ಬಿಬಿಎಂಪಿ: ಲಕ್ಕಸಂದ್ರ ವಾರ್ಡಿನಲ್ಲಿ ಮರು ಚುನಾವಣೆ ಮತದಾನ ಶುರು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 20: ಲಕ್ಕಸಂದ್ರ ವಾರ್ಡಿನಲ್ಲಿ ಮರು ಚುನಾವಣೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯ ಶ್ರೀರಂಗಪಟ್ಟಣದ ಗೌರಿಪುರ ಬಳಿ ಸಂಭವಿಸಿದ ಕಾರು ಅಪಘಾತದಲ್ಲಿ ಕಾರ್ಪೋರೇಟರ್ ಮಹೇಶ್ ಬಾಬು(ಬಿಜೆಪಿ) ಸೇರಿದಂತೆ ಮೂವರು ಜುಲೈ 17 ರಂದು ಸಾವನ್ನಪ್ಪಿದ್ದರು.

ಬಿಟಿಎಂ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಗೆ ಬರುವ ಲಕ್ಕಸಂದ್ರ ವಾರ್ಡ್ ನಲ್ಲಿ ರಮೇಶ್ ಬಾಬು ಅವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನಪ್ರಿಯತೆ ಗಳಿಸಿದ್ದರು.[ಕಾರ್ಪೊರೇಟರ್ ಮಹೇಶ್ ಸಾವು, ಲಕ್ಕಸಂದ್ರದಲ್ಲಿ ಆಪ್ತರ ಆಕ್ರಂದನ]

ಬಿಜೆಪಿ ಕಾರ್ಪೋರೇಟರ್‌ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಭಾನುವಾರ(ನವೆಂಬರ್ 20) ಉಪಚುನಾವಣೆ ನಡೆಯುತ್ತಿದ್ದು, ನವೆಂಬರ್ 23ರಂದು ಫಲಿತಾಂಶ ಹೊರಬರಲಿದೆ.

Voting begins for BBMP Lakkasandra ward By-Election

ಲಕ್ಕಸಂದ್ರ ವಾರ್ಡ್ ಸ್ಥಾನಕ್ಕೆ ಬಿಜೆಪಿಯಿಂದ ದಿವಂಗತ ಮಹೇಶ್ ಬಾಬು ಅವರ ಪತ್ನಿ ಸರಳಾ ಮಹೇಶಬಾಬು ಅವರನ್ನು ಕಣಕ್ಕಿಳಿಸಲಾಗಿದೆ. ಕಾಂಗ್ರೆಸ್ಸಿನಿಂದ ಬಿ. ಮೋಹನ್‌ ಸ್ಪರ್ಧಿಸಿದ್ದರೆ, ಜೆಡಿಎಸ್ ನಿಂದ ಪರ್ವೇಜ್ ಅಹಮ್ಮದ್, ಪಕ್ಷೇತರರಾಗಿ ಎನ್.ಎಸ್. ಮುನಿರಾಜು ಕೂಡಾ ಚುನಾವಣಾ ಕಣದಲ್ಲಿದ್ದಾರೆ.

ಲಕ್ಕಸಂದ್ರ ವಾರ್ಡಿನಲ್ಲಿ ಒಟ್ಟು 29 ಸಾವಿರ ಮತದಾರರಿದ್ದು, ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಮಹೇಶ್ ಬಾಬು ಸಾವಿನ ಅನುಕಂಪದ ಅಲೆ ಬಿಜೆಪಿಗೆ ವರವಾಗುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Voting begins for the Byelection to the Lakkasandra ward in the Bruhat Bengaluru Mahanagara Palike council on November 20. The by-election was necessiated by the death of councillor Mahesh Babu in a accident on July 17.
Please Wait while comments are loading...