ಚೆನ್ನೈನಲ್ಲಿ ಭಾರೀ ಮಳೆ, ಬೆಂಗಳೂರಿನಲ್ಲಿ ಜಿಟಿಜಿಟಿ

Posted By:
Subscribe to Oneindia Kannada

ಅಕ್ಟೋಬರ್ 31ರಂದು ತಮಿಳುನಾಡಿನಲ್ಲಿ ಮಧ್ಯಮ ಪ್ರಮಾಣದ ಮಳೆ ಬಹಳ ಹೊತ್ತು ಆಗಬಹುದು ಎಂದು ಹವಾಮಾನ ಭವಿಷ್ಯ ನುಡಿಯುತ್ತಿದೆ. ಇಂಥ ಸಂದರ್ಭದಲ್ಲಿ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್ ಹಾಗೂ ಮುಂಬೈನ ಹವಾಮಾನದ ಬಗ್ಗೆಯೂ ತಿಳಿದುಕೊಂಡು ಬಿಡೋಣ.

ಹಿಂಗಾರು ಪ್ರವೇಶ ವಿಳಂಬ,ಗುಡುಗು ಸಹಿತ ಮಳೆ ನಿರೀಕ್ಷೆ

ಬೆಂಗಳೂರು
ಅಕ್ಟೋಬರ್ 30ರಂದೇ ಬೆಂಗಳೂರು ಲಘು ಅಥವಾ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುತ್ತದೆ. ಕರ್ನಾಟಕದ ವಿವಿಧ ಭಾಗದಲ್ಲಿ ಚದುರಿದ ಹಾಗೆ ಅಲ್ಪ ಪ್ರಮಾಣದ ಮಳೆಯಾಗಬಹುದು. ಆ ನಂತರ ನವೆಂಬರ್ ಒಂದನೇ ತಾರೀಕು ಬೆಂಗಳೂರಿನಲ್ಲಿ ಚದುರಿದಂತೆ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಗ್ಯಾಲರಿ: ಚೆನ್ನೈನಲ್ಲಿ ಭಾರಿ ಮಳೆ, ಜನಜೀವನ ಅಸ್ತವ್ಯಸ್ತ

Weather forecast for October 31: Heavy rains to continue in Chennai

ಗರಿಷ್ಠ ಉಷ್ಣಾಂಶ ಅಂದರೆ 25 ಡಿಗ್ರಿ ಸೆಲ್ಷಿಯಸ್ ದಾಖಲಾಗಬಹುದು. ಶೇ 76ರಷ್ಟು ತೇವಾಂಶ ದಾಖಲಾಗಬಹುದು.

ಚೆನ್ನೈ
ಕಳೆದ ಇಪ್ಪತ್ನಾಲ್ಕು ಗಂಟೆಯಲ್ಲಿ ಚೆನ್ನೈನಲ್ಲಿ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಈ ಮಳೆ ಪ್ರಮಾಣದಿಂದ ಚಂಡಮಾರುತಕ್ಕೆ ಕಾರಣವಾಗಿದೆ. ಮುಂದಿನ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆಗಳಿವೆ. ಉಷ್ಣಾಂಶ 29 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿರುತ್ತದೆ. ದಿನ ಕಳೆದಂತೆ ಮಳೆಯದೇ ಪಾರುಪತ್ಯ ಇರುತ್ತದೆ.

ದೆಹಲಿ
ದೆಹಲಿಯಲ್ಲಿ ಒಣ ಹವೆ ಮುಂದುವರಿಯಲಿದೆ. ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಷಿಯಸ್ ದಾಖಲಾಗಬಬಹುದು. ಶೇ 44ರಷ್ಟು ತೇವಾಂಶ ದಾಖಲಾಗಬಹುದು.

ಹೈದರಾಬಾದ್
ಕಳೆದ ಕೆಲವು ದಿನಗಳಿಂದಲೇ ಒಣಹವೆ ಮುಂದುವರಿದಿದೆ. ಇನ್ನು ಮುಂದೆ ಅಂದರೆ ಅಕ್ಟೋಬರ್ 31ರಂದು ಮೋಡ ಕವಿದ ವಾತಾವರಣ ಇರುತ್ತದೆ. ಗರಿಷ್ಠ ಉಷ್ಣಾಂಶ 31 ಡಿಗ್ರಿ ಸೆಲ್ಷಿಯಸ್ ದಾಖಲಾಗಬಹುದು. ಇನ್ನು ಶೇ 54ರಷ್ಟು ತೇವಾಂಶ ದಾಖಲಾಗಬಹುದು.

ಮುಂಬೈ
ಗೋವಾ ಕಡಲ ತೀರದಲ್ಲಿ ಚಂಡಮಾರುತದ ಚಲನೆಯ ಕಾರಣಕ್ಕೆ ಮಾಯಾ ನಗರಿ ಮುಂಬೈನಲ್ಲಿ ಕಳೆದ ಕೆಲ ದಿನದಿಂದ ಒಣಹವೆ ಇದೆ. ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಷಿಯಸ್ ದಾಖಲಾಗಬಹುದು. ಶೇ 45ರಷ್ಟು ತೇವಾಂಶ ದಾಖಲಾಗಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Moderate rains with few heavy spells are expected over Tamil Nadu. Here is the weather forecast for Bengaluru, Chennai, Delhi, Hyderabad and Mumbai for October 31.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ