ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿನ್ನಾಭರಣ ಧರಿಸಿ ವಾಟ್ಸಾಪ್ ಡಿಪಿ ಹಾಕಿದ್ದ ಕಳ್ಳಿ ಸಿಕ್ಕಿ ಬಿದ್ದಳು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 4: ವಾಟ್ಸಪ್‌ ಡಿಪಿ ಇಂದಲೂ ಕಳ್ಳರನ್ನು ಹಿಡಿಯಬಹುದು ಎಂದರೆ ನೀವು ನಂಬ್ತೀರಾ, ನಂಬಲೇ ಬೇಕು ಇಂತಹ ಒಂದು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಾಟ್ಸ್ಆ್ಯಪ್ ಡಿಸ್‌ಪ್ಲೇ ಪಿಕ್ಚರ್‌ನಿಂದ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಿರುವ ಶ್ರೀರಾಮಪುರ ಪೊಲೀಸರು ಆರೋಪಿಯನ್ನು ಬಂಧಿಸಿ 150 ಗ್ರಾಂ ಚಿನ್ನಾಭರಣ ಮತ್ತು 2 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕವಿತಾ ಬಾಯಿ ಬಂಧಿತೆ, ಶ್ರೀರಾಮಪುರ ನಿವಾಸಿ ಖಾಸಗಿ ಕಂಪನಿಯ ನಿವೃತ್ತ ಅಧಿಕಾರಿ ಸತ್ಯನಾರಾಯಣರಾವ್‌ ಎಂಬುವವರ ಮನೆಯಲ್ಲಿ 2017ರ ಮೇ ತಿಂಗಳಲ್ಲಿ ಆರೋಪಿ ಕಳ್ಳತನ ಮಾಡಿದ್ದಳು.

ಶಿವಮೊಗ್ಗ: ಕಳ್ಳತನ ಮಾಡಿ ಬೀರುಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳುಶಿವಮೊಗ್ಗ: ಕಳ್ಳತನ ಮಾಡಿ ಬೀರುಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಮೂಡಲಪಾಳ್ಯವಾಸವಿದ್ದ ಕವಿತಾಗೆ ವಿವಾಹವಾಗಿದ್ದು, ಮೊದಲ ಪತಿಯಿಂದ ದೂರವಾಗಿದ್ದಳು, ಬಳಿಕ ಸುರೇಶ್‌ ಎಂಬಾತನ್ನು ಮದುವೆಯಾಗಿದ್ದಳು. ಈತ ಯಾವುದೇ ಕೆಲಸಕ್ಕೆ ಹೋಗೆ ಮನೆಯಲ್ಲಿಯೇ ಇರುತ್ತಿದ್ದ.

WhatsApp DP helped to trace gold and ornaments theft case

ಈಕೆ 2017 ಫೆಬ್ರವರಿಯಲ್ಲಿ ಸತ್ಯನಾರಾಯಣ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದಳು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಸತ್ಯನಾರಾಯಣರಾವ್‌ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಆರೈಕೆಗಾಗಿ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಕವಿತಾ ಚಿನ್ನಾಭರಣವನ್ನು ದೋಚಿದ್ದಳು. ಬಳಿಕ ಕಳ್ಳತನವಾಗಿರುವುದು ಗೊತ್ತಾಗಿ ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಕಾರಣ ಕವಿತಾ ಮೇಲೆ ಅನುಮಾನಪಟ್ಟಿರಲಿಲ್ಲ.

ಕಳ್ಳತನ ಮಾಡಿದ್ದ ಚಿನ್ನಾಭರಣ ವಿಲೇವಾರಿ ಮಾಡಿದ್ದ ಕವಿತಾ ಹೊಸ ತಾಳಿ ಲಾಂಗ್‌ ಚೈನ್‌ ಮಾಡಿಸಿಕೊಂಡಿದ್ದಳು. ಇತ್ತೀಚೆಗೆ ಅವುಗಳನ್ನು ಮೈಮೇಲೆ ಹಾಕಿಕೊಂಡು ಓಡಾಡುತ್ತಿದ್ದಳು. ವಾಟ್ಸಾಪ್ ಡಿಪಿಯನ್ನು ನೋಡಿ ಅನುಮಾನ ಬಂದು ಸತ್ಯನಾರಾಯಣ ರಾವ್‌ ಪೊಲೀಸರಿಗೆ ತಿಳಿಸಿದ್ದರು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

English summary
A made who theft gold and ornaments in a retired officer's house was traced through her WhatsApp default picture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X