ಏಪ್ರಿಲ್ 12ಕ್ಕೆ ಮರು ಪರೀಕ್ಷೆ, ಎಕ್ಸಾಂ ಬರೆಯಲ್ಲ: ವಿದ್ಯಾರ್ಥಿಗಳು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 31: ಕರ್ನಾಟಕ 2ನೇ ಪಿಯು ಮಂಡಳಿ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪಿಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿದೆ. ಮರು ಪರೀಕ್ಷೆ ರದ್ದಾಗಿದೆ. ಏಪ್ರಿಲ್ 12ಕ್ಕೆ ಮರು ಪರೀಕ್ಷೆ ನಡೆಸಲಾಗುವುದು, 40 ಜನ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಸದನದಲ್ಲಿ ಗುರುವಾರ ಮಧ್ಯಾಹ್ನ ಘೋಷಿಸಿದ್ದಾರೆ.

ಆದರೆ, ಇದೆಲ್ಲದರಿಂದ ರೋಸಿ ಹೋಗಿರುವ ವಿದ್ಯಾರ್ಥಿಗಳು. 'ಏನೇ ಆಗ್ಲಿ ನಾವು ಎಕ್ಸಾಂ ಬರೆಯಲ್ಲ' ಎಂದು ಒಕ್ಕೊರಲಿನಿಂದ ಘೋಷಿಸಿದ್ದಾರೆ.

ಮಾರ್ಚ್ 31, 2016ರಂದು ಪರೀಕ್ಷೆ ಬರೆಯಲು ಸಿದ್ಧರಾಗಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಆಘಾತ ಕಾದಿತ್ತು. ಕೆಮಿಸ್ಟ್ರಿ ಪರೀಕ್ಷೆ ಕ್ಯಾನ್ಸಲ್ ಎಂಬ ಸುದ್ದಿ ಸ್ಫೋಟಗೊಂಡಿತ್ತು. ಪಿಯು ಬೋರ್ಡ್ ಎದುರು ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳ ಜೊತೆ ಪೋಷಕರಲ್ಲದೆ, ಸಾರ್ವಜನಿಕರು ಕಂಡು ಬಂದರು. [ಅಣಕು ವಿಡಿಯೋ: ಎಕ್ಸಾಂ ಹಾಲ್ ನಲ್ಲಿ ಕನ್ನಡ ಸಾಂಗ್ಸ್ ]

Kimmane Ratnakar

ಮಾರ್ಚ್ 21ರಂದು ಪರೀಕ್ಷೆ ಬರೆಯಲು ಸಿದ್ಧರಾಗಿದ್ದೆವು, ಆದರೆ, ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದರಿಂದ ಮತ್ತೆ ಪರೀಕ್ಷೆಗೆ ಸಿದ್ಧರಾಗತೊಡಗಿದೆವು. ಮಾರ್ಚ್ 31ರಂದು ಪರೀಕ್ಷೆ ಬರೆಯಲು ಮುಂದಾದಾಗ ಮತ್ತೊಮ್ಮೆ ಆಘಾತ ಕಾದಿತ್ತು.[ಪ್ರಶ್ನೆ ಪತ್ರಿಕೆ ಸೋರಿಕೆ, ಪಿಯು ವಿದ್ಯಾರ್ಥಿಗಳಲ್ಲಿ ಆಕ್ರೋಶ ]

ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ತುಮಕೂರು ಕಡೆಯಿಂದ ಎಂದು ಹೇಳುತ್ತಿದ್ದಾರೆ. ಒಂದಿಬ್ಬರ ಬಂಧನವಾಗಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಈ ರೀತಿ ಆದಾಗೆಲ್ಲ, ಅಧಿಕಾರಿಗಳನ್ನು ಬದಲಾವಣೆ ಮಾಡುವುದು ಬಿಟ್ಟು ಸರ್ಕಾರ ಏನು ಮಾಡಿಲ್ಲ. ವಿದ್ಯಾರ್ಥಿಗಳ ನೋವು, ಟೆನ್ಶನ್ ಸರ್ಕಾರಕ್ಕೂ ತಿಳಿಯಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವಿಡಿಯೋ ನೋಡಿ:

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
We will not write the examination, the Karnataka Class 12 students say. This is going out of control and how times will one paper leak was the chorus at the PU board in Malleshwaram, Bengaluru where several students have gathered to protest the leaking of the Chemistry paper for the second time in hardly a week.
Please Wait while comments are loading...