ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಟೋ ಗಳಿಗೆ ಜಿಪಿಎಸ್: ತ್ಯಾಜ್ಯ ವಿಲೇವಾರಿಯಲ್ಲಿನ ಅಕ್ರಮ ನಿಲ್ಲುತ್ತಾ?

|
Google Oneindia Kannada News

ಬೆಂಗಳೂರು, ಏಪ್ರಿಲ್ 25: ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಗಳ ಕಾರ್ಯದ ಮೇಲೆ ನಿಗಾವಹಿಸಲು ಮುಂದಾಗಿರುವ ಬಿಬಿಎಂಪಿ, ಮೇ 1ರಿಂದ ಎಲ್ಲ 5 ಸಾವಿರ ಆಟೋಗಳಿಗೆ ಜಿಪಿಎಸ್ ಅಳವಡಿಸಲಿದೆ.

ಬಿಬಿಎಂಪಿ ಎಷ್ಟೇ ಕ್ರಮ ಕೈಗೊಂಡರೂ ನಗರದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಆಟೋ ಟಿಪ್ಪರ್ ಗಳು ರಸ್ತೆಬದಿಯಲ್ಲಿ ಶೇಖರಣೆಗೊಂಡ ತ್ಯಾಜ್ಯ ಸಂಗ್ರಹಿಸಿ, ವಿಲೇವಾರಿ ಮಾಡುತ್ತಿಲ್ಲ ಎಂಬ ಆರೋಪವಿದೆ. ಜಿಪಿಎಸ್ ಅಳವಡಿಸುವುದರಿಂದ ಆಟೋಗಳು ಎಲ್ಲೆಲ್ಲಿ ಸಂಚರಿಸಿದೆ, ಬ್ಲ್ಆಕ್ ಸ್ಪಾಟ್ ಗಳಲ್ಲಿ ಎಷ್ಟು ಹೊತ್ತು ನಿಂತಿವೆ ಎಂಬುದು ಗೊತ್ತಾಗಲಿದೆ.

ಘನತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯಾರಂಭಕ್ಕೆ ಹೈಕೋರ್ಟ್ ನಿರ್ದೇಶನಘನತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯಾರಂಭಕ್ಕೆ ಹೈಕೋರ್ಟ್ ನಿರ್ದೇಶನ

ಆರ್‌ಎಫ್‌ಐಡಿ ಕಾರ್ಡ್ ವಿತರಣೆ: ಕಸ ವಿಲೇವಾರಿ ಮಾಡುತ್ತಿರುವ ಎಲ್ಲಾ ಆಟೋಗಳಿಗೆ ರೇಡಿಯೋ ತರಂಗಾಂತರ ಗುರುತಿಸುವಿಕೆ ಕಾರ್ಡ್ ಗಳನ್ನು ವಿತರಿಸಲಾಗುತ್ತದೆ. ಅಲ್ಲದೆ, ಆಟೋ ಟಿಪ್ಪರ್ ಗಳು ಕಸವನ್ನು ವಿಲೇವಾರಿ ಮಾಡಲು ನಿಗದಿತ ಸ್ಥಳಕ್ಕೆ ಕೊಂಡೊಯ್ಯುತ್ತವೆಯೇ ಎಂಬ ಮಾಹಿತಿ ತಿಳಿಯಲು ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಲಸಾಗಿದೆ.

Waste collection autos will have GPS from May 1

ಆರ್‌ಎಫ್ ಐ ಕಾರ್ಡ್ ಗಳನ್ನು ಬಿಬಿಎಂಪಿಯೇ ವಿತರಿಸಲಿದ್ದು, ಒಂದು ಕಾರ್ಡ್ ನ ಬೆಲೆ50 ರೂ. ಎಂದು ಹೇಳಲಾಗಿದೆ. ಎಲ್ಲ ವಾರ್ಡ್ ಗಳಲ್ಲೂ ಆಟೋ ಟಿಪ್ಪರ್ ಗಳು ಬೆಳಗ್ಗೆ 11 ಗಂಟೆಯವರೆಗೆ ಕೆಲಸ ನಿರ್ವಹಿಸುತ್ತವೆ. ನಂತರ ಬಸ್ ನಿಲ್ದಾಣ, ರಸ್ತೆಗಳ ಪಕ್ಕದಲ್ಲಿ ಅಳವಡಿಸಿರುವ ಡಸ್ಟ್ ಬಿನ್ ಗಳಲ್ಲಿನ ತ್ಯಾಜ್ಯ ಸಂಗ್ರಹಿಸಲಿದೆ.

English summary
Around five thousand waste collection auto tippers would be installed with GPS to streamline the waste collection system in the city. The BBMP had decided to make payment based on waste collection to respective contractors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X