ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿಯಲ್ಲಿ ಶ್ರೀಗಂಧದ ಮರ ಕಳವು ತಡೆಗೆ ವಾಚ್‌ ಟವರ್‌

By Nayana
|
Google Oneindia Kannada News

ಬೆಂಗಳೂರು, ಮೇ 24: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಶ್ರೀಗಂಧದ ಕಳವು ಹೆಚ್ಚಾಗಿದೆ. ಹಾಗಾಗಿ ಗಂಧದ ಕಳ್ಳರ ಮೇಲೆ ನಿಗಾ ಇಡಲು ಆವರಣದ ನಾಲ್ಕು ಭಾಗಗಳಲ್ಲಿ ವಾಚ್‌ ಟವರ್ ನಿರ್ಮಾಣ ಮಾಡಲಾಗುತ್ತಿದೆ.

ಈ ವಾಚ್‌ಟವರ್‌ ನಲ್ಲಿ ನಿವೃತ್ತ ಯೋಧರು ಕಣ್ಣಿಡಲಿದ್ದಾರೆ. 2015ರಿಂದ ಇಲ್ಲಿಯವರೆಗೆ ಕ್ಯಾಂಪಸ್‌ ನಲ್ಲಿ ಗಂಧದ ಕಳ್ಳರು 89 ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಿದ್ದಾರೆ. ಮೇ 10ರಂದು ಮಹಿಳಾ ವಿದ್ಯಾಥಿನಿಲಯದ ಬಳಿಯೇ 5 ಅಡಿ ಎತ್ತರದ ಗಂಧದ ಮರವನ್ನು ದುಷ್ಕರ್ಮಿಗಳು ದೋಚಿದ್ದಾರೆ.

Watch tower surveillance system to preserve sandalwood trees in BU campus

ಕೆಲವು ಬೋಧಕ-ಬೋಧಕೇತರ ಸಿಬ್ಬಂದಿ ಸ್ವಯಂಪ್ರೇರಿತವಾಗಿ ರಾತ್ರಿ ವೇಳೆ ಗಸ್ತು ತಿರುಗಳು ಸಮ್ಮತಿಸಿದ್ದಾರೆ. ಅಕ್ಕ-ಪಕ್ಕದವರ ನೆರವಿನಿಂದ ಗಸ್ತು ತಿರುಗಸಲಿರುವ ಸಿಬ್ಬಂದಿಗೆ ವಾಹನಗಳನ್ನು ಒದಗಿಸುವುದರ ಜತೆಗೆ ನಿವೃತ್ತ ಯೋಧರ ಸೇವೆ ಬಳಸಿಕೊಂಡು ಅವರಿಗೆ ಶಸ್ತ್ರಾಸ್ತ್ರ ಒದಗಿಸಲು ಚಿಂತನೆ ನಡೆದಿದೆ. ಈ ಸಂಬಂಧ ಅನುಮತಿಗಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಬೆಂಗಳೂರು ವಿವಿ ಕುಲಸಚಿವ ಡಾ. ಬಿಕೆ ರವಿ ತಿಳಿಸಿದ್ದಾರೆ.

ಜ್ಞಾನಭಾರತಿ: ಒಂದು ವರ್ಷದಲ್ಲಿ 36 ಗಂಧದ ಮರ ಕಳವುಜ್ಞಾನಭಾರತಿ: ಒಂದು ವರ್ಷದಲ್ಲಿ 36 ಗಂಧದ ಮರ ಕಳವು

ನಿವೃತ್ತ ಯೋಧರನ್ನು ಬಳಸಿಕೊಳ್ಳುವುದರಿಂದ ಅವರಿಗೆ ತರಬೇತಿ ನೀಡುವ ಅಗತ್ಯವಿರುವುದಿಲ್ಲ. ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ನಂತರ ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಕುಇರುತ ನಿರ್ಧರಿಸಲಾಗುತ್ತದೆ. ಇನ್ನು ಬಯೋ-ಪಾರ್ಕ್‌ನ ಸುತ್ತ ನಾಲ್ಕು ಕಡೆ ಕಾವಲು ಗೋಪುರಗಳನ್ನು ನಿರ್ಮಿಸಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

English summary
Bengaluru university has decided to install four watch towers at biotech part in Janan Bharati campus to preserve sandalwood trees. There were many incidents reported about sandalwood trees theft in the campus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X