ಶ್ರೀರಾಮಾನುಜರು ಶರಣಾಗತಿಯ ಪ್ರತೀಕ : ತಿರುನಾರಾಯಣ ಶ್ರೀ

Posted By:
Subscribe to Oneindia Kannada

ಬೆಂಗಳೂರು, ಜನವರಿ 30: ಶ್ರೀ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವ ಕುರಿತು ಬೆಂಗಳೂರಿನ ಯಲಚೇನಹಳ್ಳಿಯಲ್ಲಿ ವಿಶ್ವ ಮಂಗಳ ಮಹೋತ್ಸವವನ್ನು ಮೇಲುಕೋಟೆ ಯದುಗಿರಿ ಯತಿರಾಜ ಮಠದ ಯತಿರಾಜ ತಿರುನಾರಾಯಣ ಜೀಯರ್ ನೆರವೇರಿಸಿದರು.

ಕನಕಪುರ ರಸ್ತೆಯಲ್ಲಿರುವ ಜ್ಯೋತಿ ವಿದ್ಯಾಕೇಂದ್ರದಲ್ಲಿ ಶ್ರೀರಾಮಾನುಜಾಚಾರ್ಯರಿಗೆ ವಿಶ್ವಮಂಗಳ ಮಹೋತ್ಸವವನ್ನು ಶ್ರೀ ವೈಷ್ಣವರೆಲ್ಲರೂ ಒಡಗೂಡಿ ಆಚಾರ್ಯರ ಸಹಸ್ರಮಾನ ವರ್ಷದ 1300ನೇ ಸ್ಪರ್ಶ ಪಾದುಕಾ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ವೈಷ್ಣವ ಸಂಪ್ರದಾಯದಂತೆ ಪೂಜಾ ಕಾರ್ಯಗಳು ಜರುಗಿದವು.[ರಾಮಾನುಜರ ಸ್ಮರಣೆಗಾಗಿ ವಿಶ್ಮಮಂಗಳ ಸಹಸ್ರಮಾನೋತ್ಸವ]

Vishwamangala Mahothsava function: Tirunarayan jiyar performed Paduka Pooja

ತಿರುನಾರಾಯಣ ಜೀಯರ್ ಸ್ವಾಮಿಗಳು ಶಂಕರಾಚಾರ್ಯರು, ಮಧ್ವಚಾರ್ಯರ ಕಾಲಮಾನವನ್ನು ನೆನೆಯುತ್ತಾ ರಾಮಾನುಜಾಚಾರ್ಯರ ಜ್ಞಾನ, ಭಕ್ತಿ, ವೈರಾಗ್ಯ ಜೊತೆಗೆ ಶರಣಾಗತಿ, ಪ್ರಪತ್ತಿಯನ್ನು ಉಪದೇಶಿದರು. ಅಲ್ಲದೆ ಆಚಾರ್ಯರು ಕರ್ನಾಟಕದಾದ್ಯಂತ ರಾಜ ಬಿಟ್ಟಿದೇವ(ವಿಷ್ಣುವರ್ಧನ)ನ ಸಹಾಯದಿಂದ 18 ಪಂಗಡಗಳಾಗಿದ್ದ ಎಲ್ಲ ಸಮುದಾಯದ ಒಗ್ಗೂಡಿಸಿದ್ದರ ಬಗ್ಗೆ ತಿಳಿಹೇಳಿದರು.

Vishwamangala Mahothsava function: Tirunarayan jiyar performed Paduka Pooja

ರಾಜನ ಸಹಾಯದಿಂದ ಎಲ್ಲ ಜಾತಿಯವರಿಗೂ ಸಲ್ಲುವ ಕೆರೆ ನಿರ್ಮಾಣ, ಆಲಯ ಪ್ರವೇಶ ಸುಧಾರಣೆಗಳ ಬಗ್ಗೆ ವಿವರಿಸಿದರು.

ಇದೇ ಮಾದರಿಯಲ್ಲಿ ಫೆಬ್ರವರಿ 18 ರಂದು ರಾಮಾನುಜಾಚಾರ್ಯರ ಪಾದುಕಾ ಪೂಜೆಯನ್ನು ಶೇಷಾದ್ರಿಪುರಂನಲ್ಲಿ ನೆರವೇರಿಸಲಾಗುವುದು ಎಂದು ಶ್ರೀಗಳು ಘೋಷಿಸಿದರು.

Vishwamangala Mahothsava function: Tirunarayan jiyar performed Paduka Pooja

ಇನ್ನು ಸಹಸ್ರಮಾನ ಸಂದರ್ಭದಲ್ಲಿ ಶ್ರೀರಾಮಾನುಜಾಚಾರ್ಯರ ಜೀವನ ಚರಿತ್ರೆಯನ್ನು ಒಳಗೊಂಡ ದೃಶ್ಯ ಮುದ್ರಿಕೆ ಮತ್ತು ದಿನದರ್ಶಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vishwamangala Mahothsava function organized by Shri Ramanujacharya sahasramanothsava samithi, Yalachenahalli of Bengaluru. The Melukote Tirunarayan jiyar performed Paduka Pooja in this progarm.
Please Wait while comments are loading...