ಕಾಂಗ್ರೆಸ್ಸಿಗೆ ಸೋಮಣ್ಣ ಬರುವುದಾದರೆ ಸ್ವಾಗತ: ವಿಶ್ವನಾಥ್

Posted By:
Subscribe to Oneindia Kannada

ಬೆಂಗಳೂರು, ಜನವರಿ 20: ಬಿಜೆಪಿಯನ್ನು ತೊರೆದು ಕಾಂಗ್ರೆಸ್ಸಿಗೆ ವಿ.ಸೊಮಣ್ಣನವರು ಬರುವುದಾರದರೆ ನನ್ನ ಸ್ವಾಗತವಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಎಚ್. ವಿಶ್ವನಾಥ್ ತಿಳಿಸಿದ್ದಾರೆ.

ವಿ.ಸೋಮಣ್ಣ ನವರು ಕಾಂಗ್ರೆಸ್ಸಿಗೆ ಬಂದರೆ ಸ್ವಾಗತ, ಅವರ ಬಗ್ಗೆ ನನಗೆ ಅಭಿಮಾನವಿದೆ.ಅವರು ಮೊದಲೇ ಗಟ್ಟಿ ಮನಸ್ಸು ಮಾಡಿ ಕಾಂಗ್ರೆಸ್ ಬಿಡದೇ ಇದ್ದಿದ್ದರೆ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದರು. ಅವರಿಗೆ ಮುನ್ನುಗ್ಗಿ ಅಭಿವೃದ್ಧಿ ಕೆಲಸ ಮಾಡುವ ಬಲವಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.[ಮೋದಿ ರಾಬಿನ್ ಹುಡ್ನಂತೆ ಆಡುತ್ತಿದ್ದಾರೆ : ವಿಶ್ವನಾಥ್ ಟೀಕೆ]

Welcome to the Congress in the coming V. Somanna says H. Vishwanath

ಈಶ್ವರಪ್ಪ ಮತ್ತು ಬಿಎಸ್ ವೈ ಜಿಜೆಪಿ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಲು ವಿಶ್ವನಾಥ್ ಹಿಂದೇಟು ಹಾಕಿ, ನಮ್ಮ ಮನೆ ವಿಚಾರ ನಾವು ಮಾತನಾಡಬೇಕು. ಬೇರೆಯವರ ಮನೆಯ ವಿಚಾರ ನಮಗೆ ಬೇಡ ಎಂದು ವ್ಯಂಗವಾಡಿದರು. ಅಲ್ಲದೆ ನಂಜನಗೂಡು ಉಪಚುನಾವಣೆ ಸಂಬಂಧ ಕಾಂಗ್ರೆಸ್ಸಿನಲ್ಲಿಯೆ ಸಾಕಷ್ಟು ಅಭ್ಯರ್ಥಿಗಳಿದ್ದಾರೆ ಎಂದು ಹೇಳಿದರು.

ಇತ್ತ ಬಿಜೆಪಿಯಲ್ಲಿ ವಿ.ಸೋಮಣ್ಣನವರನ್ನು ಬಿಜೆಪಿಯಲ್ಲಿಯೆ ಉಳಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಯುತ್ತಿದ್ದು, ಅನೇಕ ಬಿಜೆಪಿ ಸದಸ್ಯರು ಸಂಧಾನ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Welcome to the Congress in the coming V. Somanna says Congress leader, Former Minister H. Vishwanath in bengaluru.
Please Wait while comments are loading...