ಕಾವೇರಿಗೆ ಸಮಸ್ಯೆಗೆ ಜಲತಜ್ಞ ರಾಜೇಂದ್ರ ಸಿಂಗ್ ಪರಿಹಾರ ಸೂತ್ರಗಳು

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 5: 'ಪ್ರಕೃತಿಗೆ ಗೌರವ ನೀಡದಿದ್ದಲ್ಲಿ ಪ್ರಕೃತಿ ನಮಗೆ ಗೌರವ ನೀಡುವುದಿಲ್ಲ', ಕಾವೇರಿಯ ಸಮಸ್ಯೆ ಇರುವುದು ಮೂಲ ಕಾವೇರಿಯಲ್ಲಿ ಮಳೆಯಾಗದಿರುವುದು ಮತ್ತು ಮಳೆಯಾಗದಿರುವಾಗ ಹೇಗೆ ನೀರಿನ ಸುಸ್ಥಿರ ಬಳಕೆ ಮಾಡಬೇಕು ಹಾಗೂ ಜಲಮೂಲಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಅರಿವು ಇರಬೇಕು ಎಂದು ಅಂತಾರಾಷ್ಟ್ರೀಯ ಖ್ಯಾತಿಯ ನೀರು ಸುಸ್ಥಿರ ಬಳಕೆ ತಜ್ಞ ರಾಜೇಂದ್ರ ಸಿಂಗ್ ಹೇಳಿದ್ದಾರೆ.

ನಗರದ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಬೆಂಗಳೂರು ತನ್ನ ಕೇಂದ್ರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ 'ಕಾವೇರಿ ಸದಿ ನೀರಿನ ಸುಸ್ಥಿರ ಬಳಕೆ: ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದ ನಂತರ ಮಾತನಾಡಿದರು.[ನೀರು ರಕ್ಷಿಸಿ, ಇಲ್ಲಾ ಕಠಿಣ ಬೇಸಿಗೆ ಎದುರಿಸಿ, ಖಡಕ್ ಎಚ್ಚರಿಕೆ!]

ಕಾವೇರಿಯ ನಿಜ ಸ್ಥಿತಿ ಅರಿಯಲು ಖುದ್ದಾಗಿ ಇಂದು ಕೆಆರ್‍ಎಸ್ ಗೆ ಭೇಟಿ ನೀಡಿ ಮತ್ತು ಜಲಾನಯನ ಪ್ರದೇಶಗಳ ರೈತರನ್ನು ಮಾತನಾಡಿಸಿ ನಂತರ ಅವರ ನಿಲುವು ಮತ್ತು ನಿನ್ನೆ ನೆಡೆದ ಕಾರ್ಯಗಾರದಲ್ಲಿ ತಜ್ಞರು ತೆಗೆದುಕೊಂಡ ನಿರ್ಣಯಗಳ ಕುರಿತು ಮಾಹಿತಿ ನೀಡಲು ಇಂದು ನಗರದ ಗಾಂಧೀ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.[ನೀರು ಹಂಚಿಕೆ ವಿವಾದಕ್ಕೆ ರಿಯಲ್ ಸ್ಟಾರ್ ಉಪ್ಪಿಯಿಂದ ಪರಿಹಾರ]

ಪ್ರಕೃತಿಗೆ ಮೊದಲು ನಾವು ಗೌರವ ನೀಡಬೇಕು, ಈಗಿರುವ ಸಮಸ್ಯೆಗೆ ಮುಖ್ಯ ಕಾರಣ ಸರಿಯಾಗಿ ಮಳೆಯಾಗದಿರುವುದು, ಕಾವೇರಿಗಿರುವ ಮೂರು ಮುಖ್ಯ ಹಕ್ಕುಗಳು ಸಹ ಪರಿಹಾರ ಸೂತ್ರಗಳಾಗಬಲ್ಲವು ಎಂದು ಅಭಿಪ್ರಾಯಪಟ್ಟರು.[ಬೆಂಗಳೂರಿನ ನೀರಿನ ಸಮಸ್ಯೆಗೆ 'ದಿವ್ಯ' ಉಪಾಯ ನೀಡಿದ ರಮ್ಯಾ]

ಪ್ರಕೃತಿಗೆ ಮೊದಲು ನಾವು ಗೌರವ ನೀಡಬೇಕು

ಪ್ರಕೃತಿಗೆ ಮೊದಲು ನಾವು ಗೌರವ ನೀಡಬೇಕು

ಭೂಮಿ: ನದಿ ಹರಿಯುವ ಭೂಮಿಗೆ ಗೌರವಿಸಬೇಕು.
ಹರಿವು: ನದಿಗಿರುವ ಪ್ರಾಕೃತಿಕ ಹರಿವಿಗೆ ದಕ್ಕೆ ಮಾಡಬಾರದು.
ಸ್ವಚ್ಛತೆ: ಕಾವೇರಿ ಮೂಲ ಹಾಗೂ ತಟದ ಸ್ವಚ್ಛತೆ ಇದು ಪ್ರಾಥಮಿಕ ಹಂತ,

ಪ್ರಕೃತಿಗೆ ಮೊದಲು ನಾವು ಗೌರವ ನೀಡಬೇಕು, ಈಗಿರುವ ಸಮಸ್ಯೆಗೆ ಮುಖ್ಯ ಕಾರಣ ಸರಿಯಾಗಿ ಮಳೆಯಾಗದಿರುವುದು, ಕಾವೇರಿಗಿರುವ ಮೂರು ಮುಖ್ಯ ಹಕ್ಕುಗಳು ಸಹ ಪರಿಹಾರ ಸೂತ್ರಗಳಾಗಬಲ್ಲವು ಎಂದು ಅಭಿಪ್ರಾಯಪಟ್ಟರು.[ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಉಪೇಂದ್ರ ಕೊಟ್ಟ ಸೂಪರ್ ಸುಪ್ರೀಂ ಐಡಿಯಾ!]

ನೀರಿನ ಸುಸ್ಥಿರ ಬಳಕೆ ಹಾಗೂ ಹಂಚಿಕೆ

ನೀರಿನ ಸುಸ್ಥಿರ ಬಳಕೆ ಹಾಗೂ ಹಂಚಿಕೆ

ಎರಡನೆಯದಾಗಿ ನೀರಿನ ಸುಸ್ಥಿರ ಬಳಕೆಗಾಗಿ ಮತ್ತು ಹಂಚಿಕೆಗಾಗಿ ಕಾವೇರಿ ಜಲಾನಯನ ಪ್ರದೇಶ ಒಕ್ಕೂಟ ಅಥವ ಸಂಸ್ಥೆಯ ಸ್ಥಾಪನೆ ಅದರಲ್ಲಿ ಕಾವೇರಿ ಹರಿಯುವ ಎಲ್ಲಾ ರಾಜ್ಯಗಳ ಜನಪ್ರತಿನಿಧಿಗಳು, ರೈತರು ಸೇರಿದಂತೆ ನೀರಾವರಿ ತಜ್ಞರು ಸಹ ಸದಸ್ಯರಾಗಿರಬೇಕು, ಇದನ್ನು ನಾವು ಕಾವೇರಿ ಕುಟುಂಬ ಎನ್ನಬಹುದು.[ಕಾವೇರಿ ವಿವಾದ ಅಂತ್ಯಕ್ಕೆ ಉಪೇಂದ್ರ ನೀಡಿದ್ದ ರಿಯಲಿಸ್ಟಿಕ್ 'H20' ಫಾರ್ಮುಲಾ.!]

ಮಳೆಯ ಆಧಾರದ ಮೇಲೆ ಯಾವ ಬೆಳೆ ನಿರ್ಧರಿಸಿ

ಮಳೆಯ ಆಧಾರದ ಮೇಲೆ ಯಾವ ಬೆಳೆ ನಿರ್ಧರಿಸಿ

ಮೂರನೆಯದಾಗಿ ಕಾವೇರಿ ಜಲಾನಯನ ಪ್ರದೇಶದ ರೈತರು ಆಯಾ ವರ್ಷ ಆದ ಮಳೆಯ ಆಧಾರದ ಮೇಲೆ ಯಾವ ಬೆಳೆಯನ್ನು ಬೆಳೆಯಬೇಕು ಎಂಬುದನ್ನು ನಿರ್ಣಹಿಸಬೇಕು ಹಾಗೂ ವೈಜ್ಞಾನಿಕವಾಗಿ ವ್ಯವಸಾಯ ಮಾಡಬೇಕು ಎಂದು ಹೇಳಿದರು.

‘ಕಾವೇರಿ ಸದಿ ನೀರಿನ ಸುಸ್ಥಿರ ಬಳಕೆ: ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದ ನಂತರ ಮಾತನಾಡಿದರು.

ಕಾವೇರಿ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ

ಕಾವೇರಿ ಸಮಸ್ಯೆಗಳ ಅಧ್ಯಯನಕ್ಕೆ ಸಮಿತಿ

ಕಾರ್ಯಗಾರದ ಮುಂದಿನ ಹಂತವಾಗಿ ಕಾವೇರಿಯ ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚಿನ ಅಧ್ಯನವನ್ನು ಕೈಗೊಳ್ಳಲು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲು ನಿರ್ಣಯಿಸಿದೆ. ಅದರಲ್ಲಿ ತಮಿಳುನಾಡು ಮತ್ತು ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳ ತಜ್ಞರು, ಕುಲಪತಿಗಳು ಸೇರಿದಂತೆ ಇನ್ನೂ ಕೆಲ ವಿಷಯ ತಜ್ಞರು ಮತ್ತು ಸಂಸ್ಥೆಗಳೊಂದಿಗೆ ಪರಿಹಾರೋಪಾಯಗಳ ಬಗ್ಗೆ ಚಿಂತಿಸಲಾಗುವುದು ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Water conservationist popularly known as the waterman of India Rajendra Singh Suggestions to He has said that community-driven water management or decentralised management of resources is the only solution to resolving water woes.
Please Wait while comments are loading...