ಮದುವೆಯಾದ್ರೆ ಅರಮನೆ ಮೈದಾನದಲ್ಲಿ ಆಗಬೇಕು, ಏನಂತೀರಿ?

Posted By:
Subscribe to Oneindia Kannada

ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಗೆ ಅಪಾರ ಕೊಡುಗೆ ನೀಡುತ್ತಿರುವ ಜತೆಗೆ ಲಕ್ಷಾಂತರ ಉದ್ಯೋಗ ಸೃಷ್ಟಿಸಿರುವ ಪ್ರವಾಸೋದ್ಯಮ ಕ್ಷೇತ್ರ ಸದಾ ಒಂದಲ್ಲ ಒಂದು ನೂತನ ಅವಿಷ್ಕಾರ, ಬೆಳವಣಿಗೆಗಳನ್ನು ಕಾಣುತ್ತಿದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರು ನಗರ, ವೈದ್ಯಕೀಯ ಟೂರಿಸಂ, ಹೆಲಿ ಟೂರಿಸಂ ಹೀಗೆ ನಾನಾ ವಿಧದ ಪ್ರವಾಸೋದ್ಯಕ್ಕೆ ಹೆಸರುವಾಸಿ. ಇವುಗಳ ಸಾಲಿಗೆ ಹೊಸ ಸೇರ್ಪಡೆ ಜಾಗತಿಕ ವಿವಾಹ ಪ್ರವಾಸೋದ್ಯಮ.

ಕೆಲ ವರ್ಷಗಳ ಹಿಂದಿನವರೆಗೆ ವಿವಾಹ ಎಂದರೆ ಬರೀ ಎರಡು ಕುಟುಂಬಗಳ ನಡುವಣದ ಸಂಭ್ರಮವಾಗಿತ್ತು. ಆದರೆ ಅದು ಈಗ ಬದಲಾಗಿದೆ. ಮದುವೆ ಸಂಪ್ರದಾಯಕ್ಕೆ ಪಾಶ್ಚಿಮಾತ್ಯ ಆಚರಣೆಗಳ ಸ್ಪರ್ಶವಾಗಿದೆ. ಹಿಂದೆ ದೇಗುಲ, ಶಾದಿ ಮಹಲ್, ಚರ್ಚ್‌ಗಳಲ್ಲಿ ನಡೆಯುತ್ತಿದ್ದ ಮದುವೆಗಳು ಈಗ ರೆಸಾರ್ಟ್, ಹೋಟೆಲ್‌ಗಳಿಗೆ ಸ್ಥಳಾಂತರಗೊಂಡಿದೆ. ಸಂಪ್ರದಾಯ, ಆಚರಣೆಗಳ ಜತೆಗೆ, ಕುಟುಂಬಗಳ ಶ್ರೀಮಂತಿಕೆ, ಸಾಮಾಜಿಕ ಸ್ಥಾನಮಾನ, ವಧು-ವರ ನಡುವಣ ಪ್ರೀತಿ, ಉದ್ಯೋಗ, ಸ್ನೇಹಿತರು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿವಾಹದ ರೂಪುರೇಷೆ ನಿರ್ಧರಿಸಲಾಗುತ್ತದೆ. [ಮೈಸೂರು ಒಡೆಯರ್ ಗೆ ರಿಲೀಫ್ ಕೊಟ್ಟ ಸುಪ್ರೀಂ ತೀರ್ಪು]

Wedding tourism : Bangalore palace - global hot spot

ಥೀಮ್ ಆಧಾರದ ಮದುವೆಗಳು ಸರ್ವೆ ಸಾಮಾನ್ಯವಾಗುತ್ತಿದೆ. ಐತಿಹಾಸಿಕ ಪ್ರಸಿದ್ಧ ಸ್ಥಳಗಳಲ್ಲಿ ಮದುವೆ ಆಯೋಜನೆ ಜನಪ್ರಿಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳೆದು ನಿಂತಿರುವ ವಿವಾಹ ಪ್ರವಾಸೋದ್ಯಮ, ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ನಿಧಾನವಾಗಿ ಪ್ರವರ್ಧಮಾನಕ್ಕೆ ಬರುತ್ತಿದೆ. ಅದರಲ್ಲೂ ನಗರದ ಹೃದಯಭಾಗದಲ್ಲಿರುವ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಅರಮನೆ ಮೈದಾನ ಈಗ ಇಂತಹ ವಿವಾಹಗಳಿಗೆ ಕೇಂದ್ರ ಬಿಂದುವಾಗಿದೆ.

ಆರೋಗ್ಯ ಪ್ರವಾಸೋದ್ಯಮಕ್ಕೆ ಈಗ ಬೆಂಗಳೂರು ರಾಜಧಾನಿ. ಅದೇ ರೀತಿ ಹೆಲಿ ಟೂರಿಸಂಗೂ. ಈಗ ವಿವಾಹ ಪ್ರವಾಸೋದ್ಯಮದ ಸರದಿ. ಎನ್‌ಆರ್‌ಐಗಳು, ವಿದೇಶಿ ವಧು-ವರರಿಗೆ ಬೆಂಗಳೂರಿನ ಅರಮನೆ ಮೈದಾನ ಎಲ್ಲದಕ್ಕೂ ಸೂಕ್ತವಾಗಿದೆ. ಉತ್ತಮ ಸಂಪರ್ಕ, ಅತ್ಯುತ್ತಮ ಸೌಕರ್ಯ ಅರಮನೆ ಮೈದಾನವನ್ನು ಅದ್ದೂರಿ ವಿದೇಶಿ ಮದುವೆಗಳಿಗೆ ಹೇಳಿ ಮಾಡಿಸಿದಂತಿದೆ. ಈ ವಿವಾಹ ಪ್ರವಾಸೋದ್ಯಮದ ಹಿಂದಿನ ಮಿದುಳು ಖ್ಯಾತ ವಿವಾಹ ಆಯೋಜನೆ ಸಲಹೆಗಾರ, ಪ್ಯಾಲೇಸ್ ಮೈದಾನದಲ್ಲಿರುವ ಗಾಯತ್ರಿ ವಿಹಾರದ ಸಾಗರ್ ಕೇಟರರ್ಸ್ ಸಂಸ್ಥೆಯ ಪಂಕಜ್ ಕೊಠಾರಿ. ಅವರು ಈಗ ಬೆಂಗಳೂರಿನ ಅರಮನೆ ಮೈದಾನವನ್ನು ಈಗ ವಿಶ್ವ ವಿವಾಹ ಪ್ರವಾಸೋದ್ಯಮದ ಕೇಂದ್ರವಾಗಿ ಮಾರ್ಪಾಡಿಸಲು ಪಣತೊಟ್ಟಿದ್ದಾರೆ.

"ಕರ್ನಾಟಕ, ಅದರಲ್ಲೂ ಬೆಂಗಳೂರು ಶ್ರೀಮಂತ ಪರಂಪರೆ ಹೊಂದಿದೆ. ಇಲ್ಲಿನ ಐತಿಹಾಸಿಕ ಸ್ಥಳಗಳು ವಿದೇಶಿ / ಎನ್‌ಆರ್‌ಐ ಗಳ ಪಾಲಿಗೆ ಸದಾ ಅಚ್ಚುಮೆಚ್ಚು. ಹೀಗಾಗಿ ಜಾಗತಿಕ ವಿವಾಹ ಪ್ರವಾಸೋದ್ಯಮದ ಕೇಂದ್ರವಾಗಿ ಬೆಂಗಳೂರು ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವೇ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ, ಪ್ರವಾಸೋದ್ಯಮ ಇಲಾಖೆ ನೆರವು ನೀಡಬೇಕು" ಎನ್ನುತ್ತಾರೆ ವಿವಾಹ ಆಯೋಜನೆ ಸಲಹೆಗಾರ ಪಂಕಜ್ ಕೊಠಾರಿ. [ನವದಂಪತಿಗೆ ಇದಕ್ಕಿಂತ ಉತ್ತಮ ಉಡುಗೊರೆ ಕೊಡಲು ಸಾಧ್ಯವಿಲ್ಲ]

-
-
-
-
-
-
-

ಮೊದಲ ಆಯ್ಕೆ ಅರಮನೆ ಮೈದಾನ: ವಿವಾಹ ಆಯೋಜನೆ ಸಲಹೆಗಾರ ಪಂಕಜ್ ಕೊಠಾರಿ ಪ್ರಕಾರ, ವಿದೇಶಿ, ಎನ್‌ಆರ್‌ಐ ಕುಟುಂಬಗಳಿಗೆ, ವಧು-ವರರಿಗೆ ಬೆಂಗಳೂರಿನ ಅರಮನೆ ಮೈದಾನವೇ ಮದುವೆಗೆ ಮೊದಲ ಆಯ್ಕೆ. "ಇದೊಂದು ಐತಿಹಾಸಿಕ ಸ್ಥಳ. ಜೊತೆಗೆ ಎಲ್ಲಾ ರೀತಿಯ ಅನುಕೂಲತೆಗಳೂ ಇಲ್ಲಿವೆ. ಹೀಗಾಗಿ ಭಾರತೀಯ ಸಂಪ್ರದಾಯದಲ್ಲಿ ಮದುವೆಯಾಗಬಯಸುವ ವಿದೇಶಿ ವಧು-ವರರು, ಎನ್‌ಆರ್‌ಐಗಳವರೆಗೆ ಎಲ್ಲರಿಗೂ ಅರಮನೆ ಮೈದಾನವೇ ಅಚ್ಚುಮೆಚ್ಚು."

ಪಂಕಜ್ ಕೊಠಾರಿ ತಮ್ಮ ವಿಶಿಷ್ಟ ಥೀಮ್ ಬೇಸ್ಡ್ ಮದುವೆ ಆಯೋಜನೆಗೆ ಹೆಸರುವಾಸಿ. ಮದುವೆ ಮಂಟಪ, ಒಳಾಂಗಣ, ಆಹಾರ, ಸಂಗೀತ ಜತೆಗೆ ಮಧುಚಂದ್ರವನ್ನು ವಿಶಿಷ್ಟ ರೀತಿಯಲ್ಲಿ, ನಿಖರವಾಗಿ ಆಯೋಜಿಸುವುದಕ್ಕೆ ಹೆಸರುವಾಸಿ. "ರುಚಿಕರ, ಶುಚಿಕರ ಉತ್ತಮ ಆಹಾರ ಮದುವೆಯ ಯಶಸ್ಸಿನ ಗುಟ್ಟು. ಜತೆಗೆ ಅಲಂಕಾರ, ದಿಬ್ಬಣ, ಮೆರವಣಿಗೆ, ಒಳಾಂಗಣ ವಿನ್ಯಾಸ ಎಲ್ಲವೂ ವಧು-ವರರ, ಕುಟುಂಬಸ್ಥರ ಯೋಚನೆಗೆ ತಕ್ಕಂತೆ ಮಾಡಲಾಗುತ್ತದೆ. ಇದು ವಿವಾಹ ಪ್ರವಾಸದೋದ್ಯಮದ ಯಶಸ್ಸಿನ ಮೊದಲ ಗುಟ್ಟು.

ನಗರದಲ್ಲಿನ ಅತ್ಯತ್ತುವ ವ್ಯವಸ್ಥೆಗಳು ಬೆಂಗಳೂರನ್ನು ವಿವಾಹ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸಲು ಪೂರಕವಾಗಿವೆ. "ಬೆಂಗಳೂರಿನ ಜತೆಗೆ ಕರಾವಳಿ, ನಾನಾ ಐತಿಹಾಸಿಕ ಕೇಂದ್ರಗಳನ್ನು ಕೂಡಾ ವಿವಾಹ ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಕರ್ನಾಟಕದಲ್ಲಿ ಅಪಾರ ಅವಕಾಶವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜತೆಗೂಡಿ ಕೆಲಸ ಮಾಡಬೇಕು," ಎನ್ನುತ್ತಾರೆ. ಹೆಚ್ಚಿನ ಮಾಹಿತಿಗೆ 98450 33557 ಸಂಪರ್ಕಿಸಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bangalore Palace ground has become global wedding tourism hot spot. Wedding Tourism in India is becoming popular as more and more Foreigners, NRI & Indians are taking interest in the grand wedding functions held in Historical Forts & Palace of India. Pankaj Kothari is the brain behind Wedding Tourism.
Please Wait while comments are loading...