'ಏ.28ರಂದು 'ಬಾಹುಬಲಿ 2' ಬಿಡುಗಡೆ ದಿನ ಬೆಂಗ್ಳೂರು ಬಂದ್'

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 11 : 'ತಮಿಳುನಾಡಿನ ನಟ ಸತ್ಯರಾಜ್ ಕನ್ನಡಿಗರ ಕ್ಷಮೆಯಾಚಿಸುವವರೆಗೂ ರಾಜ್ಯದಲ್ಲಿ ಬಾಹುಬಲಿ- 2 ಸಿನಿಮಾ ಬಿಡುಗಡೆಗೆ ಅವಕಾಶ ನೀಡಲ್ಲ' ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಏಪ್ರಿಲ್ 28ರಂದು ನಗರದಲ್ಲಿ ಬಾಹುಬಲಿ-2 ಸಿನಿಮಾ ಬಿಡುಗಡೆ ಮಾಡಿದರೆ ಬೆಂಗಳೂರು ಬಂದ್‌ ಮಾಡುತ್ತೇವೆ. ಸಿನಿಮಾ ವಿರೋಧಿಸಿ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತೇವೆ' ಎಂದರು.[ಸದನಕ್ಕೆ ಜನಪ್ರತಿನಿಧಿಗಳ ಗೈರು: ವಾಟಾಳ್ ಕತ್ತೆ ಮೆರವಣಿಗೆ]

We will not allow any theatre in Karnataka to screen Bahubali 2 film says Vatal Nagaraj

'ರಾಜ್ಯದ ಯಾವುದೇ ಭಾಗದಲ್ಲಿ ಈ ಚಲನಚಿತ್ರ ಪ್ರದರ್ಶನಕ್ಕೆ ಮುಂದಾದರೆ ಅಂತಹ ಚಿತ್ರಮಂದಿರಗಳ ಮುಂದೆ ನಮ್ಮ ಕಾರ್ಯಕರ್ತರು ಪ್ರತಿಭಟಿಸಲಿದ್ದಾರೆ.

ನಮ್ಮ ಹೋರಾಟ ಬಾಹುಬಲಿ-2 ಸಿನಿಮಾದ ವಿರುದ್ಧವಲ್ಲ. ಕಾವೇರಿ ನೀರಿನ ವಿಚಾರವಾಗಿ ಕನ್ನಡಿಗರನ್ನು ಕೀಳು ಮಾತುಗಳಿಂದ ನಿಂದಿಸಿದ ಸತ್ಯರಾಜ್ ವಿರುದ್ಧ ಮಾತ್ರ ಎಂದರು.

ಅವರು ನನ್ನ ಬಗ್ಗೆ ಮಾಡಿದ ವೈಯಕ್ತಿಕ ನಿಂದನೆಯನ್ನು ನಾನು ಸಹಿಸಿಕೊಳ್ಳುವೆ. ಆದರೆ, ಕನ್ನಡಿಗರಿಗೆ ಮಾಡಿದ ಅಪಮಾನವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವರು ಕ್ಷಮೆ ಕೇಳಲೇ ಬೇಕು' ಎಂದು ಆಗ್ರಹಿಸಿದರು.

ಕನ್ನಡ ಒಕ್ಕೂಟದ ಮುಖಂಡ ಸಾ.ರಾ.ಗೋವಿಂದು ಮಾತನಾಡಿ, 'ಸತ್ಯರಾಜ್ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ. ಅವರು ಕ್ಷಮೆ ಕೋರದ ಹೊರತು ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ.

ಸಿನಿಮಾ ಹಂಚಿಕೆದಾರರು ಹಾಗೂ ಪ್ರದರ್ಶಕರು ಸಹ ಸಿನಿಮಾ ಬಿಡುಗಡೆಗೆ ಮುಂದಾಗಬಾರದು' ಎಂದು ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kattappa of ‘Bahubali 2’ fame, Tamil actor Sathyaraj has posed difficulties for the release of ‘Bahubali Conclusion’ in Karnataka. Around 2,000 Kannada organisations led by activist Vatal Nagaraj are all set to stop the release of the movie across the state.
Please Wait while comments are loading...