ಇಂದಿರಾ ಬೇಡ, ಅಕ್ಕ ಕ್ಯಾಂಟೀನ್ ಬೇಕು: ಟ್ವಿಟ್ಟರ್ ಅಭಿಯಾನ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 20: ರಾಜ್ಯ ಸರ್ಕಾರ ಪ್ರಾರಂಭಿಸುತ್ತಿರುವ ನಮ್ಮ ಕ್ಯಾಂಟೀನ್ ಯೋಜನೆಗೆ ಇಂದಿರಾ ಕ್ಯಾಂಟೀನ್ ಎಂಬ ಹೆಸರನ್ನು ಇಡುವುದಕ್ಕೆ ಹೊರಟಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಹಲವು ಕನ್ನಡಿಗರು ಸರ್ಕಾರದ ಈ ನಡೆಯನ್ನು ವಿರೋಧಿಸಿದ್ದಾರೆ. ಅದಕ್ಕೆಂದೇ ಇಂದು ಇಂದಿರಾ ಬೇಡ, ಅಕ್ಕ ಬೇಕು ಎಂಬ ಆನ್ ಲೈನ್ ಅಭಿಯಾನವೊಂದನ್ನು ಕನ್ನಡಿಗರು ಆರಂಭಿಸಿದ್ದಾರೆ.

ಇಂದು (ಏಪ್ರಿಲ್ 20) ಬೆಳಗ್ಗೆ 9 ರಿಂದ #IndiraBedaAkkaBeku ಎಂಬ ಹ್ಯಾಶ್ ಟ್ಯಾಗ್ ಉಪಯೋಗಿಸಿ, ನಮ್ಮ ಕ್ಯಾಂಟಿನ್ ಗೆ ಇಂದಿರಾ ಬದಲು ಅಕ್ಕ ಕ್ಯಾಂಟೀನ್ ಎಂದು ಹೆಸರಿಡಿ ಎಂದು ಟ್ವೀಟ್ ಮಾಡುವ ಮೂಲಕ ಕನ್ನಡಿಗರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬಹುದಾಗಿದೆ.[ಇಂದಿರಾ ಕ್ಯಾಂಟೀನ್ ಏಕೆ? ಹೈ ಕಮಾಂಡ್ ಗುಲಾಮಗಿರಿ ಬಿಡಿ]

ಕರ್ನಾಟಕ ಸರ್ಕಾರ ಬಡಜನರಿಗಾಗಿ ಕ್ಯಾಂಟೀನ್ ಆರಂಭಿಸುತ್ತಿರುವುದು ಒಳ್ಳೆಯದೇ. ಇದರಿಂದ ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬರುವ ಬಡ ಜನರಿಗೆ ಅನುಕೂಲವಾಗುತ್ತದೆ.['ಇಂದಿರಾ ಕ್ಯಾಂಟೀನ್'ಗೆ ಈರುಳ್ಳಿ-ಬೆಳ್ಳುಳ್ಳಿ ಸಂಕಟ]

ಆದರೆ ಈ ಯೋಜನೆಗೆ ಮೊದಲು "ನಮ್ಮ ಕ್ಯಾಂಟೀನ್" ಎಂಬ ಹೆಸರಿಟ್ಟು ಇದೀಗ "ಇಂದಿರಾ ಕ್ಯಾಂಟೀನ್" ಎಂದು ಹೆಸರು ಬದಲಾಯಿಸುತ್ತಿರುವುದೇಕೆ? ಬಡವರಿಗಾಗಿ ಪರಿಚಯಿಸುತ್ತಿರುವ ಯೋಜನೆಗೆ ರಾಜಕೀಯದ ಬಣ್ಣ ಲೇಪಿಸಬೇಕೆ ಎಂಬ ಕೂಗು ಈಗ ರಾಜ್ಯದೆಲ್ಲೆಡೆ ಕೇಳಿ ಬರುತ್ತಿದೆ. ಈ ಬಗ್ಗೆ ಹಲವು ಟ್ವೀಟ್ಟರ್ ಹೇಳಿಕೆಗಳೂ ಓಡಾಡುತ್ತಿವೆ.[ನಮ್ಮ ಕ್ಯಾಂಟೀನ್ ಅಲ್ಲ, ಇಂದಿರಾ ಕ್ಯಾಂಟೀನ್: ಸಿದ್ದರಾಮಯ್ಯ]

ಕರ್ನಾಟಕದ ಮಹನೀಯರ ಹೆಸರಿಡಿ

ಈ ಯೋಜನೆಗೆ ಕರ್ನಾಟಕ ನಾಡು-ನುಡಿಗಾಗಿ ಶ್ರಮಿಸಿದ ಮಹನೀಯರೊಬ್ಬರ ಹೆಸರು ಇಡುವುದಕ್ಕಾಗುವುದಿಲ್ಲವೇ? ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳಿಗಾದರೆ ದೆಹಲಿ ಮೂಲದ ನಾಯಕರ ಹೆಸರು ಇಟ್ಟರೆ ತಪ್ಪಿಲ್ಲ. ಆದರೆ ರಾಜ್ಯ ಸರ್ಕಾರದ ಯೋಜನೆಗಳಿಗಾದರೂ ಕನ್ನಡಿಗರ ಹೆಸರು ಇಡಬಾರದೆ ಎಂಬುದು ಕನ್ನಡಿಗರ ಪ್ರಶ್ನೆ.[ಸರ್ಕಾರದ ಕ್ಯಾಂಟೀನ್‌ಗೆ 'ಇಂದಿರಾ' ಹೆಸರು : ಕರವೇ ತೀವ್ರ ಆಕ್ಷೇಪ]

ಇವರಲ್ಲಿ ಒಬ್ಬರ ಹೆಸರನ್ನಾದರೂ ಇಡಬಾರದೇಕೆ?

ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಬಸವಣ್ಣ, ಪುಲಿಕೇಶೀ, ಕೆಂಪೇಗೌಡ, ಮದಕರಿ, ರಾಯಣ್ಣ, ಚೆನ್ನಮ್ಮ , ನಿಜಲಿಂಗಪ್ಪ, ಓಬವ್ವ, ಅಬ್ಬಕ್ಕ ಕೆಂಗಲ್ ಹನುಮಂತಯ್ಯ, ದೇವರಾಜ್ ಅರಸ್, ವಿಶ್ವೇಶ್ವರಯ್ಯ ಅವರಂತಹ ಮಹನೀಯರ ಹೆಸರುಗಳನ್ನು ಈ ಯೋಜನೆಗೆ ಇಡಬಾರದೆ? ಎಂಬುದು ಹಲವು ಕನ್ನಡ ಪ್ರೇಮಿಗಳ ಪ್ರಶ್ನೆ.

ಅಕ್ಕಮಹಾದೇವಿ ಹೆಸರೇ ಸೂಕ್ತ

ಇಂದಿರಾ ಕ್ಯಾಂಟೀನ್ ಬದಲು ,"ಅಕ್ಕ ಕ್ಯಾಂಟೀನ್" ಎಂದು ಇಟ್ಟು, ಮಹಾಶರಣೆ ಅಕ್ಕಮಹಾದೇವಿ ಹೆಸರನ್ನು ಈ ಕ್ಯಾಂಟೀನ್ ಗೆ ನಾಮಕರಣ ಮಾಡಿದರೆ ಯೋಜನೆಗೆ ಸರಿಯಾದ ಅರ್ಥ ಬರುತ್ತದೆ. ದಾಸೋಹದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದ ಅಕ್ಕಮಹಾದೇವಿ ಅವರ ಹೆಸರನ್ನ ಈ ಯೋಜನೆಗೆ ಇಟ್ಟರೆ ಯೋಜನೆಗೂ ಅರ್ಥ ಬರುತ್ತದೆ ಎಂಬುದು ಕೆಲವರ ಅಭಿಪ್ರಾಯ.

ಆನ್ ಲೈನ್ ಅಭಿಯಾನ

ಅಕ್ಕ ಹೆಸರಿಡಲುಒತ್ತಾಯಿಸಿ ಕರ್ನಾಟಕದ ವಿವಿಧ ಭಾಗಗಳಿಂದ ಬಂದು ಬೆಂಗಳೂರಲ್ಲಿ ನೆಲೆಸಿ, ಉದ್ಯೋಗದಲ್ಲಿ ತೊಡಗಿರುವ ಕನ್ನಡಿಗರು ಆನ್ ಲೈನ್ ಅಭಿಯಾನ ಆರಂಭಿಸಿದ್ದು, ಈ ಅಭಿಯಾನ ಇಂದು ಬೆಳಗ್ಗೆ 9 ಗಂಟೆಯಿಂದ ಆರಂಭವಾಗಿದೆ.

ನೀವೂ ಟ್ವೀಟ್ ಮಾಡಿ

ಈ ಅಭಿಪ್ರಾಯಕ್ಕೆ ನಿಮ್ಮ ಬೆಂಬಲವೂ ಇದ್ದರೆ, #IndiraBedaAkkaBeku ಎಂಬ ಹ್ಯಾಶ್ ಟ್ಯಾಗ್ ಬಳಸಿ, ನೀವೂ ನಿಮ್ಮ ಅಭಿಪ್ರಾಯವನ್ನು ಟ್ವೀಟ್ ಮಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A twitter campaign has begun on 20th April against naming canteen after former prime minister of India Indira Gandhi, which will be started to serve the poor. But, campaigners are demanding name of Akkamahadevi, poetess who created revolution through her vachanas during 12th century.
Please Wait while comments are loading...