನ್ನು ಟೀಕಿಸಿದರು.

ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸಲು ಹೋರಾಟ ಮಾಡಿದ್ದೆ. ಒಬ್ಬ ಮಹಾನುಭಾವನನ್ನು ಎಂಎಲ್‌ಎ ಮಾಡುವುದಕ್ಕಾಗಿ ದರಿದ್ರ ನಾರಾಯಣ ಸಮಾವೇಶ ಮಾಡಿದ್ದೆ ಎಂದು ಪರೋಕ್ಷವಾಗಿ ಬಂಡಾಯ ಶಾಸಕ ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದರು.

English summary
Jds supremo and former Prime minister HD Devegowda opined that during Siddaramaiah administration we found lot of looters in the state. But that was not the situation when i was chief minister Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X