ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರದಲ್ಲಿ ಅಕ್ರಮ : ಸರ್ಕಾರಕ್ಕೆ ವರದಿ ಸಲ್ಲಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 14 : ಭಾರೀ ಚರ್ಚೆಗೆ ಕಾರಣವಾಗಿದ್ದ ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗಿದೆ. 2 ಸಾವಿರಕ್ಕೂ ಅಧಿಕ ಪುಟಗಳ ವರದಿಯನ್ನು ಸಮಿತಿ ನೀಡಿದೆ.

ಪರಪ್ಪನ ಅಗ್ರಹಾರ ಜೈಲಲ್ಲಿ ಅತ್ಯಾಚಾರಿಯ ಸಾಮ್ರಾಜ್ಯ: ಡಿ ರೂಪ ಬಿಚ್ಚಿಟ್ಟ ಸತ್ಯಪರಪ್ಪನ ಅಗ್ರಹಾರ ಜೈಲಲ್ಲಿ ಅತ್ಯಾಚಾರಿಯ ಸಾಮ್ರಾಜ್ಯ: ಡಿ ರೂಪ ಬಿಚ್ಚಿಟ್ಟ ಸತ್ಯ

ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ತನಿಖಾ ವರದಿಯನ್ನು ಗೃಹ ಇಲಾಖೆಗೆ ಸಲ್ಲಿಸಿದ್ದಾರೆ. ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಅವರಿಗೆ ವರದಿ ಹಸ್ತಾಂತರ ಮಾಡಲಾಗಿದೆ.

VIP treatment in Parappana Agrahara : Committee submits report

'ವರದಿ ನೀಡುವುದು ಮಾತ್ರ ನನ್ನ ಕೆಲಸ. ಅದರಲ್ಲಿ ಏನಿದೆ? ಎಂಬುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಆ ವರದಿಯನ್ನು ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ' ಎಂದು ವಿನಯ್ ಕುಮಾರ್ ಹೇಳಿದ್ದಾರೆ.

ಲಂಚ, ಡ್ರಗ್ಸ್, ಲೈಂಗಿಕತೆ : ಏನಿದು ಪರಪ್ಪನ ಅಗ್ರಹಾರ ಜೈಲಿನ ಕಥೆ?ಲಂಚ, ಡ್ರಗ್ಸ್, ಲೈಂಗಿಕತೆ : ಏನಿದು ಪರಪ್ಪನ ಅಗ್ರಹಾರ ಜೈಲಿನ ಕಥೆ?

ಕಾರಾಗೃಹ ಇಲಾಖೆಗಳ ಅಂದಿನ ಡಿಐಜಿ ರೂಪ ಅವರು ಅಂದು ಡಿಜಿಪಿ ಎಚ್.ಎನ್.ಸತ್ಯನಾರಾಯಣರಾವ್ ಅವರಿಗೆ ಪರಪ್ಪನ ಅಗ್ರಹಾರದಲ್ಲಿ ಅಕ್ರಮ ನಡೆಯುತ್ತಿದೆ ಎಂದು ವರದಿ ನೀಡಿದ್ದರು.

ಉಗ್ರನಿಗಾಗಿ ಜೈಲೊಳಗೆ ಮೊಬೈಲ್ ಸಾಗಿಸುತ್ತಿದ್ದ ಕಾನ್ ಸ್ಟೇಬಲ್ ಬಂಧನಉಗ್ರನಿಗಾಗಿ ಜೈಲೊಳಗೆ ಮೊಬೈಲ್ ಸಾಗಿಸುತ್ತಿದ್ದ ಕಾನ್ ಸ್ಟೇಬಲ್ ಬಂಧನ

ಕಾರಾಗೃಹದ ನಿಯಮಗಳನ್ನು ಮೀರಿ ವಿ.ಕೆ.ಶಶಿಕಲಾ ನಟರಾಜನ್ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ. ಈ ಕೆಲಸಕ್ಕೆ 2 ಕೋಟಿ ರೂ. ಲಂಚ ನೀಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ಈ ವರದಿ ಮಾಧ್ಯಮಗಳ ಮೂಲಕ ಬಹಿರಂಗವಾದ ಬಳಿಕ ಭಾರೀ ಚರ್ಚೆ ನಡೆದಿತ್ತು. ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 13ರಂದು ವಿನಯ್ ಕುಮಾರ್ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿದ್ದರು.

English summary
The committee led by retired IAS officer Vinay Kumar has submitted its report to home ministry. Committee formed to inquiry about VIP treatment for Shashikala Natarajan and others in Parappana Agrahara jail, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X