ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

500 ರೂ. ಕೊಟ್ಟವರನ್ನು ಆರಿಸಿ ಐದು ವರ್ಷ ಕೂರಿಸಬೇಡಿ

By ಗುರು ಕುಂಟವಳ್ಳಿ
|
Google Oneindia Kannada News

ಬೆಂಗಳೂರು, ಆಗಸ್ಟ್ 13 : ಮತಗಳನ್ನು ಮಾರಿಕೊಳ್ಳಬೇಡಿ, 500 ರೂ. ಕೊಟ್ಟವರನ್ನು ಆರಿಸಿ ಐದು ವರ್ಷ ಕೂರಿಸಬೇಡಿ, ಕಡ್ಡಾಯವಾಗಿ ಮತದಾನ ಮಾಡಿ, ಮತದಾನ ನಿಮ್ಮ ಕರ್ತವ್ಯ ಅದನ್ನು ಮರೆಯಬೇಡಿ...ಇದು ಚುನಾವಣಾ ಆಯೋಗ ಜನರಲ್ಲಿ ಮೂಡಿಸುತ್ತಿರುವ ಜಾಗೃತಿಯಲ್ಲಿ ಹೋಟೆಲ್‌ ಮಾಲೀಕರರೊಬ್ಬರು ಜನರಿಗೆ ಉಪಹಾರ ನೀಡುವ ಜೊತೆ ನೀಡುತ್ತಿರುವ ಸಂದೇಶ.

ಚಾಮರಾಜಪೇಟೆಯಲ್ಲಿರುವ 'ಕನ್ನಡ ತಿಂಡಿ ಕೇಂದ್ರ'ದ ಕೆ.ವಿ.ರಾಮಚಂದ್ರ ಮತ್ತು ಕೆ.ವಿ.ಅಶ್ವಥನಾರಾಯಣ ಅವರು ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಈ ರೀತಿಯ ಸಂದೇಶಗಳನ್ನು ಹೇಳಿ ಕಳುಹಿಸುತ್ತಾರೆ. ಚಾಮರಾಜ ಪೇಟೆ ಸಿಗ್ನಲ್‌ನಿಂದ ಗೂಡ್ಸ್‌ ಶೆಡ್ ರಸ್ತೆಗೆ ಹೋಗುವ ಮಾರ್ಗದಲ್ಲಿ ಕನ್ನಡ ತಿಂಡಿ ಕೇಂದ್ರವಿದೆ.[ಬಿಬಿಎಂಪಿ ಕದನ, ಬಿಜೆಪಿಗೆ ಮೊದಲ ಗೆಲುವು]

ಮತದಾನ ಜಾಗೃತಿ ಬಗ್ಗೆ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ಕೆ.ವಿ.ರಾಮಚಂದ್ರ ಅವರು 'ಮತದಾನ ಮಾಡುವುದು ನಮ್ಮ ಕರ್ತವ್ಯ. ಜನರು ಅದನ್ನು ಮರೆಯುತ್ತಿದ್ದಾರೆ. ಮತ ಹಾಕುವ ಕೆಲವು ಜನರು ಹಣ ಮುಂತಾದ ಆಮಿಷಗಳಿಗೆ ಮತಗಳನ್ನು ಮಾರಿಕೊಳ್ಳುತ್ತಾರೆ. ಅವರಿಗಾಗಿ ಈ ಸಂದೇಶ ಹಾಕಿದ್ದೇವೆ' ಎಂದು ಹೇಳಿದರು.[ಬಿಬಿಎಂಪಿ ಚುನಾವಣೆ ವೇಳಾಪಟ್ಟಿ]

ಕೆ.ವಿ.ರಾಮಚಂದ್ರ ಅವರು ಅಪ್ಪಟ ಕನ್ನಡ ಭಕ್ತರು 'ಚಾಮರಾಜ ಪೇಟೆ ಕನ್ನಡ ಸಾಂಸ್ಕೃತಿ ಕೇಂದ್ರ' ಎಂಬ ಸಂಘ ಕಟ್ಟಿಕೊಂಡು ಹಲವಾರು ಕನ್ನಡ ಪರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಮಚಂದ್ರ ಅವರ ಹೋಟೆಲ್‌ಗೆ ನೀವು ಹೋದರೆ ಅಲ್ಲಿ ಕನ್ನಡದ ಪುಸ್ತಕ, ಕವಿಗಳ ಫೋಟೋಗಳು ನಿಮ್ಮನ್ನು ಸ್ವಾಗತಿಸುತ್ತವೆ. ಹೊಟ್ಟೆ ತುಂಬಾ ಊಟ ಮಾಡುವ ಜೊತೆ ಕನ್ನಡ ಜ್ಞಾನವನ್ನು ಬೆಳೆಸಿಕೊಳ್ಳಬಹುದು. ಚಿತ್ರಗಳಲ್ಲಿ ನೋಡಿ ರಾಮಚಂದ್ರ ಅವರು ಮತದಾನ ಜಾಗೃತಿ ಸಂದೇಶ....

'ಕನ್ನಡ ತಿಂಡಿ ಕೇಂದ್ರ'ದಲ್ಲಿ ಮತದಾನ ಜಾಗೃತಿ

'ಕನ್ನಡ ತಿಂಡಿ ಕೇಂದ್ರ'ದಲ್ಲಿ ಮತದಾನ ಜಾಗೃತಿ

ಚಾಮರಾಜಪೇಟೆಯಲ್ಲಿರುವ ಕನ್ನಡ ತಿಂಡಿ ಕೇಂದ್ರದ ಕೆ.ವಿ.ರಾಮಚಂದ್ರ ಅವರು ಹೋಟೆಲ್‌ಗೆ ಬರುವ ಜನರಿಗೆ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಹೋಟೆಲ್‌ನಲ್ಲಿ ಹೊಟ್ಟೆ ತುಂಬಾ ಊಟ ಮಾಡುವ ಜೊತೆ ಕನ್ನಡ ಜ್ಞಾನವನ್ನು ಬೆಳೆಸಿಕೊಳ್ಳಬಹುದಾಗಿದೆ.

500 ರೂ.ಗೆ ಮತವನ್ನು ಮಾರಿಕೊಳ್ಳಬೇಡಿ

500 ರೂ.ಗೆ ಮತವನ್ನು ಮಾರಿಕೊಳ್ಳಬೇಡಿ

500 ರೂ. ಕೊಡುವ ವ್ಯಕ್ತಿಯನ್ನ ಆಯ್ಕೆ ಮಾಡಿ 5 ವರ್ಷ ಕೂರಿಸಬೇಡಿ. 5 ವರ್ಷ ಅಂದರೆ 1825 ದಿನಗಳು. 500 ರೂ.ಗಳನ್ನು 1825 ದಿನಗಳಿಗೆ ಹಂಚಿಕದರೆ 27 ಪೈಸೆ ಆಗುತ್ತದೆ. ಭಿಕ್ಷೆ ಬೇಡುವವರು 27 ಪೈಸೆ ತೆಗೆದುಕೊಳ್ಳುವುದಿಲ್ಲ ನಿಮಗೆ ಏಕೆ ಆ ಹಣ? ಎಂದು ರಾಮಚಂದ್ರ ಅವರು ಫಲಕ ಹಾಕಿದ್ದಾರೆ.

ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ

ಮತದಾನ ನಮ್ಮ ಹಕ್ಕು ಮತ್ತು ಕರ್ತವ್ಯ

ಮತದಾನ ನಮ್ಮ ಅಮೂಲ್ಯವಾದ ಹಕ್ಕು ಮತ್ತು ಕರ್ತವ್ಯ. ಅದನ್ನು ಮರೆಯಬೇಡಿ. ಕಡ್ಡಾಯವಾಗಿ ಮತದಾನ ಮಾಡಿ. ಯಾವುದೇ ಆಮಿಷಗಳಿಗೆ ಒಳಗಾಗದೇ ಚುನಾವಣೆಯಲ್ಲಿ ಮತಹಾಕಿ ಎಂದು ರಾಮಚಂದ್ರ ಅವರು ಜನರಿಗೆ ಸಂದೇಶ ನೀಡುತ್ತಿದ್ದಾರೆ.

ಕನ್ನಡದ ಭಕ್ತ ರಾಮಚಂದ್ರ

ಕನ್ನಡದ ಭಕ್ತ ರಾಮಚಂದ್ರ

ರಾಮಚಂದ್ರ ಅವರು ಅಪ್ಪಟ ಕನ್ನಡದ ಭಕ್ತರು. ಚಾಮರಾಜಪೇಟೆ ಕನ್ನಡ ಸಾಂಸ್ಕೃತಿಕ ಕೇಂದ್ರ ಎಂಬ ಸಂಸ್ಥೆ ಕಟ್ಟಿಕೊಂಡು ಕನ್ನಡ ಪರವಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅವರ ಹೋಟೆಲ್‌ನಲ್ಲಿ ಕನ್ನಡ ಪುಸ್ತಕ, ಕವಿಗಳ ಫೋಟೋಗಳನ್ನು ಜನರನ್ನು ಸ್ವಾಗತಿಸುತ್ತವೆ.

ಎಲ್ಲಿದೆ ಕನ್ನಡ ತಿಂಡಿ ಕೇಂದ್ರ

ಎಲ್ಲಿದೆ ಕನ್ನಡ ತಿಂಡಿ ಕೇಂದ್ರ

ಚಾಮರಾಜ ಪೇಟೆ ಸಿಗ್ನಲ್‌ನಿಂದ ಗೂಡ್‌ ಶೆಡ್‌ ರಸ್ತೆಗೆ ಹೋಗುವ ಮಾರ್ಗದಲ್ಲಿ ಕನ್ನಡ ತಿಂಡಿ ಕೇಂದ್ರವಿದೆ. ಕರ್ನಾಟಕ ಬೇಲ್ ಹೌಸ್ ಮುಂಭಾಗ ಈ ಕನ್ನಡ ಕೇಂದ್ರವಿದೆ ಎಂದರೆ ಹಲವು ಜನರಿಗೆ ತಿಳಿಯಬಹುದು.

English summary
K.V.Ramachandra who runs Kannada Tindi Kendra in Chamarajpet, Bengaluru begins Voter awareness campaign in hotel. Ramachandra said, cast your vote, It's your duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X