ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರ ಮಂದಿರಗಳಲ್ಲಿ ಸಿನಿಮಾ ಮೊದಲು ಟ್ರಾಫಿಕ್ ನಿಯಮಗಳ ಜಾಗೃತಿ

|
Google Oneindia Kannada News

ಬೆಂಗಳೂರು, ಮಾರ್ಚ್ 05: ನಗರದ ಜನತೆಯಲ್ಲಿ ಸಂಚಾರ ನಿಯಮ ಕುರಿತು ಅರಿವು ಮೂಡಿಸುವ ವಿಡಿಯೋವನ್ನು ಸಂಚಾರ ಪೊಲೀಸರು ತಯಾರಿಸಿದ್ದು, ಚಿತ್ರಮಂದಿರಗಳಲ್ಲಿ ಪ್ರಸಾರ ಮಾಡಲು ನಿರ್ಧರಿಸಿದ್ದಾರೆ.

ನಗರದಲ್ಲಿ ದಿನೇ ದಿನೆ ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ ಮತ್ತು ನಿಯಮ ಉಲ್ಲಂಘನೆಪರಿಣಾಮ ಅಪಘಾತಗಳ ಸಂಖ್ಯೆ ದ್ವಿಗುಣವಾಗುತ್ತಿದೆ. ಅಪಘಾತ ತಪ್ಪಿಸಿ ಸುರಕ್ಷಿತ ಸಂಚಾರ ನಡೆಸುವಂತೆ ವಾಹನ ಸವಾರ, ಚಾಲಕರಲ್ಲಿ ಹಾಗೂ ಪಾದಚಾರಿಗಳಲ್ಲಿ ಜಾಗೃತಿ ಮೂಡಿಸುವ 30 ಸೆಕೆಂಡ್ ಗಳ 15 ವಿಡಿಯೋ ತಯಾರಿಸಲಾಗಿದೆ.

1975ರಲ್ಲಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗುವುದು ನಿಂತಾಗ1975ರಲ್ಲಿ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಮೊಳಗುವುದು ನಿಂತಾಗ

ಟ್ವಿಟರ್, ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಲಾಗುತ್ತಿದೆ. ಶೀಘ್ರದಲ್ಲೇ ಸಿನಿಮಾ ಮಂದಿರಗಳಲ್ಲಿ ಪ್ರಸಾರ ಮಾಡುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

Watch traffic decipline trailers with Movies

ವಾಹನ ಚಲಾಯಿಸುವಾಗ ಹೆಲ್ಮೆಟ್ ಕೈಯಲ್ಲಿ ಹಿಡಿದುಕೊಳ್ಳುವುದು,, ಮೊಬೈಲ್ ಫೋನ್ ಬಳಕೆ ಮಾಡದಂತೆ ಅರಿವು ಮೂಡಿಸಲಾಗುತತ್ದೆ. ಪಾದಚಾರಿಗಳು ಜೀಬ್ರಾ ಕ್ರಾಸ್ ನಲ್ಲೇ ರಸ್ತೆ ದಾಟುವಂತೆ, ಪಾದಚಾರಿ ಮಾರ್ಗವನ್ನೇ ಬಳಸುವಂತೆ ಇದೇ ರೀತಿ ಡ್ರಂಕ್ ಅಂಡ್ ಡರ್ಐವ್, ಸಿಗ್ನಲ್ ದೀಪಗಳ ಪಾಲನೆ, ಅಡ್ಡಾದಿಡ್ಡಿ ಚಾಲನೆ ಸೇರಿದಂತೆ ವಿವಿಧ ವಿಷಯ ಕುರಿತು ಅಕರ್ಷಕ ವಿಡಿಯೋ ತಯಾರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

English summary
Bengaluru traffic have prepared 15 videos contents 30 second of awareness about traffic discipline and rules which will be telecast in all movie theatres in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X