ಚಂದ್ರಶೇಖರ್ ಬಡಿಗೇರ್ ಸಹಾಯಾರ್ಥ ಸಂಗೀತ ರಸ ಸಂಜೆ

Subscribe to Oneindia Kannada

ಬೆಂಗಳೂರು, ಜನವರಿ 25: ತನ್ನ ಜೀವನವನ್ನೇ ಸಂಗೀತ ಮತ್ತು ಕಲೆಗಾಗಿ ಮುಡಿಪಾಗಿಟ್ಟ ಅಪ್ರತಿಮ ಗಾನ ಗಾರುಡಿಗ ಶ್ರೀ ಚಂದ್ರಶೇಖರ್ ಬಡಿಗೇರ್ ಸಹಾಯಾರ್ಥ ಸಂಗೀತ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಪಂಡಿತ್ ಪುಟ್ಟರಾಜ ಗವಾಯಿಗಳ ಅನುಯಾಯಿಗಳೂ, ಪಂಡಿತ್ ರಘುನಾಥ್ ನಾಕೋಡಾ ಅವರ ಶಿಷ್ಯರಾಗಿರುವ ಚಂದ್ರಶೇಕರ್ ಬಡಿಗೇರ್ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಈ ಸಂದರ್ಭ ಅವರ ಚಿಕಿತ್ಸೆಯ ವೆಚ್ಚ ಭರಿಸಲು ಈ ಸಂಗೀತ ಕಾರ್ಯಕ್ರಮ ಆಯೋಜಿಲಾಗಿದೆ.

 Vocal recital program to help Chandrashekhar Badiger

ಅನನ್ಯ ಮತ್ತು ಭಾರತೀಯ ವಿದ್ಯಾ ಭವನ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿವೆ. ಕಾರ್ಯಕ್ರಮದಲ್ಲಿ ಪಂಡಿತ್ ವೆಂಕಟೇಶ್ ಕುಮಾರ್ ಸ್ವರ ಮಾಧುರ್ಯವಿದೆ. ಇನ್ನು ತಬಲಾದಲ್ಲಿ ಪಂಡಿತ್ ರಘುನಾಥ್ ನಾಕೋಡಾ, ಸಾರಂಗಿಯಲ್ಲಿ ಸರ್ಫರಾಜ್ ಖಾನ್ ಮತ್ತು ಮದುಸೂಧನ್ ಭಟ್ ಹಾರ್ಮೋನಿಯಂ ನುಡಿಸಲಿದ್ದಾರೆ.

ಗಣರಾಜ್ಯೋತ್ಸವದ (ಜನವರಿ 26) ದಿನ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದ ಖಿಂಚ ಸಭಾಂಗಣದಲ್ಲಿ ಸಂಜೆ 6 ಗಣಟೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇಲ್ಲಿ ಸಂಗ್ರಹವಾದ ಹಣವನ್ನು ಬಡಿಗೇರ್ ಚಿಕಿತ್ಸಾ ವೆಚ್ಚಕ್ಕೆ ಬಳಸಲಾಗುವುದು.

 Vocal recital program to help Chandrashekhar Badiger

ಕ;ಲಾವಿದರ ಸಹಾಯಕ್ಕೆಂದೇ ಇರುವ 'ಆರೋಗ್ಯ ನಿಧಿ'ಗೆ ಈ ಹಣ ಹೋಗಲಿದ್ದು, ದಾನ ನೀಡುವವರು ಕೇಂದ್ರ ಸರಕಾರದ ನಿಯಮಗಳ (ಐಟಿ ಆಕ್ಟ್ 80ಜಿ) ಪ್ರಕಾರ ತೆರಿಗೆ ವಿನಾಯಿತಿಯನ್ನೂ ಪಡೆದುಕೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ನೇರವಾಗಿ ಧನ ಸಹಾಯ ಮಾಡುವವರು, Karnataka Bank, Malleshwaram, Bengaluru, IFSC Code : KARB0000055, A/C 0552000100011301 ಇಲ್ಲಿಗೆ ಕಳುಹಿಸುವಂತೆ ಕೋರಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Vocal recital program being organized in Bengaluru, to fund raise for the medical allowance of musician Shri. Chandrashekhar Badiger, a disciple of Pt. Raghunath Nakod.
Please Wait while comments are loading...