ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆ: ಮಳೆಯ ನಡುವೆ ಮತದಾನ

|
Google Oneindia Kannada News

ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಶುಕ್ರವಾರ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ.

ಶ್ರೀನಗರದ ಪಿಇಎಸ್ ಕಾಲೇಜು, ಜಯನಗರದ ಎನ್ಎಂಕೆಆರ್‌ವಿ ಸೇರಿದಂತೆ ನಗರದ ವಿವಿಧೆಡೆ ಮತದಾನಕ್ಕೆ ಮತಗಟ್ಟೆಗಳನ್ನು ತೆರೆಯಲಾಗಿದೆ. ಸಂಜೆ 5ರವರೆಗೂ ಮತದಾನ ನಡೆಯಲಿದೆ.

ಬೆಂಗಳೂರಿನ ವಿವಿಧ ಭಾಗಗಳಲ್ಲಿ ತುಂತುರು ಮಳೆಯಾಗುತ್ತಿದ್ದು, ಅದರ ನಡುವೆಯೇ ಪದವೀಧರರು ಮತ ಚಲಾಯಿಸಲು ಮತಗಟ್ಟೆಗೆ ತೆರಳುತ್ತಿದ್ದಾರೆ.

ಜೂ. 8ರಂದು ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಜೂ. 8ರಂದು ಬೆಂಗಳೂರು ಪದವೀಧರ, ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ

ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮೋಜಿಗೌಡ, ಬಿಜೆಪಿಯಿಂದ ದೇವೇಗೌಡ ಮತ್ತು ಜೆಡಿಎಸ್‌ನಿಂದ ಅಚ್ಚೇಗೌಡ ಶಿವಣ್ಣ
ಸ್ಪರ್ಧಿಸುತ್ತಿದ್ದಾರೆ. ಅವರಲ್ಲದೆ, ಸಿಪಿಐ ಅಭ್ಯರ್ಥಿ ಕೆ. ಪ್ರಕಾಶ, ಭಾರತೀಯ ಜನತಾದಳದಿಂದ ವಿ.ಸುರೇಶ್ ಬಾಬು ಮತ್ತು 17 ಮಂದಿ ಪಕ್ಷೇತರರು ಸೇರಿದಂತೆ 22 ಮಂದಿ ಪದವೀಧರ ಕ್ಷೇತ್ರದ ಚುನಾವಣಾ ಕಣದಲ್ಲಿದ್ದಾರೆ.

voting begins for Bangalore graduates constituency

ಬೆಂಗಳೂರು ನಗರ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆ ನಡೆಯುತ್ತಿದೆ.

ಬೆಂಗಳೂರು ಪದವೀಧರರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 65,354 ಮತದಾರರಿದ್ದಾರೆ. ಅದರಲ್ಲಿ ಗಂಡು 38,451 ಪುರುಷರು, 26,891 ಮಹಿಳೆಯರು ಮತ್ತು 12 ಇತರೆ ಮತದಾರರು ಸೇರಿದ್ದಾರೆ.

ದಕ್ಷಿಣ ಶಿಕ್ಷಕರ ಕ್ಷೇತ್ರ: ಚುನಾವಣೆಗೆ ಭರದ ಸಿದ್ಧತೆದಕ್ಷಿಣ ಶಿಕ್ಷಕರ ಕ್ಷೇತ್ರ: ಚುನಾವಣೆಗೆ ಭರದ ಸಿದ್ಧತೆ

ಈ ಕ್ಷೇತ್ರದ ವ್ಯಾಪ್ತಿಯಲ್ಲಿ 36 ಮುಖ್ಯ ಮತಗಟ್ಟೆಗಳು, 46 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 82 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.

ಅರಮನೆ ರಸ್ತೆಯಲ್ಲಿರುವ ರಾಮನಾರಾಯಣ್ ಚಲ್ಲಾರಾಮ್ ಕಾಲೇಜಿನಲ್ಲಿ ಜೂನ್ 12 ರಂದು ಬೆಳಿಗ್ಗೆ 8.00 ಗಂಟೆಯಿಂದ 14 ಎಣಿಕೆ ಟೇಬಲ್‌ಗಳಲ್ಲಿ ಮತ ಎಣಿಕೆ ನಡೆಯಲಿದೆ.

English summary
Voting begins for Bangalore Graduates Constituency at 7 am on Friday. Constituency included Bangalore district, Bangalore Rural and Ramanagar District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X