ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ಆರ್‌ ನಗರದ ಮತದಾರರಿಗೆ ವೋಟರ್‌ ಐಡಿ ವಾಪಸ್‌:ಆಯೋಗ ಕ್ರಮ

By Nayana
|
Google Oneindia Kannada News

ಬೆಂಗಳೂರು, ಮೇ 18: ರಾಜರಾಜೇಶ್ವರಿ ನಗರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದ್ದ 9,746 ಮತದಾರರ ಗುರುತಿನ ಚೀಟಿಗಳನ್ನು ವಾಪಸ್‌ ನೀಡಲು ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.

ಗುರುವಾರದಿಂದ ವೋಟರ್‌ ಐಡಿ ಹಿಂದಿರುಗಿಸಲಾಗುತ್ತಿದ್ದು ಬಿಬಿಎಂಪಿಯ 60 ಕಂದಾಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇನ್ನೆರೆಡು ಮೂರು ದಿನಗಳೊಳಗಾಗಿ ಎಲ್ಲ ಗುರುತಿನ ಚೀಟಿಯನ್ನು ಮತದಾರರಿಗೆ ನೀಡುವ ಪ್ರಕ್ರಿಯೆ ಅಂತಿಮಗೊಳ್ಳಲಿದೆ.

ಚುನಾವಣಾ ಗುರುತಿನ ಚೀಟಿ ಪತ್ತೆ ಪ್ರಕರಣ: ಮುನಿರತ್ನಗೆ ಜಾಮೀನು ಚುನಾವಣಾ ಗುರುತಿನ ಚೀಟಿ ಪತ್ತೆ ಪ್ರಕರಣ: ಮುನಿರತ್ನಗೆ ಜಾಮೀನು

ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಕಾರಿಗಳು ಗುರುತಿನ ಚೀಟಿಯನ್ನು ಮತದಾರರಿಗೆ ಖುದ್ದಾಗಿ ನೀಡಬೇಕು. ಅವರ ಮನೆಯವರಿಗಾಗಲಿ, ಸಂಬಂಧಿಕರಿಗಾಗಿ ಕೊಡುವಂತಿಲ್ಲ. ಆದ್ದರಿಂದ ಅಧಿಕಾರಿಗಳು ಮೂಲ ಮತದಾರರನ್ನು ಹುಡುಕಿ ಗುರುತಿನ ಚೀಟಿ ವಿತರಿಸಿ ದೃಢಪಡಿಸಬೇಕಾಗುತ್ತದೆ.

Voter IDs distribution resume in R.R.Nagar

28ಕ್ಕೆ ಚುನಾವಣೆ: ಫ್ಲ್ಯಾಟ್‌ನಲ್ಲಿ ಭಾರಿ ಪ್ರಮಾಣದಲ್ಲಿ ಮತದಾರರ ಅಸಲಿ ಗುರುತಿನ ಚೀಟಿ ಪತ್ತೆಯಾದ ನಂತರ ಪ್ರಕಟರಣ ಸಾಖಲಿಸಿಕೊಂಡಿದ್ದ ಚುನಾವಣಾ ಆಯೋಗ ಮೇ 12ಕ್ಕೆ ನಡೆಯಬೇಕಿದ್ದ ಮತದಾನ ಪ್ರಕ್ರಿಯೆಯನ್ನು 28ಕ್ಕೆ ಮುಂದೂಡಿದೆ 30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

English summary
Election commission has deployed more than 60 revenue officials to distribute voter identification cards which were seized in a flat in Jalahalli recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X