ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ಯಾಜ್ಯ ಸುಡುವುದರಿಂದ ಈ 22 ಕಾಯಿಲೆಗಳು ಬರಬಹುದು ಹುಷಾರ್!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22 : ತ್ಯಾಜ್ಯವನ್ನು ಸುಟ್ಟು ಅದರಿಂದ ಬರುವ ಹೊಗೆ ಸೇವನೆಯಿಂದ ಎಷ್ಟು ರೋಗಗಳು ಬರಬಹುದು ಎಂದು ನೀವು ಊಹಿಸಲೂ ಸಾಧ್ಯವಿಲ್ಲ.

ಯು ಎಸ್‌ ಪಬ್ಲಿಕ್ ಹೆಲ್ತ್ ಸರ್ವೀಸ್ ನಡೆಸಿದ ಸಮೀಕ್ಷೆ ಪ್ರಕಾರ ಆ ಹೊಗೆಯಿಂದ 22 ರೋಗಗಳು ಬರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಲ್ಲಿ ದಿನನಿತ್ಯ ನೂರಾರು ಟನ್‌ ತ್ಯಾಜ್ಯ ಶೇಖರಣೆಯಾಗುತ್ತದೆ.

ಅದೆಲ್ಲಾ ಎಲ್ಲಿ ಹೋಗುತ್ತದೆ ಎಂದು ಯೋಚನೆ ಮಾಡಿದ್ದೀರಾ ಒಂದಷ್ಟು ಟನ್ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಹೋದರೆ ಇನ್ನು ಕೆಲವು ನಿರ್ಜನ ಪ್ರದೇಶಗಳಿಗೆ ಹೋಗುತ್ತವೆ ಇನ್ನೂ ಕೆಲವನ್ನು ರಸ್ತೆಯ ತುದಿಯಲ್ಲಿ ಹಾಕಿ ದಿನದ ಅಂತ್ಯಕ್ಕೆ ಪೌರಕಾರ್ಮಿಕರು ಅದಕ್ಕೆ ಬೆಂಕಿ ಹಚ್ಚುತ್ತಾರೆ.

ಬಾಗಲೂರು ತ್ಯಾಜ್ಯ ಘಟಕ ದುರವಸ್ತೆ: ಬಿಬಿಎಂಪಿಗೆ ಎನ್‌ಜಿಟಿ ತಪರಾಕಿ ಬಾಗಲೂರು ತ್ಯಾಜ್ಯ ಘಟಕ ದುರವಸ್ತೆ: ಬಿಬಿಎಂಪಿಗೆ ಎನ್‌ಜಿಟಿ ತಪರಾಕಿ

ರಸ್ತೆ ಬದಿಯಲ್ಲಿ ಕಸಕ್ಕೆ ಬೆಂಕಿ ಹಚ್ಚುವುದು ಕಾನೂನು ಬಾಹಿರ ಹಾಗೆ ಮಾಡಿದರೆ ದಂಡ ವಿಧಿಸುತ್ತೇವೆ ಎಂದು ಬಿಬಿಎಂಪಿ ಬರಿ ಬಾಯಿ ಮಾತಿನಲ್ಲಷ್ಟೇ ಹೇಳುತ್ತಿದೆ. ಆದರೆ ಇದುವರೆಗೂ ಯಾರಿಗೂ ದಂಡ ಹಾಕಿಲ್ಲ ಎನ್ನುವುದು ಆರ್‌ಟಿಐ ದಾಖಲೆ ಮೂಲಕ ಖಚಿತವಾಗಿದೆ.

ಅಪಾರ್ಟ್ ಮೆಂಟ್, ಮನೆಗಳಿಂದ ಶೇಖರಿಸಿದ ಕಸಕ್ಕೆ ಬೆಂಕಿ

ಅಪಾರ್ಟ್ ಮೆಂಟ್, ಮನೆಗಳಿಂದ ಶೇಖರಿಸಿದ ಕಸಕ್ಕೆ ಬೆಂಕಿ

ತ್ಯಾಜ್ಯ ಗುತ್ತಿಗೆದಾರರು ಅಪಾರ್ಟ್ ಮೆಂಟ್, ಮನೆಗಳಿಂದ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ರಸ್ತೆ ಪಕ್ಕದಲ್ಲಿ ಸುರಿದು ಬೆಂಕಿ ಹಚ್ಚುವುದು ಪೌರಕಾರ್ಮಿಕರ ದಿನನಿತ್ಯದ ಕಾಯಕವಾಗಿಬಿಟ್ಟಿದೆ.

ಜಾಗ ಯಾವುದಯ್ಯ ಬೆಂಗಳೂರಿನ ತ್ಯಾಜ್ಯ ಹಾಕೋಕೆ ದಾರಿ ತೋರಿಸಯ್ಯ! ಜಾಗ ಯಾವುದಯ್ಯ ಬೆಂಗಳೂರಿನ ತ್ಯಾಜ್ಯ ಹಾಕೋಕೆ ದಾರಿ ತೋರಿಸಯ್ಯ!

ತ್ಯಾಜ್ಯ ಸುಡುವುದರಿಂದ 22 ಕಾಯಿಲೆಗಳು ಬರಬಹುದು

ತ್ಯಾಜ್ಯ ಸುಡುವುದರಿಂದ 22 ಕಾಯಿಲೆಗಳು ಬರಬಹುದು

ಯು ಎಸ್‌ ಪಬ್ಲಿಕ್ ಹೆಲ್ತ್ ಸರ್ವೀಸ್ ತ್ಯಾಜ್ಯಗಳಿಂದ ಉಂಟಾಗುವ 22 ರೋಗಗಳನ್ನು ಪಟ್ಟಿ ಮಾಡಿದೆ. ಅಸ್ತಮಾ, ಹಾರ್ಟ್ ಅಟ್ಯಾಕ್, ಎಂಪಿಸೆಮಾ ಹೀಗೆ 22ಕ್ಕೂ ಹೆಚ್ಚು ರೋಗಗಳು ಬರುವ ಸಾಧ್ಯತೆ ಇರುತ್ತದೆ.

ಶ್ವಾಸಕೋಶದಲ್ಲಿರುವ ಗಾಳಿಯನ್ನು ಫಿಲ್ಟರ್ ಮಾಡಬಲ್ಲಂತಹ ಯಂತ್ರದಲ್ಲಿ ಪರ್ಟಿಕ್ಯುಲೇಟ್ ಮ್ಯಾಟರ್ಸ್ 2.5 ಮೆಟಿರೀಯಲ್ ಗಿಂತ ಹೆಚ್ಚು ದೂಳಿನ ಕಣಗಳು ಸೇರಿಕೊಂಡರೆ ಅದು ರಕ್ತನಾಳಕ್ಕೆ ಸೇರಿ ರಕ್ತವನ್ನು ಅಲ್ಲೇ ಹೆಪ್ಪುಗಟ್ಟುವಂತೆ ಮಾಡುತ್ತದೆ ಇದು ಹೃದಯಾಘಾತಕ್ಕೆ ಕಾರಣವಾಗಬಲ್ಲದು.

ಘನತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ವಿಫಲ: ಸುಪ್ರೀಂ ದಂಡಘನತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ವಿಫಲ: ಸುಪ್ರೀಂ ದಂಡ

ಮರದ ಎಲೆಗಳ ಜತೆ, ಪ್ಲಾಸ್ಟಿಕ್ ಸುಟ್ಟಾಗ ಹಾನಿಕಾರಕ ಮೀಥೇನ್ ಉತ್ಪತ್ತಿ

ಮರದ ಎಲೆಗಳ ಜತೆ, ಪ್ಲಾಸ್ಟಿಕ್ ಸುಟ್ಟಾಗ ಹಾನಿಕಾರಕ ಮೀಥೇನ್ ಉತ್ಪತ್ತಿ

ಮರದ ಎಲೆಗ ಜತೆ ಪ್ಲಾಸ್ಟಿಕ್ ಇನ್ನಿತರೆ ವಸ್ತುಗಳನ್ನು ಸುಟ್ಟಾಗ ಅದರಿಂದ ಮೀಥೇನ್, ಕಾರ್ಬನ್ ಮೋನಾಕ್ಸೈಡ್, ನೈಟ್ರೋಜನ್ ಆಕ್ಸೈಡ್, ಸಲ್ಫರ್ ಡೈಆಕ್ಸೈಡ್ ಉತ್ಪತ್ತಿಯಾಗಿ ಗಾಳಿಯನ್ನು ಸೇರುತ್ತದೆ.

ಜಾತಕಾ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ತ್ಯಾಜ್ಯ ಸುಡುವ ಕ್ರಮದ ವಿರುದ್ಧ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳುತ್ತಿದೆ. ಆದರೂ ಇನ್ನೂ 40 ವಾರ್ಡ್ ಗಳಿಗಿಂತಲೂ ಹೆಚ್ಚು ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸುಡುವ ಪದ್ಧತಿಯನ್ನು ಇನ್ನೂ ಬಿಟ್ಟಿಲ್ಲ.ಇದರಿಂದ ಪೌರಕಾರ್ಮಿಕರಿಗೂ ತೊಂದರೆ ಉಂಟಾಗಲಿದೆ.

ಹೃದಯ ಕಾಯಿಲೆ: 40 ವರ್ಷದೊಳಗಿನವರೇ ಹೆಚ್ಚು

ಹೃದಯ ಕಾಯಿಲೆ: 40 ವರ್ಷದೊಳಗಿನವರೇ ಹೆಚ್ಚು

ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯರಾದ ರಾಹುಲ್ ಅವರು ಹೇಳುವ ಪ್ರಕಾರ ಕಳೆದ ಐದು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿವೆ. 40 ವರ್ಷದೊಳಗಿನವರಲ್ಲೇ ಈ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ದಾಖಲೆ ಪ್ರಕಾರ ಶೇ.22 ರಷ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಬಿಪಿ, ಸಕ್ಕರೆ ಕಾಯಿಲೆಯೂ ಹೆಚ್ಚಾಗುತ್ತಿದೆ.

ಆಟೋ, ಕ್ಯಾಬ್ ಡ್ರೈವರ್‌ಗಳೇ ಹೆಚ್ಚು

ಆಟೋ, ಕ್ಯಾಬ್ ಡ್ರೈವರ್‌ಗಳೇ ಹೆಚ್ಚು

2017ರ ಏಪ್ರಿಲ್ ನಲ್ಲಿ 40 ವರ್ಷದೊಳಗಿನವರು 1 ಸಾವಿರ ಮಂದಿ ದಾಖಲಾಗಿದ್ದರು.ಇವರಲ್ಲಿ ಕ್ಯಾಬ್ ಮತ್ತು ಆಟೋ ಡ್ರೈವರ್ ಗಳ ಸಂಖ್ಯೆಯೇ ಹೆಚ್ಚು ಎಂದು ತಿಳಿದುಬಂದಿದೆ. ಕಳೆದ 17 ವರ್ಷಗಳಲ್ಲಿ ಮಕ್ಕಳಲ್ಲಿ ಅಸ್ತಮಾ ಸಂಖ್ಯೆ ಶೇ.25ರಷ್ಟು ಹೆಚ್ಚಳವಾಗಿದೆ.

ಪೌರಕಾರ್ಮಿಕರಲ್ಲಿ ಜಾಗೃತಿ ಕೊರತೆ

ಪೌರಕಾರ್ಮಿಕರಲ್ಲಿ ಜಾಗೃತಿ ಕೊರತೆ

ಪೌರಕಾರ್ಮಿಕರಲ್ಲಿ ಜಾಗೃತಿ ಕೊರತೆ ಇದೆ, ಇವರು ಕೂಡ ರೋಗದಿಂದ ಹೊರತಾಗಿಲ್ಲ, ಬಿಬಿಎಂಪಿಯು ಗ್ಲೌಸ್ ಸೇರಿದಂತೆ ಇನ್ನಿತರೆ ಯಾವುದೇ ಸುರಕ್ಷತಾ ಸಲಕರಣೆಗಳನ್ನು ನೀಡದ ಕಾರಣ ಸಾಕಷ್ಟು ಪೌರಕಾರ್ಮಿಕರು ರೋಗಗಳಿಗೆ ತುತ್ತಾಗುತ್ತಿದ್ದಾರೆ.

English summary
Garbage is a paradox in Bengaluru. Even though garbage dumping and burning in street corners is illegal, and in spite of the Bruhat Bengaluru Mahanagara Palike outlining penalties for those who violate rules, the practice continues to be rampant in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X