ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈರಲ್ ವಿಡಿಯೋ:ಕೊಡಗಿನ ಕಣ್ಣೀರಿಗೆ ಮಿಡಿದ ಇನ್ಫೋಸಿಸ್ ಸುಧಾಮೂರ್ತಿ

|
Google Oneindia Kannada News

Recommended Video

Karnataka Floods : ವೈರಲ್ ಆಗ್ತಿದೆ ಇನ್ಫೋಸಿಸ್ ಸುಧಾಮೂರ್ತಿ ವೀಡಿಯೋ.! | Oneindia Kannada

ಬೆಂಗಳೂರು, ಆಗಸ್ಟ್ 21: ಹಣಸಂಪಾದಿಸುವುದು ದೊಡ್ಡದಲ್ಲ, ಆದರೆ ಒಂದು ಪ್ರತಿಷ್ಠಿತ ಕಂಪನಿಯಲ್ಲಿ, ಆಯಕಟ್ಟಿನ ಹುದ್ದೆಯಲ್ಲಿದ್ದೂ ಮಾನವೀಯತೆ ಮರೆಯದೇ ಬದುಕುವುದು, ಕಣ್ಣೀರಿಗೆ ಮಿಡಿಯುವುದು ಆದರ್ಶದ ಬದುಕು.

ಅಂಥ ಆದರ್ಶದ ಬದುಕಿಗೆ ಒಂದು ಅತ್ಯುತ್ತಮ ಉದಾಹರಣೆ ಇನ್ಫೋಸಿಸ್ ಪ್ರತಿಷ್ಠಾನದ ಚೇರ್ ಪರ್ಸನ್ ಸುಧಾಮೂರ್ತಿ. ಪ್ರವಾಹಕ್ಕೆ ತುತ್ತಾಗಿ, ಸಂಕಷ್ಟ ಅನುಭವಿಸುತ್ತಿರುವ ಕೊಡಗಿನ ಜನರಿಗೆ ಪರಿಹಾರ ಒದಗಿಸಲು ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಸಜ್ಜಾಗಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸಲು ತಾವೇ ಖುದ್ದಾಗಿ ಸಾಮಗ್ರಿಗಳನ್ನು ಜೋಡಿಸುತ್ತಿರುವ ಸುಧಾಮೂರ್ತಿ ಅವರ ಸರಳತೆ, ಸಜ್ಜನಿಕೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪರಿಹಾರನಿಧಿಗೆ 1ಎಕರೆ ಜಮೀನನ್ನೇ ಬರೆದುಕೊಟ್ಟ ರೈತನ ಮಕ್ಕಳು!ಪರಿಹಾರನಿಧಿಗೆ 1ಎಕರೆ ಜಮೀನನ್ನೇ ಬರೆದುಕೊಟ್ಟ ರೈತನ ಮಕ್ಕಳು!

"ಇವರನ್ನು ನೋಡಿ ಕಲಿಯೋದು ತುಂಬಾ ಇದೆ.ನೀವು ಗ್ರೇಟ್ ಅಮ್ಮಾ" ಎಂದು ಹಲವರು ಸುಧಾಮೂರ್ತಿ ಅವರ ನಡೆಯನ್ನು ಶ್ಲಾಘಿಸಿದ್ದಾರೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಕೊಡಗಿನಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಸಾವಿರಾರು ಜನ ನಿರಾಶ್ರಿತರಾಗಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯ ನಡೆಯುತ್ತಿದೆ. ರಾಜ್ಯದಾದ್ಯಂತ ಜನರು ಕೊಡಗಿನ ಜನರ ಕಣ್ಣೀರಿಗೆ ಮರುಗಿದ್ದಾರೆ, ಮಿಡಿದಿದ್ದಾರೆ. ಮಕ್ಕಳು, ವೃದ್ಧರೆನ್ನದೆ ಎಲ್ಲರೂ ತಮ್ಮ ಕೈಲಾದಷ್ಟು ನೆರವು ನೀಡಿದ್ದಾರೆ.

Viral Video: Infosys Sudha Murthy prepares to help Kodagu flood victims

ಕೊಡಗು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯ: ಸಿಎಂಕೊಡಗು ಮತ್ತೆ ಕಟ್ಟಲು ಸರ್ಕಾರದಿಂದ ಸಮರೋಪಾದಿ ಕಾರ್ಯ: ಸಿಎಂ

ಕೇವಲ ಲಾಭ ಗಳಿಸುವುದಷ್ಟೇ ಒಂದು ಕಂಪನಿಯ, ಒಂದು ಉದ್ಯಮಿಯ ಗುರಿಯಲ್ಲ, ಬಂದ ಹಣವನ್ನು ಮಾನವೀಯ ಅಂತಃಕರಣದಿಂದ ಉತ್ತಮ ಕೆಲಸಕ್ಕಾಗಿ ವಿನಿಯೋಗಿಸುವುದೂ ಅಷ್ಟೇ ಮುಖ್ಯ ಎಂಬುದನ್ನು ಸುಧಾಮೂರ್ತಿ ತೋರಿಸಿಕೊಟ್ಟಿದ್ದಾರೆ.

English summary
Viral video: Infosys chairperson and Kannada writer Sudha Murthy is preparing to help victims of Kodagu floods through her Infosys foundation. Here is a viral video of her simplicity,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X