ಕಲಾಗ್ರಾಮದಲ್ಲಿ ವಿಮೂವ್ 'ಸಂಬಂಧಗಳ ಸುತ್ತ' ನಾಟಕ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21: ಮೂವರು ನಟಿಯರು, ಹದಿನೈದು ಪಾತ್ರಗಳನ್ನು ನಿರ್ವಹಿಸುವ ವಿಶಿಷ್ಟ ನಾಟಕವೊಂದನ್ನು ಮಲ್ಲತ್ತಹಳ್ಳಿ ಸಮೀಪದ ಕಲಾಗ್ರಾಮದಲ್ಲಿ ನವೆಂಬರ್ 23ರಂದು ನೋಡಬಹುದು.

ಈ ನಾಟಕದ ಮೂಲ ಕ್ರೊವೇಶಿಯಾದ ನಾಟಕಕಾರ ಮಿರೊ ಗಾವ್ರಾನ್ ಬರೆದಿರುವ 'All about women'. ನಾಟಕಕಾರ ಅಭಿಷೇಕ್ ಅಯ್ಯಂಗಾರ್ ಇದನ್ನು ಕನ್ನಡಕ್ಕೆ ತಂದಿದ್ದಾರೆ.

WeMove Theatre Sambandhagala Sutta Kalagrama Auditorium November 23

ನಾಟಕದ ಸಾರಾಂಶ: ತಮ್ಮ ಜೀವನದ ವಿಭಿನ್ನ ಕಾಲಘಟ್ಟದಲ್ಲಿರುವ ಐವರು ಹೆಣ್ಣುಮಕ್ಕಳ ಐದು ವಿಶಿಷ್ಟ ಕಥೆಗಳನ್ನು ಹೆಣೆದಿರುವ 'ಸಂಬಂಧಗಳ ಸುತ್ತ' ನಾಟಕವು, ಸ್ನೇಹ, ಪ್ರೀತಿ, ಮೋಹ, ದುರಾಸೆ ಮತ್ತು ಮುಗ್ಧ ಸಂಬಂಧಗಳ ಬಿಂಬವಾಗಿದೆ.

ಈ ಸಂಬಂಧಗಳು ಕಾಲನ ಹೊಡೆತಕ್ಕೆ ತುತ್ತಾದಾಗ ಯಾವ ಯಾವ ರೀತಿಯ ತಿರುವುಗಳನ್ನು ಪಡೆಯುತ್ತವೆ ಅದರಿಂದ ಈ ಸಂಬಂಧಗಳು ಯಾವ ರೀತಿ ಬದಲಾಗುತ್ತವೆ ಎಂದು ತಿಳಿಸಿಕೊಡುವ ನಾಟಕವೇ 'ಸಂಬಂಧಗಳ ಸುತ್ತ'.

WeMove Theatre Sambandhagala Sutta Kalagrama Auditorium November 23

ತನ್ನ ವಿಭಿನ್ನ, ವಿಶಿಷ್ಟ ಸಮಕಾಲೀನ ನಾಟಕಗಳಾದ ನಮ್ಮ ಮೆಟ್ರೋ, ಮಾಗಡಿ ಡೇಸ್, ಪಿ.ಎಸ್ ಐ ಡೋಂಟ್ ಲವ್ ಯು, ಕಾಕ್.ಟೆಲ್, E=MC2 ಮುಂತಾದ ಕನ್ನಡ ಮತ್ತು ಇಂಗ್ಲೀಷ್ ನಾಟಕಗಳ ಮೂಲಕ ನಾಟಕ ಪ್ರಿಯರ ಮನಸ್ಸಿನಲ್ಲಿ ಮನೆ ಮಾಡಿರುವ ವಿಮೂವ್ ಥೀಯೇಟರ್ ತಂಡವು ಈಗ 'ಸಂಬಂಧಗಳ ಸುತ್ತ' ಎಂಬ ಹೊಸ ಕನ್ನಡ ನಾಟಕವನ್ನು ಮೊದಲ ಬಾರಿಗೆ ಪ್ರದರ್ಶಿಸುತ್ತಿದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
WeMove Theatre is premiering a new Kannada play 'Sambandhagala Sutta' on November 23rd at Kalagrama Auditorium at 7.30PM. This play was originally written by a Croatian writer Miro Gavran and is adapted to Kannada by Playwright Abhishek Iyengar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ