ಸಿಂಬಯೋಸಿಸ್ ಮಾಧ್ಯಮ ಸಂಸ್ಥೆ ಬಗ್ಗೆ ಎಚ್ಚರ: ವಿಕ್ರಮ್ ಸಂಪತ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 30: ಸಿಂಬಯೋಸಿಸ್ ಮಾಧ್ಯಮ ಹಾಗೂ ಸಂವಹನ ಸಂಸ್ಥೆ ವಿರುದ್ಧ ಯುವ ಲೇಖಕ ವಿಕ್ರಮ್ ಸಂಪತ್ ಅವರು ಕಿಡಿಕಾರಿದ್ದಾರೆ. ವಿಕ್ರಮ್ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಸೋಮವಾರ ಹಾಕಿರುವ ಸುಧೀರ್ಘ ಪೋಸ್ಟ್ ಬಹುಚರ್ಚಿತ ವಿಷಯವಾಗಿದೆ.

ಸಿಂಬಯೋಸಿಸ್ ಸಂಸ್ಥೆಯ ನಿರ್ದೇಶಕರ ವಿರುದ್ಧ ನೇರ ಆರೋಪ ಮಾಡಿ, ವಿದ್ಯಾರ್ಥಿ, ವಿದ್ಯಾರ್ಥಿನಿಯ ಮೇಲೆ ಕಿರುಕುಳ, ಹಲ್ಲೆ ನಡೆದರೂ ಮ್ಯಾನೇಜ್ಮೆಂಟ್ ಕಣ್ಮುಚ್ಚಿಕೊಂಡಿದೆ. ಸಂಸ್ಥೆಗೆ ಅತಿಥಿಗಳಾಗಿ ಬರುವ ಗಣ್ಯರ ಉಪಟಳ ಸಹಿಸಲು ಸಾಧ್ಯವಾಗುತ್ತಿಲ್ಲ. [ಕಿರಿಯ ಗೆಳೆಯ ವಿಕ್ರಮ್ ಬರೆದ ಬೃಹತ್ ಗ್ರಂಥ]

What did Author Vikram Sampath advice to Students about Symbiosis SSMC

ನಾನು ಸಂಸ್ಥೆ ತೊರೆದಿದ್ದು ಈಗಲೂ ನೆನಪಿದೆ. ಯಾವುದೇ ಬೋಧಕ ಅಥವಾ ಬೋಧಕೇತರ ಸಿಬ್ಬಂದಿ ಜತೆ ಮಾತನಾಡಲು ಬಿಡಲಿಲ್ಲ. ನನ್ನ ಲ್ಯಾಪ್ ಟಾಪ್, ಐಡಿ ಕಾರ್ಡ್ ಕಸಿದುಕೊಳ್ಳಲಾಯಿತು. ಇನ್ನು ವಿದ್ಯಾರ್ಥಿಗಳ ಪಾಡೇನು ಎಂದಿದ್ದಾರೆ.

ಆದರೆ, ಸಂಪತ್ ಅವರ ಆರೋಪವನ್ನು ಅಲ್ಲಗೆಳೆದಿರುವ ಸಿಂಬಯೋಸಿಸ್ ಸೋಸೈಟಿಯ ಪ್ರಧಾನ ನಿರ್ದೇಶಕರಾದ ವಿದ್ಯಾ ಯೆರ್ವಾಡೆಕರ್ ಅವರು ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿ, ಸಂಪತ್ ಅವರು ಸಂಸ್ಥೆಗೆ ಹಾಜರಾಗಿದ್ದೇ ಕಡಿಮೆ, ಹೀಗಾಗಿ ಅವರು ನವೆಂಬರ್ ನಲ್ಲಿ ಸಂಸ್ಥೆ ತೊರೆಯಬೇಕಾಯಿತು ಎಂದಿದ್ದಾರೆ. ವಿಕ್ರಮ್ ಸಂಪತ್ ಅವರು ಬರೆದ ಫೇಸ್ ಬುಕ್ ಪೋಸ್ಟ್ ಇಲ್ಲಿದೆ ಓದಿ...

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Author Vikram Sampath has accused the management of Symbiosis School of Media and Communication (SSMC), Bengaluru, of irregularities and advised Parents and students to think a 100 times before their join any institute
Please Wait while comments are loading...