ನೀರು ಸೋರಿಕೆ: ಮಾಗಡಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 09: ಮಾಗಡಿ ರಸ್ತೆಯ ಹುಣಸೇಮರ ಜಂಕ್ಷನ್ ಜಂಕ್ಷನ್ ಬಳಿ ರಸ್ತೆಯ ಕೆಳಭಾಗದಲ್ಲಿ ಹೋಗಿರುವ ಜಲಮಂಡಳಿಯ ಕೊಳವೆ ಯಲ್ಲಿ ನೀರು ಸೋರಿಕೆ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಗಡಿ ಮುಖ್ಯರಸ್ತೆಯಿಂದ ಕುಷ್ಠರೋಗ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲಿ ಮಂಗಳವಾರ ಸಂಚಾರ ದಟ್ಟಣೆ ಏರ್ಪಟ್ಟಿತ್ತು.

ಬೆಂಗಳೂರು ಪಶ್ಚಿಮದಲ್ಲಿ ಹೆಚ್ಚಿದ ಟ್ರಾಫಿಕ್ ನಿಯಮ ಉಲ್ಲಂಘನೆ!

ಹಾಗಾಗಿ ಬಿನ್ನಿಮಿಲ್, ಓಕಳಿಪುರಂ ಮಾರ್ಗದಲ್ಲಿ ನಿಧಾನಗತಿಯ ಸಂಚಾರವಿತ್ತು. ಇದರಿಂದ ಲಕ್ಷಾಂತರ ವಾಹನ ಸವಾರರು ಪರದಾಡುವಂತಾಯಿತು ಈ ಬಗ್ಗೆ ಬೆಂಗಳೂರಿನ ಮಾಗಡಿ ರಸ್ತೆಯ ಸಂಚಾರ ಪೊಲೀಸರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಯಾಣಿಕರಿಗೆ ಬದಲಿ ಮಾರ್ಗ ಅನುಸರಿಸುವಂತೆ ಮನವಿ ಮಾಡಿದ್ದಾರೆ.. ಬೃಹತ್ ಕೊಳವೆ ಮಾರ್ಗದಲ್ಲಿ ಸೋರಿಕೆ ಉಂಟಾದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಮಾರ್ಗ ಮಧ್ಯದಲ್ಲಿ ಈ ರೀತಿಯಾಗಿದ್ದರಿಂದ ಕಚೇರಿ, ಶಾಲಾ, ಕಾಲೇಜುಗಳಿಗೆ ತೆರಳುವವರು ಪರದಾಡುವಂತಾಯಿತು.

ಸಂಜೆವರೆಗೂ ಸಮಸ್ಯೆ ಮುಂದುವರೆದಿದೆ. ಜಲಮಂಡಳಿ ಮಂಗಳವಾರ ರಾತ್ರಿ ದುರಸ್ತಿ ಕಾರ್ಯ ಕೈಗೊಳ್ಳುವ ಸಾಧ್ಯತೆ ಇದೆ. ಬುಧವಾರದಿಂದ ಮಾರ್ಗ ಸರಿಹೋಗುವುದು ಎಂದು ನಿರೀಕ್ಷಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Traffic movement was slow in Magadi road after a major water leakage at Hunasemar junction on Tuesday morning. West traffic police have alerted BWSSB regarding the issue.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ