ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ತಡೆಗೆ ಮುಂದಾದ ಬಿಸಿಯೂಟ ಕಾರ್ಮಿಕರು: ಪೊಲೀಸರ ಜತೆ ವಾಗ್ವಾದ

|
Google Oneindia Kannada News

ಬೆಂಗಳೂರು, ಫೆಬ್ರವರಿ 07 : ಸೇವೆಯನ್ನು ಖಾಯಂಗೊಳಿಸಿ ಸುಪ್ರೀಂ ಕೋರ್ಟ್ ಆದೇಶದನ್ವಯ ಕನಿಷ್ಠ ವೇತನ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಶಾಲೆಗಳ ಬಿಸಿಯೂಟ ತಯಾರಕರ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಸ್ತೆಯನ್ನು ತಡೆದೇ ತೀರುತ್ತೇವೆ ಎಂದು ರಸ್ತೆ ತಡೆಗೆ ಕಾರ್ಮಿಕರು ಮುಂದಾದಾಗ ರಸ್ತೆ ತಡೆಗೆ ಪೊಲೀಸರು ಅವಕಾಶ ಮಾಡಿಕೊಟ್ಟಿಲ್ಲ, ಈ ಕಾರಣದಿಂದ ಕೆಲಕಾಲ ಪೊಲೀಸರು ಹಾಗೂ ಕಾರ್ಮಿಕರ ಮಧ್ಯೆ ವಾಗ್ವಾದ ನಡೆಯಿತು.

ಅನುದಾನ ಕಡಿತ: ಕೇಂದ್ರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಗರಂಅನುದಾನ ಕಡಿತ: ಕೇಂದ್ರದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರು ಗರಂ

ಎಐಟಿಯುಸಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಆಶ್ರಯದಲ್ಲಿ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಂಡು ನಗರಕ್ಕೆ ನೂರಾರು ಸಂಖ್ಯೆಯಲ್ಲಿ ಸಹಾಯಕಿಯರು ಆಗಮಿಸಿದ್ದಾರೆ.

War of words between Midday meals workers and police

ಕನಿಷ್ಠ 15 ಸಾವಿರ ಕನಿಷ್ಟ ವೇತನಕ್ಕಾಗಿ ಆಗ್ರಹಿಸಿದ್ದಾರೆ ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ಒತ್ತಾಯಿಸಿದ್ದಾರೆ. ಮಂಗಳವಾರ ಧರಣಿ ಸ್ಥಳಕ್ಕೆ ಸಚಿವ ತನ್ವೀರ್ ಸೇಠ್ ಬಂದಿದ್ದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಚರ್ಚಿಸಿ ವಾಪಾಸ್ ಬರುವುದಾಗಿ ಹೇಳಿ ಇನ್ನೂ ಕೂಡ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಾಡು ಇಲ್ಲವೆ ಮಡಿ ಎನ್ನುವ ಹೋರಾಟವನ್ನು ಮುಖ್ಯ ಅಡುಗೆ ತಯಾರಕರು , ಸಹಾಯಕಿಯರು ಕೈಗೊಂಡಿದ್ದಾರೆ. ರಾಜ್ಯದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಖಾಸಗಿ ಅನುದಾನಿತ ಶಾಲೆಗಳಲ್ಲಿ ಸರ್ಕಾರದ ಮಧ್ಯಾಹ್ನ ಬಿಸಿಯೂಟ ಯೊಜನೆಯಡಿಯಲ್ಲಿ ಕಳೆದ 15 ವರ್ಷಗಳಿಂದ ಸುಮಾರು 1 ಲಕ್ಷ 18 ಸಾವಿರ ಬಿಸಿಯೂಟ ತಯಾರಿಕರ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ.

ಕನಿಷ್ಠ ವೇತನ ಬೇಕೇ ಬೇಕು: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆಕನಿಷ್ಠ ವೇತನ ಬೇಕೇ ಬೇಕು: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

ಇವರಿಗೆ ಗೌರವ ಸಂಭಾವನೆಹೆಸರಿನಲ್ಲಿ ಅಲ್ಪವೇತನ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಇವರನ್ನು ವಂಚಿಸುತ್ತಿದೆ ಎಂದು ಧರಣಿಯ ನೇತೃತ್ವ ವಹಿಸಿರುವ ಎಐಟಿಯುಸಿ ರಾಜ್ಯಾಧ್ಯಕ್ಚ ಎಚ್.ಕೆ. ರಾಮಚಂದ್ರಪ್ಪ ಹೇಳಿದ್ದಾರೆ.

ಅರಂಭದಲ್ಲಿ300 ರೂ ಇದ್ದ ಗೌರವ ಧನ ಈಗ 2010 ರೂ. ಆಗಿದೆ. ಇದರಲ್ಲಿ ಸರ್ಕಾರಿ ಮತ್ತು ಭಾನುವಾರ ರಜೆ ದಿನಗಳ ಸಂಭಾವನೆಯನ್ನು ಕಡಿತಗೊಳಿಸಲಾಗುತ್ತಿದೆ ಎಂದರು.

English summary
Hundreds of Midday meals workers agitation has been entered to second on Wednesday at freedom park in Bengaluru. While workers have tried to rasta rokho police were warned them to arrest if traffic moving disturbed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X