ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಬಾಯಿ ಬಿಟ್ಟ ಡಿಕೆಶಿ, ರೋಷನ್ ಬೇಗ್

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 22: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ರಚನೆ ಬಿರುಸಿನಿಂದ ಸಾಗಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಾಲಾಗಿರುವ ಉಪಮುಖ್ಯಮಂತ್ರಿ ಸ್ಥಾನಕ್ಕೆ ಭಾರೀ ಪೈಪೋಟಿ ಕಂಡು ಬಂದಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಬಲ ನಾಯಕ ಡಿಕೆ ಶಿವಕುಮಾರ್, "ನಾನು ನನ್ನ ಶಕ್ತಿ ಪ್ರದರ್ಶನವನ್ನು ಇಷ್ಟಪಡುವುದಿಲ್ಲ. ನಾನು ನನ್ನ ಸಂಖ್ಯೆ ತೋರಿಸಲೂ ಯತ್ನಿಸುವುದಿಲ್ಲ. ನನಗೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರಲ್ಲಿ ನಂಬಿಕೆ ಇದೆ. ನಾವೆಲ್ಲರೂ ಒಂದೇ ವ್ಯಕ್ತಿಯ ನಿರ್ಧಾರದ ಬಗ್ಗೆ ನಂಬಿಕೆ ಹೊಂದಿದ್ದೇವೆ; ಅದು ಹೈಕಮಾಂಡ್. ಯಾರು ಎಲ್ಲಿಗೆ ಎಂಬ ಬಗ್ಗೆ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ," ಎಂದಿದ್ದಾರೆ.

ರೋಷನ್ ಬೇಗ್ ರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮುಸ್ಲಿಮರ ಆಗ್ರಹರೋಷನ್ ಬೇಗ್ ರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಮುಸ್ಲಿಮರ ಆಗ್ರಹ

ಇನ್ನು ಇಂದು ಬೆಳಿಗ್ಗೆ ಮುಸ್ಲಿಂ ಸಂಘಟನೆಗಳು ನಮ್ಮ ಸಮುದಾಯದ ಹಿರಿಯ ಕಾಂಗ್ರೆಸ್ ನಾಯಕ ರೋಷನ್ ಬೇಗ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದವು.

What is wrong in it? Roshan Baig on Muslim organisations demand on Deputy CM

ಈ ಬಗ್ಗೆ ಹೇಳಿಕೆ ನೀಡಿರುವ ರೋಷನ್ ಬೇಗ್, "ಇದರಲ್ಲಿ ತಪ್ಪೇನು? ಯಾಕಾಗಬಾರದು? ಬೇರೆ ಸಮುದಾಯದ ಜನರು ಬೇಡಿಕೆ ಇಡಬಹುದಾದರೆ, ನನ್ನ ಸಮುದಾಯದವರು ಯಾಕೆ ಆಗ್ರಹಿಸಬಾರದು? ಆದರೆ ಕೊನೆಗೆ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ," ಎಂದಿದ್ದಾರೆ.

English summary
"What is wrong in it? Why not? If people from other communities can make demands then why can't people from my community? But, in the end high command will decide," said Congress MLA R. Roshan Baig on Muslim organisations demanding that he be made Deputy CM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X