ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾದಾಯಿ ನದಿ ವಿವಾದ: ದೆಹಲಿ ಜಂತರ್ ಮಂತರ್ ನಲ್ಲಿ ಚಳವಳಿ

|
Google Oneindia Kannada News

ಬೆಂಗಳೂರು, ಜನವರಿ 25 : ಮಹಾದಾಯಿ ನದಿ ನೀರಿನ ಇತ್ಯರ್ಥ ವಿಚಾರವಾಗಿ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಸಮಗ್ರವಾಗಿ ಯಶಸ್ವಿಯಾಗಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು.

ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಮುಂದಿ ದಿನಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಚಿತ್ರಗಳು: ಮಹದಾಯಿಗಾಗಿ ಹೋರಾಟ, ಕರ್ನಾಟಕ ಬಂದ್

Recommended Video

ಮಹದಾಯಿಗಾಗಿ ಕರ್ನಾಟಕ ಬಂದ್ | ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಬಂದ್ ಆಚರಣೆ | Oneindia kannada

ಉತ್ತರ ಕರ್ನಾಟಕದ ಅಭಿವೃದ್ಧಿಯಾಗಬೇಕಿದೆ. ಅಲ್ಲಿನ ಜನರ ಸಂಕಟವನ್ನು ನೋಡಲು ಸಾಧ್ಯವಿಲ್ಲ. ನರಕದಲ್ಲಿ ಬದುಕುತ್ತಿದ್ದಾರೆ ಹೀಗಾಗಿ ಮಹಾದಾಯಿ, ಕಳಸಾ೦ಬಂಡೂರಿ ವಿಚಾರ ಇತ್ಯರ್ಥವಾಗಲೇ ಬೇಕು. ಮೋದಿಯವರು ಮಧ್ಯವಸ್ಥಿಕೆವಹಿಸಬೇಕು ಇಲ್ಲವಾದಲ್ಲಿ ದೆಹಲಿಗೆ ತೆರಳಿ ಚಳವಳಿ ನಡೆಸುತ್ತೇವೆ.

We will protest in Jantar Mantar for Mahadayi: Vatal

ರಾಜ್ಯಾದ್ಯಂತ ಇಂದಿನ ಬಂದ್ ಯಶಸ್ವಿಯಾಗಿದೆ. ಶಾಂತಿಯುತವಾಗಿ ನಡೆದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅರ್ಧಯಕ್ಷ ಸಾ.ರಾ. ಗೋವಿಂದ್, ಪ್ರವೀಣ್ ಶೆಟ್ಟಿ, ಮಂಜುನಾಥ್ ದೇವ್ ಎಲ್ಲರೂ ಸೇರಿದಂತೆ ೨ ಸಾವಿರ ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗು ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ. ಫೆ.೪ರಂದು ಮತ್ತೆ ಕರ್ನಾಟಕ ಬಂದ್ ಮಾಡುವ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

English summary
Kannada activist Vatal Nagaraj has been warned central government that Mahadayi protest will reach Delhi Jantar mantar until Prime minister intervene in this Matter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X