ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಲಿ-ಸಿಂಹ ಮಾತ್ರ ಅಲ್ಲ, ಕಿರುಬ ಕೂಡ ನೋಡಿದ್ದೇವೆ: ಪರಂ ಟಾಂಗ್

|
Google Oneindia Kannada News

ಬೆಂಗಳೂರು, ಜನವರಿ 26: ಹುಲಿ ಸಿಂಹ ಮತ್ತು ಕಿರುಬಗಳನ್ನ ನಾವು ನೋಡಿದ್ದೇವೆ. ಕೇಂದ್ರ ಸರ್ಕಾರ ನೀಡಿದ ಅನುಧಾನ ಖರ್ಚಿನ ಬಗ್ಗೆ ಕೇಳೋದಕ್ಕೆ ಇವರ್ಯಾರು , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಗಿ ಜವಾಬ್ದಾರಿ ಇಂದ ಮಾತನಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ 69 ನೇ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ರಾಜ್ಯಕ್ಕೆ ಕೊಡುವ ಅನುಧಾನ. ಅದು ನಮ್ಮ ಪಾಲು. ಇದನ್ನ ಅಮಿತ್ ಷಾ ಅರ್ಥಮಾಡಿಕೊಂಡಿಲ್ಲ. ಒಕ್ಕೂಟ ವ್ಯವಸ್ಥೆ ಪರಿಕಲ್ಪನೆ ಸರಿಯಾಗಿ ಷಾ ಗೆ ಅರ್ಥವಾಗಿಲ್ಲ. ರಾಜ್ಯ ಸರ್ಕಾರದ ಹಗರಣಗಳ ಬಗ್ಗೆ ಮಾತನಾಡಲಿ.ಅದಕ್ಕೂ ಮೊದಲು ಇವರ ಸರ್ಕಾರ ಇದ್ದಾಗ ಏನಾಯಿತು ಅನ್ನೋದನ್ನ ರಾಜ್ಯದ ಜನತೆಗೆ ಹೇಳಲಿ ಎಂದರು

'ರಾಜಕೀಯ, ಧರ್ಮ ಹಳತಾಗಿದೆ: ವಿಜ್ಞಾನ, ಆಧ್ಯಾತ್ಮ ಒಪ್ಪುವ ಕಾಲ ಬಂದಿದೆ''ರಾಜಕೀಯ, ಧರ್ಮ ಹಳತಾಗಿದೆ: ವಿಜ್ಞಾನ, ಆಧ್ಯಾತ್ಮ ಒಪ್ಪುವ ಕಾಲ ಬಂದಿದೆ'

ನಿನ್ನೆ ಮಹದಾಯಿ ಬಗ್ಗೆ ತುಟಿಬಿಚ್ಚಿಲ್ಲ, ಆ ಬಾಗದ ಜನ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ ಅದರ ಬಗ್ಗೆ ಮಾತನಾಡಲಿ, ಹಗರಣ ಮತ್ತು ಅಭಿವೃದ್ಧಿ ವಿಚಾರಗಳ ಬಗ್ಗೆ ಸಿಎಂ ಬಹಿರಂಗ ಚರ್ಚೆಗೆ ಅಹ್ವಾನ ನೀಡಿದ್ದಾರೆ.. ಮಾಹಿತಿ ಇರುವವರು ಚರ್ಚೆಗೆ ಬರಬಹುದಲ್ಲ. ಜನ ಎಲ್ಲವನ್ನ ಗಮನಿಸುತ್ತಿದ್ದಾರೆ 2018 ಕ್ಕೆ ಸಿಂಹ ಹುಲಿ ಯಾರು ಅಂತ ಗೊತ್ತಾಗುತ್ತದೆ ಎಂದು ಪರೋಕ್ಷವಾಗಿ ಕೆ.ಎಸ್. ಈಶ್ವರಪ್ಪ ಅವರಿಗೆ ಟಾಂಗ್ ನೀಡಿದರು.

we saw canine, not only tiger and lion: Parameshwar criticises

ಭಾರತದಲ್ಲಿ ಬಡತನವೇ ದೊಡ್ಡ ಸವಾಲಾಗಿದೆ, ಅದನ್ನು ನಾವು ಮೆಟ್ಟಿ ನಿಂತಿದ್ದೇವೆ, ಹಸಿರು ಕ್ರಾಂತಿ ಮೂಲಕ ಹಸಿವು ಮುಕ್ತವಾಗಿದೆ. ದೇಶವು ಅಭಿವೃದ್ಧಿ ಹೊಂದುವಲ್ಲಿ ಕಾಂಗ್ರೆಸ್ ನ ನೀತಿಗಳೇ ಕಾರಣವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದರು.

ನಮ್ಮ ರಾಜ್ಯದಲ್ಲಿ ಸ್ವಚ್ಛ ಆಡಳಿತ, ಸಮರ್ಥ ನಾಯಕತ್ವವನ್ನು ಸಿದ್ದರಾಮಯ್ಯ ನೀಡಿದ್ದಾರೆ ಆದರೂ ಜನರು ಟೀಕೆ ಮಾಡುತ್ತಾರೆ, ಸತ್ಯವನ್ನು ಜನರ ಮುಂದೆ ಇಡುವ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.
ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನರು ತ್ಯಾಗಮಾಡಿದ್ದಾರೆ, ಬಲಿದಾನ ಮಾಡಿದ್ದಾರೆ, ಸ್ವಾತಂತ್ರ್ಯ ನಂತರ ದೇಶ ಹಲವಾರು ರಂಗಗಳಲ್ಲಿ ಸಾಧನೆ ಮಾಡಿದೆ.

ಶಿಕ್ಷಣ ದೇಶದಲ್ಲಿ ಆಮೂಲಾಗ್ರ ಬದಲಾವಣೆ ತಂದಿದೆ. ವಿಶ್ವದ ಎಲ್ಲಾ ದೇಶದಗಳಲ್ಲಿ ಭಾರತೀಯರನ್ನು ಕಾಣುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಅದಕ್ಕೆ ಹೋರಾಟ ನಡೆಯಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದರು.

English summary
KPCC president Dr. G Parameshwar told that he saw not only tiger and lion but also canine as BJP leader KS Eshwarappa compared Amit shah as tiger and Modi as lion. He was talking to reporters at KPCC office on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X