ದ್ರಾವಿಡ್, ಪಡುಕೋಣೆಯನ್ನು ವಂಚಿಸಿದ್ದ ಐವರು ಪೊಲೀಸರ ಅತಿಥಿ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 12: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಅಧಿಕ ಪ್ರಮಾಣದಲ್ಲಿ ಲಾಭಾಂಶ ನೀಡುವುದಾಗಿ ನಂಬಿಸಿ 300ಕ್ಕೂ ಹೆಚ್ಚು ಕೋಟಿ ವಂಚಿಸಿದ್ದ ಐವರನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಹುಲ್ ದ್ರಾವಿಡ್, ಪಡುಕೋಣೆ ಸೇರಿ ಅಂದಾಜು 800ಜನರಿಂದ 300ಕ್ಕೂ ಹೆಚ್ಚು ಕೋಟಿ ಹಣವನ್ನು ವಂಚಿಸಿದ್ದರು. ಯಶವಂತಪುರದ ರಾಘವೇಂದ್ರ ಶ್ರೀನಾಥ್ (45), ನರಸಿಂಹ ಮೂರ್ತಿ(50), ಪ್ರಹ್ಲಾದ್ (48), ನಾಗರಾಜ್ (47) ಮತ್ತು ಸುರೇಶ್ (48) ಬಂಧಿತರು.

ಪೋಲಿಸರನ್ನೇ ದೋಚುತ್ತಿದ್ದ ಭೂಪ ಈಗ ಕಂಬಿಗಳ ಹಿಂದೆ

ರಾಘವೇಂದ್ರ ಶ್ರೀನಾಥ್ 2003ರಲ್ಲಿ ಯಶವಂತಪುರದ ಎಪಿಎಂಸಿ ಯಾರ್ಡ್ ನಲ್ಲಿ ವಿಕ್ರಂ ಇನ್‌ವೆಸ್ಟ್‌ಮೆಂಟ್ ಎಂಬ ಷೇರು ಮಾರುಕಟ್ಟೆ ಕಂಪನಿ ತೆರೆದಿದ್ದ, ಆದರೆ, ಈ ಕಂಪನಿಯ ಹೆಸರು ಮಾತ್ರ ನೋಂದಣಿ ಆಗಿರಲಿಲ್ಲ.

Vikram investments cheated many investors including Dravid and Padukone

ಶ್ರೀಮಂತ ವರ್ಗದ ಒಡನಾಟ ಹೊಂದಿದ್ದ ನರಸಿಂಹ ಮೂರ್ತಿ, ಪ್ರಹ್ಲಾದ್, ನಾಗರಾಜ್ ಮತ್ತು ಸುರೇಶ್ ಎಂ ಎಲ್ ಐಸಿ ಏಜೆಂಟ್ ಗಳನ್ನು ರಾಘವೇಂದ್ರ ಪರಿಚಯ ಮಾಡಿಕೊಂಡಿದ್ದ. ಶ್ರೀಮಂತರಿಂದ ತಮ್ಮ ಕಂಪನಿಯಲ್ಲಿ ಕೋಟ್ಯಂತರ ರೂ ಹೂಡಿಕೆ ಮಾಡಿಸಿದರೆ ಶೇ.12.5 ಕಮಿಷನ್ ನೀಡುವುದಾಗಿ ಆಮಿಷವೊಡ್ಡಿದ್ದ.

2014ರಲ್ಲಿ ನೂರಾರು ಉದ್ಯಮಿಗಳು ತಾವೇ ಮುಂದೆಬಂದು ಈ ಕಂಪನಿಯಲ್ಲಿ ಕೋಟ್ಯಂತರ ಹಣ ಹೂಡಿಕೆ ಮಾಡಿದ್ದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಸಿದ್ದರಾಮಯ್ಯನವರನ್ನ ತರಾಟೆಗೆ ತೆಗೆದುಕೊಂಡ ಎಚ್ ಡಿ ಕುಮಾರಸ್ವಾಮಿ | Oneindia Kannada

   ವಂಚನೆ ಹೇಗೆ: ನೀವು ಹಾಕಿದ ಹಣವನ್ನು ಕಂಪನಿ ಚಿನ್ನದ ಮೇಲೆ ಕಮಾಡಿಟಿ ಷೇರಿನ ಮೂಲಕ ಬಂಡವಾಳ ಹೂಡುತ್ತದೆ. ಚಿನ್ನದ ಮೇಲೆ ಏರಿಕೆಯಾದರೆ ಕಂಪನಿ ಸ್ವಲ್ಪ ಪ್ರಮಾಣದ ಲಾಭ ಪಡೆದು ಉಳಿದ ಲಾಭಾಂಶವನ್ನು ನಿಮಗೆ ನೀಡುತ್ತದೆ. 4 ಕೋಟಿ ರೂ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ 5.50ಕೋಟಿ ರೂ ಬರಲಿದೆ ಎಂದು ಗ್ರಾಹಕರನ್ನು ಏಜೆಂಟ್ ಗಳು ನಂಬಿಸುತ್ತಿದ್ದರು.

   ಮಾರ್ಚ್ 2ರಂದು ಆರೋಪಿಗಳ ವಿರುದ್ಧ ಬನಶಂಕರಿ ಠಾಣೆಗೆ ಬಾಲಾಜಿ ದೂರು ನೀಡಿದ್ದರು. ಪೊಲೀಸರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ 800 ಮಂದಿಯಿಂದ 300ಕೋಟಿ ರೂ.ಗಳಿಗೂ ಅಧಿಕ ಹಣ ಪಡೆದು ವಂಚಿಸಿರುವುದಾಗಿ ಅತ್ಯ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Vikram investment, a Bengaluru based investment has cheated hundreds of investors including Indian cricketer Rahul Dravid and former international Badminton player Prakash Padukone.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ