ಪರಭಾಷಿಕರಿಗೆ ಹಾಡಿನ ಪೆಟ್ಟು ಕೊಟ್ಟ ಕಿರಿಕ್ ಕೀರ್ತಿ

Posted By:
Subscribe to Oneindia Kannada

ನಮಸ್ಕಾರ ನಾನು ಕಿರಿಕ್ ಕೀರ್ತಿ ಅಂತಾ.. ಗೊತ್ತಿರ್ಬೇಕಲ್ಲ.. ಎನ್ನುತ್ತಾ ವಿಡಿಯೋ ಭಾಷಣಗಳ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದ ಶಿವಮೊಗ್ಗದ ಶಂಕರಘಟ್ಟದ ಪ್ರತಿಭೆ ಕೀರ್ತಿ ಅವರು ಈಗ ರೊಚ್ಚಿಗೆದ್ದಿದ್ದಾರೆ. ಬೆಂಗಳೂರಿನಲ್ಲಿರುವ ವಲಸಿಗರಿಗೆ ತಮ್ಮ ಮೊನಚಾದ ಗೀತ ಸಾಹಿತ್ಯ ಹಾಗೂ ಹಾಡುಗಾರಿಕೆ ಮೂಲಕ ತಟ್ಟಿದ್ದಾರೆ.

ಆದರೆ, ಈ ವಿಡಿಯೋ ಆರಂಭದಲ್ಲೇ 'ಕಿರಿಕ್ ಸೂಚನೆ' ನೀಡಿದ್ದು, ಎಲ್ಲಾ ಪರಭಾಷಿಕರಿಗೂ ಈ ವಿಡಿಯೋ ಅನ್ವಯವಾಗುವುದಿಲ್ಲ. ಇಲ್ಲೇ ಇದ್ದು, ಇಲ್ಲೇ ಬದುಕು ಕಟ್ಟಿಕೊಂಡು, ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮತನಾಡೋರನ್ನು ಗಮನದಲ್ಲಿಟ್ಟುಕೊಂಡು ಈ ವಿಡಿಯೋ ಮಾಡಿದ್ದೇವೆ ಎಂದು ಒಕ್ಕಣೆಯಿದೆ.[ವಿಡಿಯೋ: ಕನ್ನಡದ ರ‍್ಯಾಪ್ ಕಿಂಗ್ ಜೊತೆ ಐಂದ್ರಿತಾ 'ಸೌಂದರ್ಯ ಸಮರ']

Watch video : Kannada activist Kirik Keerthi Namma Bengaluru Feat Chandan Shetty

ಕಿರಿಕ್ ಕೀರ್ತಿ ಅವರ ಸಾಹಿತ್ಯಕ್ಕೆ ಚಂದನ್ ಶೆಟ್ಟಿ ಅವರು ಸಂಗೀತ ಒದಗಿಸಿದ್ದಾರೆ. ಕನ್ನಡದಲ್ಲಿ ಹೊಸ ಅಲೆ ಎಬ್ಬಿಸಿರುವ ಈ ವಿಡಿಯೋ ಬಿಡುಗಡೆಯಾದ ಒಂದು ದಿನದಲ್ಲೇ 10, 746 ವೀಕ್ಷಣೆ 1,320 ಲೈಕ್ಸ್ ಪಡೆದುಕೊಂಡಿದೆ. ಅಂದ ಹಾಗೆ, ಹಾಡಿನ ಸಾಹಿತ್ಯ ಅರ್ಥವಾಗೆಲೆಂದು ಸಬ್ ಟೈಟಲ್ಸ್ ಕೂಡಾ ನೀಡಲಾಗಿದೆ.

ಹಾಡು, ಸಂಗೀತ, ಕಿರಿಕ್ ಅವರ ಉದ್ದೇಶ ಎಲ್ಲವೂ ಮೊದಲ ನೋಟಕ್ಕೆ ಕನ್ನಡಿಗರಿಗೆ ಮೆಚ್ಚುಗೆಯಾಗಿದೆ. ಆದರೆ, ವಿಡಿಯೋದಲ್ಲಿ ಪುನಾರಾವರ್ತನೆಗೊಂಡ ದೃಶ್ಯಗಳು ಸ್ವಲ್ಪ ನೋಡಲು ಕಿರಿಕಿರಿ ಎನಿಸುತ್ತದೆ. ನಿಮಗೇನು ಅನ್ನಿಸುತ್ತದೆಯೋ ಕಾಮೆಂಟ್ ಮಾಡಿ. ಸದ್ಯಕ್ಕೆ ಹಾಡು ನೋಡಿ ಆನಂದಿಸಿ. [ಅಮ್ಮನಿಗೆ ಪ್ರೀತಿಯಿಂದ ಕಾಣಿಕೆ ಕೊಟ್ಟ ಗಾಯಕ ವಾಸು ದೀಕ್ಷಿತ್]

ಬೆಂಗಳೂರು... ಸ್ವರ್ಗ ಬೆಂಗಳೂರು
ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು...

ಬೆಂಗಳೂರು...ಸ್ವರ್ಗ ಬೆಂಗಳೂರು
ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು...

ಎಲ್ಲೆಲ್ಲಿಂದ ಬಂದೋರ್ಗೆಲ್ಲಾ ಕರ್ದು ಕರ್ದು ಕೆಲ್ಸ ಕೊಟ್ಟು
ಕೈ ತುಂಬ ಸಂಬಳ, ಕನ್ನಡದೋರ ಬೆಂಬಲ
ಎಲ್ಲ ಇದ್ರು ಗಾಂಚಾಲಿ ಮಾಡ್ಕೊಂಡು ಹೇಳ್ತಾರೆ
ಕನ್ನಡ ನಂಗೊತ್ತಿಲ್ಲ...ಕನ್ನಡ ನಂಗೊತ್ತಿಲ್ಲ...

ಬೆಂಗಳೂರು...ಸ್ವರ್ಗ ಬೆಂಗಳೂರು
ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು...

Watch video : Kannada activist Kirik Keerthi Namma Bengaluru Feat Chandan Shetty

ಆ ಕಡೆ ಡೆಲ್ಲಿ ಈ ಕಡೆ ಮುಂಬೈ
ಪಕ್ಕದಲ್ ಆಂಧ್ರ ಸೈಡಲ್ ಚೆನ್ನೈ
ಎಲ್ಲ ಇದ್ರು ಬೆಂಗಳೂರ್ ಅಂದ್ರೆ ಯಾಕ್ರೋ ಸಾಯ್ತೀರಾ..?
ಬೆಂಗಳೂರ್ ಅಂದ್ರೆ ಸ್ವರ್ಗ ಕಣ್ರೋ...
ಬೆಂಗಳೂರ್ ಬಗ್ಗೆ ಬಾಯಿಗ್ ಬಂದಂಗ್ ಮಾತಾಡಿ
ಯಾಕ್ರೋ ನಮ್ *** ಉರುಸ್ತೀರ..?

ಬೆಂಗಳೂರು...ಸ್ವರ್ಗ ಬೆಂಗಳೂರು
ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು...

ಅಣ್ಣ ತಮ್ಮ ಅನ್ನೋದ್ ಬಿಟ್ಟು
ಭಯ್ಯ ಬ್ರದರ್ ಅಂತೀರಾ...
ಬರದೇ ಇರೋ ಇಂಗ್ಲೀಷು,
ಅರ್ಧಬಂರ್ಧ ಬಕ್ವಾಸು...
ಇಲ್ದೇ ಇರೋ ಶೋಕಿ ಮಾಡ್ಕೊಂಡ್
ಗಾಂಚಾಲೀಲಿ ಹೇಳ್ತೀರ...
ಕನ್ನಡ ನಂಗ್ ಬರಲ್ಲ...
ಕನ್ನಡ ನಾನ್ ಕಲಿಯಲ್ಲ...!

ಎಲ್ಲಿಂದ್ ಬಂದ್ರಿ, ಯಾವಾಗ್ ಬಂದ್ರಿ...
ಎಲ್ಲಾ ಬಿಟ್ಟು ಇಲ್ಯಾಕ್ ಬಂದ್ರಿ..?
ಬಂದ್ ಮೇಲಾದ್ರೂ ಕನ್ನಡ ಕಲಿಯೋಕ್ ಯಾಕ್ರೋ ಅಳ್ತೀರಾ..?
ಕನ್ನ ಇಲ್ಲಿನ್ ಜೀವ ಕಣ್ರೋ...
ಕನ್ನಡದವ್ರ್ ನಿಮ್ಗೇನೂ ಕೇಳ್ಲಿಲ್ಲ ಅಂದ್ರೆ
ಬೆಂಗಳೂರೇ ನಿಮ್ದು ಅಂದ್ ಬಿಡ್ತೀರ...

ಬೆಂಗಳೂರು...ಸ್ವರ್ಗ ಬೆಂಗಳೂರು
ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು...

ಫೇಸ್ಬುಕ್ಕಲ್ಲಿ ಬೆಂಗಳೂರ್ ಬಗ್ಗೆ
ಯದ್ವಾತದ್ವಾ ಬಯ್ತೀರ...
ಯಾಕೆ ಅಂತ ನಾವ್ ಕೇಳಿದ್ರೆ
ನಾವು ರೇಸಿಸ್ಟ್ ಅಂತೀರ...
ಇಲ್ಲಿನ ಅನ್ನ, ಇಲ್ಲಿನ ಗಾಳಿ
ಇಲ್ಲಿನ್ ನೀರು, ಇಲ್ಲಿನ್ ಬೀರು
ತಿನ್ಕೊಂಡ್ ಕುಡ್ಕೊಂಡ್ ಮಜಾ ಮಾಡ್ಕೊಂಡ್
ಬೆಂಗಳೂರ್ ಸರಿ ಇಲ್ಲ ಅಂತೀರಲ್ಲ..
ಹೊಟ್ಟೆಗ್ ಏನ್ರೋ ತಿಂತೀರಾ..?

ಬೆಂಗಳೂರು...ಸ್ವರ್ಗ ಬೆಂಗಳೂರು
ನಿಂಗೆ ಇಷ್ಟ ಇಲ್ವಾ ಬಿಟ್ಟು ಹೊಯ್ತಾ ಇರು...

ನಮ್ಮ ಬೆಂಗಳೂರು... ಜೀವ ಬೆಂಗಳೂರು..
ನಿಂಗೆ ಕಷ್ಟ ಅಲ್ವಾ..?
ತೆಪ್ಪಗ್ ಕಳುಚ್ಕೊತಾ ಇರು...!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Watch this video in which Kannada activist cum Journalist Kirik Keerthi teases non Kannadigas who stay in Namma bengaluru and not bother to speak and act for Bengaluru Song lyrics and song penned by himself and music by Rapper Chandran Shetty.
Please Wait while comments are loading...