ವಿವೇಕ್ ನಗರದ ಬಾಲ ಏಸು ಚರ್ಚ್ ನಲ್ಲಿ ಜ.14ರವರೆಗೆ ವಾರ್ಷಿಕೋತ್ಸವ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜನವರಿ 5: ವಿವೇಕ್ ನಗರದಲ್ಲಿರುವ ಬಾಲ ಏಸು ಚರ್ಚ್ ನ ವಾರ್ಷಿಕೋತ್ಸವ ಜನವರಿ 4ರಿಂದ ಆರಂಭವಾಗಿದ್ದು, ಜನವರಿ 14ರವರೆಗೆ ನಡೆಯಲಿದೆ. ಎಲ್ಲ ಜಾತಿ, ಧರ್ಮ ಹಾಗೂ ಭಾಷೆಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಬಾರಿ ನಡೆಯುತ್ತಿರುವುದು ನಲವತ್ತಾರನೇ ವಾರ್ಷಿಕೋತ್ಸವ.

ಪ್ರತಿ ದಿನ ಬೆಳಗ್ಗೆ 5ರಿಂದ ಆರಂಭವಾಗುವ ಕಾರ್ಯಕ್ರಮ ರಾತ್ರಿ 9ರವರೆಗೆ ನಡೆಯುತ್ತವೆ. ಪ್ರಾರ್ಥನೆ, ಸಾಮೂಹಿಕ ವಿವಾಹ ಹಾಗೂ ಐವತ್ತು ವರ್ಷ ದಾಂಪತ್ಯ ನಡೆಸಿದ ದಂಪತಿಗೆ ಬಲಿಪೂಜೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜನವರಿ 14ರಂದು ಅದ್ಧೂರಿ ಕಾರ್ಯಕ್ರಮವಿದ್ದು, ಅಂದು ಮಧ್ಯರಾತ್ರಿ 12ರವರೆಗೆ ನಡೆಯಲಿದೆ.[ಅತ್ತೂರು ಚರ್ಚಿನಲ್ಲಿ ಟವರ್ ಸಂಪರ್ಕ: ಫಲಿಸಿದ ಮೋದಿ ಪತ್ರ]

Viveknagar Infant jesus shrine annual fest

ವೈವಿಧ್ಯಮಯವಾಗಿ ರಥೋತ್ಸವ, ಮೆರವಣಿಗೆ ನಡೆಯಲಿದ್ದು, ಧಾರ್ಮಿಕ ಮುಖಂಡರು, ಸನ್ಯಾಸಿನಿಯರು, ಗಣ್ಯರು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳಲಿದ್ದಾರೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಏಸುವಿನ ದಯೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಲಾಗಿದೆ.

ಜನವರಿ 4ರಿಂದ 7ರವರೆಗೆ ರೆ.ಕ್ರಿಸ್ಟೋಫರ್ ವಿಮಲ್ ರಾಜ್-ಭಕ್ತಿ ಭವನ್, 8ರಿಂದ 10ರವರೆಗೆ ರೆ.ವಿನೂ ಫ್ಯಾಬಿಯನ್ ಸುಧಾಕರ್-ಅಲಸಿಯಾನ್ ನಿಲಯ, ಜನವರಿ 11ರಿಂದ 13ರವರೆಗೆ- ಹೋಲಿ ಫ್ಯಾಮಿಲಿ ಚರ್ಚ್ ನಲ್ಲಿ ರೆ.ಅಮರ್ ನಾಥ್ ದಿನೇಶ್ ರಾಯ್ ಉಪನ್ಯಾಸ ನೀಡಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Annual festivity of Infant jesus shrine is solemnly celebrated on 14th January.
Please Wait while comments are loading...