ಮತದಾನದ ಜಾಗೃತಿಗಾಗಿ ಅರಿವಿನ ಓಟ, ಬೀದಿನಾಟಕ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ (ಏ.08)ರಂದು ಬೆಳಗ್ಗೆ 7.30ಕ್ಕೆ ಕಬ್ಬನ್ ಪಾರ್ಕ್‌ನ ಮುಖ್ಯ ಪ್ರವೇಶ ದ್ವಾರದಲ್ಲಿ ವಿಧಾನಸಭಾ ಚುನಾವಣೆಯ ಪ್ರಯುಕ್ತ ಮತದಾನ ಜಾಗೃತಿಗಾಗಿ ರಸ್ತೆ ಓಟ ಮತ್ತು ಬೀದಿ ನಾಟಕ ನಡೆಯಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಮತದಾನದ ಕಡ್ಡಾಯದ ಬಗ್ಗೆ ಜಾಗೃತಿ ಮೂಡಿಸಲು ರಸ್ತೆ ಓಟವು ಕಬ್ಬನ್ ಪಾರ್ಕ್‌ನ ಮುಖ್ಯದ್ವಾರದಿಂದ ಕಸ್ತೂರ್‌ಬಾ ರಸ್ತೆ ಮಾರ್ಗವಾಗಿ ಕಂಠೀರವ ಕ್ರೀಡಾಂಗಣದ ಬಲಭಾಗದ ರಸ್ತೆ ಮುಖಾಂತರ ಮಲ್ಯ ಆಸ್ಪತ್ರೆ ರಸ್ತೆ, ರಾಜಾರಾಂ ಮೋಹನರಾಯ್ ರಸ್ತೆಯಲ್ಲಿ ಸಂಚರಿಸಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಹಕಾರ ಸಂಘದ ಬಳಿ ಮುಕ್ತಾಯವಾಗಲಿದೆ.

ನಾಳೆ ಮಿಂಚಿನ ನೋಂದಣಿ: ಪಟ್ಟಿಗೆ ಹೆಸರು ಸೇರಿಸಲು ಮರೆಯಬೇಡಿ

ಇದೇ ವೇಳೆ ಮತದಾನ ಹಾಗೂ ವಿವಿ ಪ್ಯಾಟ್ ಸಾಧನವನ್ನು ಹೇಗೆ ಬಳಸಲಾಗುವುದು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಅವರು ತಿಳಿಸಿದ್ದಾರೆ.

Voter awareness campaign by BBMP welfare association in cubbon park

ಮೈಸೂರು, ರಮಾನಂದರ ಗೆಜ್ಜೆ ಹೆಜ್ಜೆ ರಂಗ ತಂಡದವರಿಂದ ಬೆಳಿಗ್ಗೆ 8 ಗಂಟೆಗೆ ಕಬ್ಬನ್ ಪಾರ್ಕ್ ಮುಖ್ಯದ್ವಾರದಲ್ಲಿ ಚುನಾವಣೆ ಸಮಯ ಬೀದಿ ನಾಟಕದ ಮೂಲಕ ಮತದಾನದ ಜಾಗೃತಿಯನ್ನುಂಟು ಮಾಡಲಾಗುವುದು ಎಂದು ತಿಳಿಸಿದರು.

ರಸ್ತೆ ಓಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಮತದಾನ ಕಡ್ಡಾಯ ಎಂಬ ಚಿಹ್ನೆಯುಳ್ಳ ಟೀ ಶರ್ಟ್ ಅನ್ನು ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಮಿಂಚಿನ ನೋಂದಣಿಗೆ ದಾಖಲೆಗಳು ಏನೇನು ಬೇಕು?

ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್, ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್, ಅಪರ ಚುನಾವಣಾಧಿಕಾರಿ ಮನೋಜ್ ರಾಜನ್, ವಿಶೇಷ ಆಯುಕ್ತ (ಚುನಾವಣೆ) ಅಪರ ಆಯುಕ್ತ ಎಂ.ಬಿ. ಸಾವಿತ್ರಿ (ಆಡಳಿತ ಮತ್ತು ಕಲ್ಯಾಣ) ಸೇರಿದಂತೆ 8 ವಲಯಗಳ ಜಂಟಿ ಆಯುಕ್ತರು 27 ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಪಾಲಿಕೆ ಎಲ್ಲ ಅಧಿಕಾರಿ ಮತ್ತು ನೌಕರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP employees organising voter awareness campaign in Cubbon park park. Street drama and many other functions are heppening there.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ