ಬೆಂಗಳೂರು : ನ.15ರಿಂದ ಮತದಾರರ ಪಟ್ಟಿಗೆ ಹೆಸರು ಸೇರಿಸಿ

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 30 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು ನಗರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ವಿಶೇಷ ಅಭಿಯಾನವನ್ನು ಆಯೋಜಿಸಿದೆ. ನ.15ರಿಂದ 30ರ ತನಕ ಈ ಅಭಿಯಾನ ನಡೆಯಲಿದೆ.

ಮತದಾರರ ಚೀಟಿಗೂ ಆಧಾರ್ ನಂಬರ್ ಜೋಡಣೆ?

ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ 2018ರ ವಿಧಾನಸಭೆ ಚುನಾವಣೆಗೂ ಮುನ್ನ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬೆಂಗಳೂರು ನಗರದ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಅದನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

Voter registration drive in Bengaluru from November 15 to 30, 2017

ಪರಿಷ್ಕೃತ ಮತದಾರರ ಪಟ್ಟಿಯನ್ನು ಅಕ್ಟೋಬರ್ 30ರ ಬಳಿಕ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ, ವಾರ್ಡ್ ಕಚೇರಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಪ್ರಕಟಿಸಲಾಗುತ್ತದೆ. ಆಕ್ಷೇಪಣೆಗಳಿದ್ದರೆ ನ.30ರೊಳಗೆ ಸಲ್ಲಿಸಬೇಕು.

ಬೆಂಗಳೂರು ಮತದಾರರ ಪಟ್ಟಿಯಲ್ಲಿ 50 ಸಾವಿರ ಅಕ್ರಮ ಬಾಂಗ್ಲಾ ಪ್ರಜೆಗಳು!

ಹೊಸದಾಗಿ ಹೆಸರು ಸೇರಿಸಿ : ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ನಮೂನೆ 6, ಹೆಸರು ತೆಗೆದು ಹಾಕಲು ಅರ್ಜಿ ನಮೂನೆ 7, ಹೆಸರು ಬದಲಾವಣೆ/ತಿದ್ದುಪಡಿಗೆ ಅರ್ಜಿ ನಮೂನೆ -, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ತಿದ್ದುಪರಿ/ಬದಲಾವಣೆ ನಮೂನೆ 8ಎ ಅರ್ಜಿ ಸಲ್ಲಿಸಬೇಕು.

ಪರಿಷ್ಕೃತ ಮತದಾರರ ಪಟ್ಟಿ ಅಂಕಿ-ಅಂಶಗಳು

* ಬೆಂಗಳೂರಿನ ಒಟ್ಟು ಮತದಾರರು 1,27,46,145

* ಪುರುಷ ಮತದಾರರು 66,37,517

* ಮಹಿಳಾ ಮತದಾರರು 61,08,628

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bruhat Bengaluru Mahanagara Palike (BBMP) will be taking up a voter registration drive in Bengaluru. From November 15 to 30, 2017 people can included their name for voter list.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ