ಫಾ.ಚಸರಾ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ, ಸಾಧುಕೋಕಿಲ ಹೇಳಿದ್ದೇನು?

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್,17: ಚಾಮರಾಜಪೇಟೆಯ ಸೆಂಟ್ ಜೋಸೆಫ್ ಚರ್ಚ್ ಬಳಿ ಕ್ಯಾಥೋಲಿಕ್ ಕ್ರೈಸ್ತರ ಸಂಘದ ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆ ಕೈಬಿಟ್ಟಿದ್ದು, ಫಾದರ್ ಚಸರಾ ಅವರ ಅಂತ್ಯ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕ್ಯಾಥೋಲಿಕ್ ಕ್ರೈಸ್ತರ ಸಂಘದವರು ಚಸರಾ ಅವರ ವಿರುದ್ಧ ಕೇಳಿ ಬರುತ್ತಿರುವ ಕೆ.ಜೆ ಥಾಮಸ್ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿ ಚಾಮರಾಜಪೇಟೆಯ ಚರ್ಚ್ ಬಳಿ ಬುಧವಾರದಿಂದ ಪ್ರತಿಭಟನೆ ಕೈಗೊಂಡಿದ್ದರು.[ಫಾ.ಚಸರಾ ಸಾವಿಗೆ ಕೊಲೆ ಪ್ರಕರಣದ ಸುಳ್ಳು ಆರೋಪವೇ ಕಾರಣ]

What says sandalwood actor Sadhu kokila about Father Chasara

ಕ್ಯಾಥೋಲಿಕ್ ಕ್ರೈಸ್ತರ ಸಂಘದ ಪದಾಧಿಕಾರಿಗಳು ಟಿ. ನಾರಾಯಣ ಗೌಡ ನೇತೃತ್ವದಲ್ಲಿ ಗೃಹ ಸಚಿವ ಪರಮೇಶ್ವರ್ ಅವರ ಬಳಿ ಫಾದರ್ ಚಸರಾ ಅವರ ವಿರುದ್ಧ ಕೇಳಿ ಬರುತ್ತಿರುವ ಸುಳ್ಳು ಆರೋಪವನ್ನು ಮರು ತನಿಖೆಗೆ ಒಪ್ಪಿಸಬೇಕೆಂದು ಮನವಿ ಮಾಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಸಚಿವರು ಕ್ರೈಸ್ತ ಬಾಂಧವರ ಮಾತುಗಳಿಗೆ ಭರವಸೆ ನೀಡಿದ್ದಾರೆ.

ಸಂಗೀತ ನಿರ್ದೇಶಕ, ನಟ ಸಾಧುಕೋಕಿಲ ಹೇಳಿದ್ದೇನು?

ಚಾಮರಾಜಪೇಟೆಯ ಸೆಂಟ್ ಜೋಸೆಫ್ ಚರ್ಚಿನ ಫಾದರ್ ಚಸರಾ ಅವರ ಅಗಲಿಕೆಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದು, ಸಾಕಷ್ಟು ಮಂದಿ ಕಣ್ಣೀರು ಮಿಡಿದಿದ್ದಾರೆ.[ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಫಾದರ್ ಚಸರಾ ನಿಧನ]

What says sandalwood actor Sadhu kokila about Father Chasara

ಸಾಧುಕೋಕಿಲ ಅವರು ಫಾದರ್ ಚಸರಾ ಅವರ ಬಗ್ಗೆ ಉತ್ತಮ ನುಡಿಗಳನ್ನಾಡಿದ್ದಾರೆ. ನಾನು ಮತ್ತು ಫಾದರ್ ಚಸಾರ ಒಡನಾಡಿಗಳು. ನಾನು ಮತ್ತು ಅವರು ಸೇರಿ ಕ್ರೈಸ್ತ ಗೀತೆಗಳ ಆಲ್ಬಮ್ ಮಾಡಿದ್ದೇವೆ. ನನ್ನ ಹೆಂಡತಿಯನ್ನು ಸಾಕಿದ್ದು ಫಾದರ್ ಚಸರಾ ಅವರು. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೇಂಟ್ ಜೋಸೆಫ್ ಚರ್ಚ್ ಬಳಿ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Catholic Christian Committee get preperation for Father Chasara funeral. Sandalwood Actor Sadhu kokila said some great words about Father Chasara. He was father of Saint Joseph Church, Chamarajpete, Bengaluru
Please Wait while comments are loading...