ನ. 24ವರೆಗೆ ಹಳೇ ನೋಟಲ್ಲೇ ವಾಟರ್ ಬಿಲ್ ಕಟ್ಟಿ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 14 : ಅಯ್ಯೋ ವಾಟರ್ ಬಿಲ್ ಬಂದೆ ಬಿಡ್ತು ಹೇಗೆ ಪಾವತಿಸೋದು ಹಣ ಚೇಂಜ್ ಮಾಡ್ಸಿಲ್ಲಾ. ಬ್ಯಾಂಕಿನ ಹತ್ರಾ ಅಷ್ಟೋಂದು ಕ್ಯೂ ಬೇರೆ ಇದೆ. ಏನು ಮಾಡೋದು ಅಂತ ಯೋಚ್ನೆ ಮಾಡ್ತಿದ್ರೆ ಆ ಯೋಚ್ನೆನ ಬಿಟ್ಟು ಬಿಡಿ.

ಯಾಕೇಂದ್ರೆ ಜಲಮಂಡಲಿಯವರು ಜನರ ಹತ್ರ ಹೊಸ ನೋಟು ಎಲ್ಲಿದೆ ಅಂತ ಇದೇ ತಿಂಗಳು 24ರ ವರೆಗೆ ಐನೂರು ಸಾವಿರ ಹಳೇ ನೋಟುಗಳನ್ನು ನೀಡಿ ಬಿಲ್ ಪಾವತಿಸಬಹುದು ಎಂದು ಪ್ರಕಟಣೆ ಹೊರಡಿಸಿದೆ.

water

ಜನರ ಮನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಿರಾಳ ಭಾವ ಮೂಡಲಿದ್ದು, ಇರುವ ಹಳೇ ನೋಟಿನಲ್ಲಿಯೇ ಬಿಲ್ ಪಾವತಿಸಲು ಅನುಕೂಲವಾಗಲಿದೆ.

ಇನ್ನು ಬ್ಯಾಂಕಿನಲ್ಲಿ ಬದಲಾಯಿಸಬೇಕಿದ್ದ ಹಣವನ್ನು ವಾಟರ್ ಸಪ್ಲೆಯವರಿಗೆ ನೀಡಿ ಬಿಲ್ ಪಾವತಿಸಿ ಸಮಾಧಾನ ಪಟ್ಟುಕೊಳ್ಳುವ ಅವಕಾಶ ಗ್ರಾಹಕನದು.

ಮೊದಲೇ ರಾಜ್ಯದಲ್ಲಿ ಬರ ಆವರಿಸಿದ್ದು ನೀರಿಗಾಗಿ ಎಲ್ಲೆಲ್ಲೂ ಪರಿತಪಿಸುತ್ತಿರುವಾಗ ಬೆಂಗಳೂರಿನ ಜನತೆಗೆ ಹಳೇ ನೋಟಿನಲ್ಲಿಯೇ ನೀರನ್ನು ಒದಗಿಸಲು ಜಲಮಂಡಲಿ ಮುಂದಾಗಿರುವುದು ಸೂಕ್ತ ನಿರ್ಣಯವಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
water bill paid date extended 24th November in Bengaluru water supply and sewerage bord
Please Wait while comments are loading...