ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳವಾರ ಬೆಂಗಳೂರಿಗೆ ಮುಹೂರ್ತವಿಟ್ಟ ಉಗ್ರರು?

By Mahesh
|
Google Oneindia Kannada News

ಬೆಂಗಳೂರು, ಡಿ.15: ಇರಾಕಿ ಉಗ್ರ ಸಂಘಟನೆ ಪರ ಕಾರ್ಯ ನಿರ್ವಹಿಸುತ್ತಿದ್ದ ಮೆಹ್ಡಿ ಬಂಧನದ ಬೆನ್ನಲ್ಲೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಾಗರಿಕರನ್ನು ಉಗ್ರರು ಒತ್ತೆಯಾಳಾಗಿಸಿಕೊಂಡಿರುವ ಘಟನೆ ನಡೆದಿದೆ. ಇದಾದ ನಂತರ ಟ್ವೀಟ್ ಮಾಡಿರುವ ಇಸೀಸ್, ಬೆಂಗಳೂರು ನಮ್ಮ ಮುಂದಿನ ಟಾರ್ಗೆಟ್ ಎಂದಿದೆ.

ಸಿಡ್ನಿ ಮಾದರಿಯಲ್ಲಿ ಬೆಂಗಳೂರಲ್ಲಿ ಮಂಗಳವಾರ ದಾಳಿ ನಡೆಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುತ್ತೇವೆ ಎಂದು ಎಂದು ಇಸೀಸ್ ಟ್ವಿಟ್ಟರ್ ನಲ್ಲಿ ಬೆದರಿಕೆ ಒಡ್ಡಿದೆ. [ಉಗ್ರರ ವಶದಲ್ಲಿ ಇನ್ಫೋಸಿಸ್ ಟೆಕ್ಕಿ]

ಭಯೋತ್ಪಾದಕರ ವಿಧ್ವಂಸಕ ಕೃತ್ಯ ನಡೆಸುವ ಬಗ್ಗೆ ಬರುವ ಟ್ವೀಟ್ ಗಳನ್ನು ನಂಬಬೇಡಿ, ಅನೇಕ ನಕಲಿ ಖಾತೆಗಳು ಸೃಷ್ಟಿಯಾಗಿವೆ ಎಂದು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ. [ಬೆದರಿಕೆಗೆ ಹೆದರಬೇಡಿ, ಗಾಳಿಸುದ್ದಿ ನಂಬಬೇಡಿ]

ISIS Tweet

ಈ ಮುಂಚೆ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಇಸೀಸ್ ನಿಂದ ಬೆದರಿಕೆ ಟ್ವೀಟ್ ಬಂದಿತ್ತು. ಈಗ "This is just a beginning. We will launch a huge hostage operation in Bengaluru tomorrow in support to Shami." ಎಂದು @ISIS-Med ಟ್ವೀಟ್ ಮಾಡಿದೆ.

ಬೆದರಿಕೆ ಟ್ವೀಟ್ ನಂತರ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹೇಳಿದ್ದಾರೆ. [ಸಿಡ್ನಿ: ಉಗ್ರರ ಚಟುವಟಿಕೆ ಕ್ಷಣ ಕ್ಷಣದ ಅಪ್ದೇಡ್ಸ್]

ಈ ನಡುವೆ ಇರಾಕಿ ಉಗ್ರ ಸಂಘಟನೆ ಭಾರತದಲ್ಲಿ ಹೊಂದಿರುವ ಸ್ಲೀಪರ್ ಸೆಲ್ ಗಳ ಪತ್ತೆಗೆ ಬೆಂಗಳೂರಿನ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಈಗ ಬಂಧಿತನಾಗಿರುವ ಶಂಕಿತ ಉಗ್ರ ಮೆಹ್ದಿಯಿಂದ ಮಾಹಿತಿ ಕಲೆ ಹಾಕಲಾಗುತ್ತಿದ್ದು, ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಯುತ್ತಿದ್ದು ಇನ್ನೂ ನಾಲ್ಕು ದಿನಗಳ ಕಾಲ ನಡೆಯಲಿದೆ.

ಸಿಡ್ನಿಯಲ್ಲಿನ ಕಾಫಿಶಾಪ್‌ಗೆ ಉಗ್ರರು ನುಗ್ಗಿ ಅಮಾಯಕ ಜನರನ್ನು ಹಿಡಿದಿಟ್ಟುಕೊಂಡಿರುವ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಮೋದಿ ಎಲ್ಲರ ಸುರಕ್ಷಿತ ಬಿಡುಗಡೆಗೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

English summary
“This is just a beginning. We will launch a huge hostage operation in Bengaluru tomorrow in support to Shami.” This warning was showed up in the twitter account of Islamic State today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X