ವಿಶ್ವನಂದಿನಿ- ವಿಷ್ಣುದಾಸ ನಾಗೇಂದ್ರಚಾರ್ಯರ ಅಪ್ಲಿಕೇಷನ್

Posted By:
Subscribe to Oneindia Kannada

ಬೆಂಗಳೂರು, ಮೇ 09: ವಿಶ್ವನಂದಿನಿಯ ಬಾಂಧವರಿಗೆ ಅಕ್ಷಯ ತೃತೀಯಾ ಪರ್ವಕಾಲದ ಹಾರ್ದಿಕ ಶುಭಾಶಯಗಳು. ಅಕ್ಷಯ ತೃತೀಯಾದ ದಿವಸ ಹೊಸತನ್ನು ಕೊಳ್ಳುವ ಕೆಲಸವನ್ನು ಲೌಕಿಕರು ಮಾಡುತ್ತಾರೆ. ಆದರೆ, ವಿಶ್ವನಂದಿನಿಯ App ಅನ್ನು ಈ ನಿಮಗಾಗಿ ನೀಡುತ್ತಿದ್ದೇನೆ, ಶಾಸ್ತ್ರದ ಶ್ರವಣ, ತತ್ವದ ಅನುಷ್ಠಾನಗಳು ನಿಮ್ಮಿಂದ ಅಕ್ಷಯವಾಗಿ ನಡೆಯಲಿ ಎಂಬ ಹಾರೈಕೆಯೊಂದಿಗೆ.

ಈ App ನ ಮೊದಲ ಪುಟದಲ್ಲಿ ನೂತನ ಲೇಖನ ಮತ್ತು ನೂತನ ಉಪನ್ಯಾಸಗಳು ಕಾಣುತ್ತವೆ. ಅವುಗಳನ್ನು Click ಮಾಡಿದರೆ ಆಯಾ ಲೇಖನ ಮತ್ತು ಉಪನ್ಯಾಸದ ಪುಟ ತೆರೆದುಕೊಳ್ಳುತ್ತದೆ.

ಅಲ್ಲಿ ನೀವು ಲೇಖನಗಳನ್ನು ಓದಬಹುದು, ಹಾಗೂ PDF, MP3 ಗಳನ್ನು download ಮಾಡಿಕೊಳ್ಳಬಹುದು. ನಿಮ್ಮ ಮೊಬೈಲಿನಲ್ಲಿ ವಿಶ್ವನಂದಿನಿ ಎಂಬ Folderನಲ್ಲಿ ಆ PDF, MP3 ಗಳು store ಆಗಿರುತ್ತವೆ.

App ನ ಮೇಲ್ಭಾಗದ ಮೂರು ಗೆರೆಗಳ Navicon ಇರುತ್ತದೆ. ಅದನ್ನು ಒತ್ತಿದರೆ, Profile, Artilcles, Upanyasas, Books, Specuial Articles ಮುಂತಾದ ಲಿಂಕ್ ಗಳು ಇರುತ್ತವೆ. ಅವುಗಳಲ್ಲಿ ಹಳೆಯ ಎಲ್ಲ ಲೇಖನ ಉಪನ್ಯಾಸಗಳನ್ನು ನೀವು ಪಡೆಯಬಹುದು.

ತಾಂತ್ರಿಕ ಕಾರಣಗಳಿಂದ ಆರಂಭದಲ್ಲಿ ಕೆಲವೇ ಲೇಖನ ಮತ್ತು ಉಪನ್ಯಾಸಗಳನ್ನು Upload ಮಾಡಲಾಗಿದೆ. ಎರಡು ದಿವಸಗಳ ನಂತರ ಹಳೆಯ ಎಲ್ಲವನ್ನೂ ಒಂದೊಂದಾಗಿ Upload ಮಾಡಲಾಗುವದು. Vishwanandini App ಡೌನ್ ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ

Vishwanandini Application by Vishnudasa Nagendracharya Madhwa philosophy

Vishwanandini App ಅನ್ನು ಉಪಯೋಗಿಸುವಾಗ ನಿಮಗೇನಾದರೂ ತೊಂದರೆ ಕಂಡುಬಂದಲ್ಲಿ, Feedback section ಮುಖಾಂತರ ನಮಗೆ ತಿಳಿಸುವದು.

App ನಿಮಗೆ ಉಪಯುಕ್ತವಾಗಿದ್ದಲ್ಲಿ, Playstore ನ comment ಗಳಲ್ಲಿ ಇದರ ಕುರಿತು ಬರೆಯಬೇಕಾಗಿ ವಿನಂತಿಸುತ್ತೇನೆ. ಉಳಿದ ಸಜ್ಜನರಿಗೆ ಇದರಿಂದ ಉಪಯೋಗವಾಗುತ್ತದೆ.

ವಿಶ್ವನಂದಿನಿಯ ನೂತನ ಗೃಹಕ್ಕೆ ನಿಮಗೆಲ್ಲರಿಗೂ ಹಾರ್ದಿಕಸ್ವಾಗತ. ಶಾಸ್ತ್ರದ ಸೇವೆ ನಿರಂತರವಾಗಿ ಅಕ್ಷಯವಾಗಿ ನಮ್ಮೆಲ್ಲರಿಂದ ನಡೆಸುವಂತೆ ಬ್ರಾಹ್ಮಣರ ನಾಥ ಶ್ರೀ ಪರಶುರಾಮದೇವರನ್ನು ಭಕ್ತಿಯಿಂದ ಪ್ರಾರ್ಥಿಸುತ್ತೇನೆ.

- ವಿಷ್ಣುದಾಸ ನಾಗೇಂದ್ರಾಚಾರ್ಯ

ವಿಶ್ವನಂದಿನಿ- ವಿಷ್ಣುದಾಸ ನಾಗೇಂದ್ರಚಾರ್ಯರ ಅಪ್ಲಿಕೇಷನ್

ವಿಶ್ವನಂದಿನಿ- ವಿಷ್ಣುದಾಸ ನಾಗೇಂದ್ರಚಾರ್ಯರ ಅಪ್ಲಿಕೇಷನ್

-
-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vishwanandini is the name of the Jnanayajna project undertaken by Vishnudasa Nagendracharya to propagate Madhwa philosophy in the form of articles, books and Upanyasas.
Please Wait while comments are loading...